Advertisement

ಯೋಧರಿಗೆ ಗೌರವ ಸಲ್ಲಿಕೆ ಎಲ್ಲರ ಕರ್ತವ್ಯ

04:06 PM Oct 22, 2021 | Team Udayavani |

ತಿಪಟೂರು: ದೇಶದಲ್ಲಿ ಶಾಂತಿ ನೆಲೆಸಿರುವುದರ ಜೊತೆಗೆ ನಾವೆಲ್ಲರೂ ನೆಮ್ಮದಿ ಮತ್ತು ಶಾಂತಿಯುತ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಚಳಿ, ಬಿಸಿಲು, ಮಳೆ ಯಲ್ಲಿ ಜೀವದ ಹಂಗು ತೊರೆದು ಹೋರಾಡುವ ಯೋಧರು.

Advertisement

ಅವರ ಮಹಾನ್‌ ಕೆಲಸಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ವಾಗಿದೆ ಎಂದು ಜನಸ್ಪಂದನ ಟ್ರಸ್ಟ್‌ ಅಧ್ಯಕ್ಷ ಸಿ.ಬಿ. ಶಶಿಧರ್‌ ತಿಳಿಸಿದರು. ನಗರದ ಜನಸ್ಪಂದನ ಕಚೇರಿಯಲ್ಲಿ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಪಾತ್ರರಾಗಿರುವ ತಾಲೂಕಿನ ಕೊಬ್ಬರಿ ದೊಡ್ಡಯ್ಯನಪಾಳ್ಯದ ಯೋಧ ಹವಾ ಲ್ದಾರ್‌ ಜಯರಾಮ್‌ ನಾಯಕ್‌ ಅವರಿಗೆ ಸನ್ಮಾನಿಸಿ ಮಾತನಾಡಿ, ಯೋಧ ಜಯರಾಮ್‌ ನಾಯಕ್‌ 2020ರ ಜ.20ರಂದು ಕುಲ್ಗಂಮ್‌ ಜಿಲ್ಲೆಯ ಲಕ್ಕಡಿಪುರ್‌ ಗ್ರಾಮದಲ್ಲಿ 18ನೇ ಬೆಟಾಲಿಯನ್‌ನ 2ನೇ ಕಮಾಂಡಿಗ್‌ ಆಫೀಸರ್‌ ಮಾಯಾಂಕ್‌ ತಿವಾರಿಯ ಸಹಚರನಾಗಿ ಉಗ್ರರ ಮೇಲೆ ಗುಂಡಿನ ಮಳೆಗರೆದು ಉಗ್ರರನ್ನು ಸೆದೆಬಡೆದು ಅವರು ತೋರಿಸಿದ ಸಾಹಸಕ್ಕೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದು.

ಜ.26ರಂದು ನಡೆಯುವ ಗಣ ರಾಜ್ಯೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅದಲ್ಲದೆ, 2-3 ಬಾರಿ ಅವರು ಉಗ್ರರ ಸದೆಬಡಿ ಯುವ ಕೆಲಸದಲ್ಲಿ ಕೈಜೋಡಿಸಿದ್ದು ಸಾಹಸ ಮೆರೆದಿ ರು ವುದಕ್ಕೆ ಸೈನ್ಯದ ಅಧಿಕಾರಿಗಳು ಪ್ರಶಂಸಿದ್ದಾರೆ. ಅವರಲ್ಲಿರುವ ದೇಶದ ಬಗೆಗಿನ ತುಡಿತ ಯುವಕರಿಗೆ ಆದರ್ಶವಾಗಿದೆ ಎಂದರು.

ಇದನ್ನೂ ಓದಿ:- ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

 ಸೈನಿಕರ ಸಾವಿನ ಬಗ್ಗೆ ತಿಳಿಯಲ್ಲ: ಸನ್ಮಾನ ಸ್ವೀಕರಿಸಿದ ಯೋಧ ಹವಾಲ್ದಾರ್‌ ಜಯರಾಮ್‌ನಾಯಕ್‌ ಮಾತನಾಡಿ, ಬೆಟಾಲಿಯನ್‌ನಲ್ಲಿ ಉಗ್ರರ ಜೊತೆ ಹೋರಾಡುವಾಗ ನಮ್ಮ 10 ಸಹಚರರನ್ನು ಕಳೆದುಕೊಂಡೆವು. ಬೆಳಗ್ಗೆ ತಿಂಡಿ ತಿಂದು ಜೊತೆ ಜೊತೆಯಲ್ಲಿಯೇ ಹೋದ ನಾವುಗಳು ನಮ್ಮ ಸಹಚರರನ್ನು ಉಗ್ರರು ಬಲಿತೆಗೆದುಕೊಂಡರು. ಸೈನಿಕರಿಗೆ ಸಾವು ಹೇಗೆ, ಎಲ್ಲಿ ಸಂಭವಿಸುತ್ತದೆ ಎಂದು ಇಲ್ಲಿ ಯಾರಿಗೂ ತಿಳಿದಿರುವುದಿಲ್ಲ ಎಂದು ತಮ್ಮ ಕರ್ತವ್ಯದ ಬಗ್ಗೆ ತಿಳಿಸಿದರು.

Advertisement

ತಂದೆಯ ಕೆಲಸ ನನಗೆ ಹೆಮ್ಮೆ: ಜಯರಾಮ್‌ ನಾಯಕ್‌ ಪುತ್ರಿ ಧನುಷ್‌ ಮಾತನಾಡಿ, ನನ್ನ ತಂದೆಯ ಕೆಲಸ ನನಗೆ ಹೆಮ್ಮೆ ತಂದಿದೆ. ಅವರು ಪದಕ ಪಡೆದಿರುವ ಸಂತೋಷಕ್ಕೆ ಪಾರವೇ ಇಲ್ಲ. ಆದರೆ, ಅವರು ಇಲ್ಲಿಗೆ ಬಂದಾಗ ಖುಷಿ ಇರುತ್ತದೆ. ಮತ್ತೆ ಕರ್ತವ್ಯಕ್ಕೆ ಹೋದಾಗ ನೋವು, ಸಂತೋಷ ಎರಡೂ ಆಗುತ್ತಿದ್ದು, ದೇವರು ಯಾವಾಗಲೂ ಅವರ ಜೀವ ರಕ್ಷಿಸಲಿ ಎಂದರು.

 ಕಾಲೇಜಿಗೆ ಹೆಮ್ಮೆಯ ಸಂಗತಿ: ನಿವೃತ್ತ ಶಿಕ್ಷಕ ಷಣ್ಮು ಖಪ್ಪ ಮಾತನಾಡಿ, ಯೋಧ ಜಯರಾಮ್‌ನಾಯಕ್‌ ನಮ್ಮ ಶಿಷ್ಯನಾಗಿರುವುದು ನಾನು ಕೆಲಸ ಮಾಡಿದ ನಗರದ ಬಾಲಕರ ಪದವಿಪೂರ್ವ ಕಾಲೇಜಿಗೆ ಹಾಗೂ ನನಗೆ ಹೆಮ್ಮೆಯ ಸಂಗತಿ. ಯೋಧರಿಲ್ಲದೆ ನಾವಿಲ್ಲ, ಅವರ ಸೇವೆ ನಮಗೆ ನೇರವಾಗಿ ಕಾಣುವುದಿಲ್ಲ.

ಅವರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಕಡಿಮೆಯೇ ಎಂದು ಯೋಧರ ಸೇವೆಯ ಬಗ್ಗೆ ಸ್ಮರಿಸಿದರು.ಹವಾಲ್ದಾರ್‌ ಜಯ ರಾಮ್‌ನಾಯಕ್‌ ಸಹಪಾಠಿಗಳಾದ ರೇಣುಕಯ್ಯ ಮತ್ತಿತರರು ಮಾತನಾಡಿದರು. ಯೋಧ ಜಯ ರಾಮ್‌ ನಾಯಕ್‌ ತಂದೆ ಮೂರ್ತಿನಾಯಕ್‌, ಸಹೋದರ ಸದಾಶಿವಯ್ಯ, ಸಹೋದರಿ ರುಕ್ಮಿಣಿ, ನಿವೃತ್ತ ಸೈನಿಕ ಪರಮಶಿವಯ್ಯ, ಮುಖಂಡರಾದ ನಾಗತೀಹಳ್ಳಿ ಕೃಷ್ಣಮೂರ್ತಿ, ಗಂಗಾನಾಯ್ಕ, ಬಾಬು ನಾಯಕ್‌, ಯುವ ಕಾಂಗ್ರೆಸ್‌ ಮುಖಂಡ ಶರತ್‌ ಕಲ್ಲೇಗೌಡನ ಪಾಳ್ಯ, ಗೌತಮ್‌, ಹರೀಶ್‌, ಖಲೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next