Advertisement

ಅನಾರೋಗ್ಯದಿಂದ ಯೋಧ ಸಾವು : ಸ್ವಗ್ರಾಮದಲ್ಲಿ ನೆರವೇರಿದ ಅಂತ್ಯಕ್ರಿಯೆ

08:55 PM Aug 21, 2021 | Team Udayavani |

ಬೈಲಹೊಂಗಲ: ಅನಾರೋಗ್ಯದಿಂದ ನಿಧನರಾದ ತಾಲೂಕಿನ ಮಾಸ್ತಮರರ್ಡಿ ಗ್ರಾಮದ ವೀರಯೋಧ ಬಾಬಾ ಸಿದ್ದಪ್ಪ ಈರೈನ್ನವರ (30) ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Advertisement

ಮೃತ ಯೋಧ 2007 ರಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಬ್ಯಾಸ ಪೂರೈಸಿ  2011ರಲ್ಲಿ ಅಟಲರಿ ಓಪಿಎಸ್ ವೈರಲೆಸ್ ಆಪರೇಟರ್ ಆಗಿ ಸೇನೆಗೆ ಸೇರಿದರು. ನಂತರ 110 ರೆಜಿಮೆಂಟ್ ದಿಲ್ಲಿಯಲ್ಲಿ ಸೇವೆ ಪ್ರಾರಂಭಿಸಿ ವಿವಿಧೆಡೆ ಉತ್ತಮ ಕಾರ್ಯ ಮಾಡಿದ್ದಾರೆ 10 ವರ್ಷ 4 ತಿಂಗಳ ಕಾಲ ದೇಶ ಸೇವೆ ಸಲ್ಲಿಸಿರುವ ಸಿದ್ದಪ್ಪನಿಗೆ ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಕಾಲಿಗೆ ಗುಂಡು ತಗುಲಿತ್ತು. ಕಳೆದ ಒಂದು ವರ್ಷದಿಂದ ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ (ಆ.20) ಮೃತಪಟ್ಟಿದ್ದರು.’

ಬೆಳಗಾವಿ ಮರಾಠಾ ಇನ್‌ಪೆಂಟರಿ ಯೋಧರು ಬೆಳಗಾವಿಯಿಂದ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತಂದು ಹೂಹಾರ ಅರ್ಪಿಸಿ ಗೌರವ ಸಲ್ಲಿಸಿದರು.

ಮೃತರಿಗೆ ತಂದೆ, ತಾಯಿ, ಸಹೋದರ,ಸಹೋದರಿ, ಅಪಾರ ಬಂಧುಗಳು ಇದ್ದಾರೆ. ತಹಶೀಲ್ದಾರ ಬಸವರಾಜ ನಾಗರಾಳ, ಜಿ.ಪಂ ಸದಸ್ಯ ನಿಂಗಪ್ಪಅರಕೇರಿ, ಪಿಎಸ್‌ಐ ವಾಯ್.ಎಲ್.ಶಿಗಿಹಳ್ಳಿ, ಗ್ರಾ.ಪಂ ಅಧ್ಯಕ್ಷ ಸಿದ್ದಪ್ಪ ಮಿಂಡೊಳ್ಳಿ, ನಿಂಗಪ್ಪ ಪೋತಲಿ , ಯುವ ದುರೀಣ ನಿಂಗನಗೌಡ ದೊಡ್ಡಗೌಡರ, ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ.ಬಿ.ಅಂಬಲಿ , ಗ್ರಾಮ ಲೆಕ್ಕಾಧಿಕಾರಿ ಬಿ.ಬಿ.ಕೆರಕ್ಕನವರ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next