Advertisement
ಶವರ್ಮಾ ಸೇವಿಸಿ ಅನಾರೋಗ್ಯಕ್ಕೆ ಒಳಗಾದ ಪ್ರಕರಣದ ಹಿನ್ನೆಲೆಯಲ್ಲಿ ಇಲಾ ಖೆಯು ರಾಜ್ಯದ ಹಲವು ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿದ್ದ ಶವರ್ಮಾ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿತ್ತು. ಕೆಲವು ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾಗಿದೆ. ಈ ಬಗ್ಗೆ ಕಠಿನ ನಿಲುವು ತೆಗೆದುಕೊಂಡಿರುವ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಆಹಾರ ತಯಾರಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬಳ್ಳಾರಿ, ಬೆಳಗಾವಿ ಜಿಲ್ಲೆಗಳ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ 17 ಮಾದರಿಗಳಲ್ಲಿ 9 ಅಂಗಡಿಗಳಲ್ಲಿ ತಯಾರಿಸಿದ ಶವರ್ಮ ಸೇವಿಸಲು ಯೋಗ್ಯವಾಗಿದೆ. ಉಳಿದ 8ರಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಕಂಡು ಬಂದಿದ್ದು, ಇದು ಸೇವನೆಗೆ ಅಸುರಕ್ಷಿತ ಎಂದು ವರದಿಯಾಗಿದೆ. ಆಹಾರ ತಯಾರಿಕೆ ಸಂದರ್ಭ ನೈರ್ಮಲ್ಯದ ಕೊರತೆ, ದೀರ್ಘಕಾಲದ ಸಂಗ್ರಹಣೆ, ವಿತರಣೆ ಸಂದರ್ಭದಲ್ಲಿನ ನೈರ್ಮಲ್ಯತೆಯಿಂದಾಗಿ ಆಹಾರದಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಶವರ್ಮಾ ತಯಾರಕರು ಆಹಾರದ ತಯಾರಿ, ವಿತರಣೆ ಸಂದರ್ಭದಲ್ಲಿ ಪೂರ್ಣ ನೈರ್ಮಲ್ಯ ಹಾಗೂ ಆಹಾರ ಸುರಕ್ಷೆ ಕಾಯ್ದೆ ಅನ್ವಯ ಶವರ್ಮಾಗಳನ್ನು ಪ್ರತಿನಿತ್ಯ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಬೇಕು ಎಂದು ಸೂಚನೆ ನೀಡಿದೆ.
Related Articles
Advertisement
ಸಲಹೆಗಳೇನು?-ಶವರ್ಮಾ ತಯಾರಕರು ತಯಾರಿ, ಸಂಗ್ರಹ, ವಿತರಣೆ ವೇಳೆ ನೈರ್ಮಲ್ಯ ಕಾಪಾಡಬೇಕು
– ಸಾರ್ವಜನಿಕರು ಎಫ್ಎಸ್‌ಎಸ್‌ಎಐ ನೋಂದಾಯಿತ ಮಾರಾಟ ಗಾರರಿಂದಲೇ ಖರೀದಿಸಬೇಕು