Advertisement
ಈ ಪೈಕಿ ದಾಖಲೆಗಳಿಲ್ಲದ 18 ಸಾವಿರ ಮಂದಿಯನ್ನು ಚಾರ್ಟರ್ಡ್ ಫ್ಲೈಟ್ಗಳ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತದೆ. ಅಮೆರಿಕದಲ್ಲಿ ಅಂದಾಜು 15 ಲಕ್ಷ ಅಕ್ರಮ ವಲಸಿಗರಿದ್ದಾರೆ ಎನ್ನಲಾಗಿದ್ದು, ಈ ಪೈಕಿ ನೆರೆಯ ಮೆಕ್ಸಿಕೋದವರು ಮೊದಲ ಸ್ಥಾನದಲ್ಲಿದ್ದಾರೆ. ಅನಂತರ ಎಲ್ ಸಾಲ್ವಡೋರ್ ಮತ್ತು ಭಾರತೀಯರಿದ್ದಾರೆ.
ವಿವಿಧ ಆರೋಪಗಳನ್ನು ಹೊತ್ತು ಜೈಲು ಸೇರಿ ರುವ 1,500 ಮಂದಿಗೆ ಒಂದೇ ದಿನ ಅಮೆರಿಕ ನಿರ್ಗಮಿತ ಅಧ್ಯಕ್ಷ ಬೈಡೆನ್ ಕ್ಷಮಾದಾನ ನೀಡಿದ್ದಾರೆ. ಈ ಪೈಕಿ ನಾಲ್ವರು ಭಾರತೀಯ-ಅಮೆರಿಕನ್ನರೂ ಸೇರಿದ್ದಾರೆ. ವಂಚನೆ, ಡ್ರಗ್ಸ್ ನಿಯಮ ಉಲ್ಲಂಘನೆ, ಅಕ್ರಮ ಹಣಕಾಸು ವರ್ಗಾವಣೆ ಯಂಥ ಪ್ರಕರಣಗಳನ್ನು ಎದುರಿಸುತ್ತಿ ರುವ ಮೀರಾ ಸಚ್ ದೇವಾ, ಬಾಬು ಭಾಯಿ ಪಟೇಲ್, ಕೃಷ್ಣ ಮೋಟೆ ಮತ್ತು ವಿಕ್ರಂ ದತ್ತಾ ಕ್ಷಮೆಗೆ ಪಾತ್ರರಾದ ಭಾರತೀಯ ಮೂಲದವರು.