Advertisement

ತಾಪಮಾನ ಏರಿಕೆಯಿಂದ ಮಳೆಯಲ್ಲಿ ಬದಲಾವಣೆ

06:41 PM Oct 05, 2021 | Team Udayavani |

ಮೂಡಿಗೆರೆ: ತಾಲೂಕಿನ ಜಿ.ಹೊಸಳ್ಳಿಗ್ರಾಮದಲ್ಲಿ ಮೂಡಿಗೆರೆ ಕೃಷಿ ವಿಜ್ಞಾನಕೇಂದ್ರದ ವತಿಯಿಂದ ಹವಾಮಾನ ಸ್ಥಿತಿಸ್ಥಾಪಕತ್ವ ಪ್ರಭೇಧಗಳು, ತಂತ್ರಜ್ಞಾನಗಳುಹಾಗೂ ವಿಜ್ಞಾನಿಗಳೊಂದಿಗೆ ಸಂವಾದಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದವಿಜ್ಞಾನಿ ಡಾ|ಆರ್‌. ಗಿರೀಶ್‌ ಮಾತನಾಡಿ,ಇಂದಿನ ದಿನಗಳಲ್ಲಿ ವಾತಾವರಣದಲ್ಲಿನತಾಪಮಾನ ಏರಿಕೆಯಿಂದಾಗಿ ಮಳೆ ಬೀಳುವರೀತಿಯಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ರೈತರುಹವಾಮಾನಕ್ಕೆ ಅನುಗುಣವಾಗಿ ತಮ್ಮ ಕೃಷಿಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಮಾಡಿಕೊಳ್ಳುವುದು ಹೆಚ್ಚು ಸೂಕ್ತ ಎಂದರು.ತೋಟಗಾರಿಕಾ ಬೆಳೆಗಳಲ್ಲಿ ವಿವಿಧತಳಿಗಳ ಮೇಲೆ ಸಂಶೋಧನೆಗಳನ್ನು ನಡೆಸಿಹವಾಮಾನಕ್ಕೆ ತಕ್ಕಂತೆ ತಳಿಗಳನ್ನು ಸೃಷ್ಟಿಸಲಾಗಿದೆ.

ಇದುವರೆಗೂ ಒಟ್ಟು 1600ಕ್ಕೂ ಹೆಚ್ಚು ತಳಿಗಳಅಭಿವೃದ್ಧಿಪಡಿಸಲಾಗಿದ್ದು, ಉತ್ತಮ ಫಲಿತಾಂಶದೊರಕಿದೆ. ವಿವಿಧ ಜೈವಿಕ ಬಲವರ್ಧಕ,ಅಲ್ಪಾವಧಿ ತಳಿಗಳು ಹಾಗೂ ತಂತ್ರಜ್ಞಾನಆಧಾರಿತ ತಳಿಗಳ ಅಭಿವೃದ್ಧಿಯಾಗಿದ್ದು,ಹವಾಮಾನಕ್ಕೆ ಅನುಗುಣವಾಗಿ ತಳಿಗಳಆಧಾರಿತ ಕೃಷಿ ಚಟುವಟಿಕೆ ನಡೆಸಿದಲ್ಲಿ ರೈತರುಹೆಚ್ಚಿನ ಇಳುವರಿಯ ಜೊತೆಗೆ ಉತ್ತಮಆದಾಯ ಹೊಂದಬಹುದಾಗಿದೆ ಎಂದರು.

ತೋಟಗಾರಿಕಾ ಸಂಶೋಧನಾ ಕೇಂದ್ರದಮುಖ್ಯಸ್ಥ ಡಾ.ಶಿವಪ್ರಸಾದ್‌ ಮಾತನಾಡಿ,ಹವಾಮಾನ ವೈಪರೀತ್ಯದಿಂದಾಗಿ ರೈತರುತಮ್ಮ ಉದ್ದೇಶಿತ ಪ್ರತಿಫಲ ಪಡೆಯಲುಸಾಧ್ಯವಾಗುತ್ತಿಲ್ಲ. ರೈತರು ಆಧುನಿಕತಂತ್ರಜ್ಞಾನದ ಅರಿವು ಹಾಗೂ ಬಳಕೆಮಾಡಬೇಕಿದೆ.

Advertisement

ಎಲ್ಲಾ ಮಾಹಿತಿ ಕೇವಲಬೆರಳ ತುದಿಯಲ್ಲಿ ಲಭ್ಯವಿದ್ದು, ಅದರ ಬಳಕೆಮಾಡುವುದನ್ನು ಮಾತ್ರ ಕಲಿಯಬೇಕಿದೆ.ಹಲವರಿಗೆ ಇದರ ಮಾಹಿತಿ ಇದ್ದರೂಉದಾಸೀನತೆಯಿಂದಾಗಿ ತಮ್ಮ ಬೆಳೆಗಳನ್ನುಕಳೆದುಕೊಳ್ಳುತ್ತಿರುವುದು ಆತಂಕಕಾರಿ.ತಂತ್ರಜ್ಞಾನದ ಬಳಕೆ ಮಾಡಿಕೊಂಡು ಎಲ್ಲಾರೈತರು ಪ್ರಗತಿ ಕಾಣಬೇಕು ಎನ್ನುವುದುಸರ್ಕಾರದ ಆಶಯವಾಗಿದೆ ಎಂದರು.

ಕೃಷಿ ಹಮಾಮಾನ ತಜ್ಞೆ ಪಿ.ಎಂ.ಶಬ್ನಂಅವರು ಹವಾಮಾನ ವೈಪರೀತ್ಯಗಳು ಹಾಗೂರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಎನ್‌.ಸತೀಶ್‌, ಆರ್‌.ಕಿರಣ್‌, ಎಂ.ಧನಲಕ್ಷ್ಮಿ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next