Advertisement
ಈ ವಾರಂಟನ್ನು ಕರ್ಣನ್ ಅವರಿಗೆ ತಲುಪಿಸಿ ಅವರನ್ನು ಮಾರ್ಚ್ 31ರಂದು ತನ್ನ ಎದುರು ಹಾಜರು ಪಡಿಸುವಂತೆ ಸುಪ್ರೀಂ ಕೋರ್ಟ್ ಕೋಲ್ಕತಾ ಪೊಲೀಸ್ ಮುಖ್ಯಸ್ಥರಿಗೆ ಆದೇಶ ಹೊರಡಿಸಿದೆ.
Related Articles
Advertisement
ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟಿನ ಹಾಲಿ ನ್ಯಾಯಾಧೀಶರ ವಿರುದ್ಧ ಕೋರ್ಟ್ ನಿಂದನೆಯ ಪ್ರಕರಣ ದಾಖಲಾಗಿದ್ದು ಜಸ್ಟಿಸ್ ಕರ್ಣನ್ ಅವರನ್ನು ಕಳೆದ ಫೆಬ್ರವರಿಯಲ್ಲಿ ತನ್ನ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಈಗಾಗಲೇ ಜಸ್ಟಿಸ್ ಕರ್ಣನ್ ಅವರ ಕೈಯಿಂದ ನ್ಯಾಯಾಂಗ ಮತ್ತು ಆಡಳಿತಾತ್ಮಕ ಕಾರ್ಯಭಾರವನ್ನು ಹಿಂಪಡೆದುಕೊಂಡಿದೆ.
ಸುಪ್ರೀಂ ಕೋರ್ಟಿಗೆ ಬರೆದ ಪತ್ರದಲ್ಲಿ ಜಸ್ಟಿಸ್ ಕರ್ಣನ್ ಅವರು ತಾನೋರ್ವ ದಲಿತನಾಗಿರುವುದಕ್ಕೆ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂದು ದೂರಿದ್ದರು.
ಜಸ್ಟಿಸ್ ಕರ್ಣನ್ ವಿರುದ್ಧ ಸಹೋದ್ಯೋಗಿ ನ್ಯಾಯಾಧೀಶರು ದೂರು ಸಲ್ಲಿಸಿದ ಕಾರಣ, ಕರ್ಣನ್ ಅವರನ್ನು ಮದ್ರಾಸ್ ಹೈಕೋರ್ಟಿನಿಂದ ಕಲ್ಕತಾ ಹೈಕೋರ್ಟಿಗೆ ವರ್ಗಾಯಿಸಲಾಗಿತ್ತು.