Advertisement

ವಾರ್ಡ್‌ ವಿಂಗಡಣೆ ವಿರುದ್ಧಹೋರಾಟ

10:33 AM Aug 07, 2018 | |

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್‌ಗಳ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಮಾಡುವಲ್ಲಿ ಭಾರಿ ಅನ್ಯಾಯವಾಗಿರುವ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಎಚ್ಚರಿಕೆ ನೀಡಿದರು.

Advertisement

ನಗರದ ಜಗತ್‌ ವೃತ್ತದಲ್ಲಿರುವ ಕಲಬುರಗಿ ಮಹಾನಗರ ಪಾಲಿಕೆಯ ಹೊಸ ಕಟ್ಟಡದಲ್ಲಿ ಪಾಲಿಕೆ ಪ್ರತಿಪಕ್ಷದ ನಾಯಕ
ಆರ್‌.ಎಸ್‌. ಪಾಟೀಲ ಅವರ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಮೀಸಲಾತಿಯಲ್ಲಿ ಅನ್ಯಾಯವಾಗಿರುವ ಜತೆಗೆ ವಾರ್ಡ್‌ಗಳನ್ನು ಮನಸ್ಸಿಗೆ ಬಂದಂತೆ ಮರುವಿಂಗಡಣೆ ಮಾಡಿರುವುದರಿಂದ ಎಲ್ಲರೂ ಹೋರಾಟಕ್ಕೆ ಮುಂದಾಗಬೇಕು. ಇದಕ್ಕೆ ಸಹಕಾರ ನೀಡುತ್ತೇನೆ ಎಂದರು.

ಬಿಜೆಪಿಯೇ ಅನುದಾನ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ
ಆಗಿದ್ದರೆ, ಕಲಬುರಗಿ ಪಾಲಿಕೆಗೆ 500 ಕೋಟಿ ರೂ. ಅನುದಾನ ಬರುತ್ತಿತ್ತು. ಈ ಕುರಿತು ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಜತೆಗೆ ಈ ಹಿಂದೆಯೂ ಮುಖ್ಯಮಂತ್ರಿ ಆಗಿದ್ದಾಗ 100 ಕೋ.ರೂ. ಅನುದಾನ ನೀಡಿದ್ದರು.

ಮುಂದಿನ ದಿನಗಳಲ್ಲಿ ಬಿಜೆಪಿಯ ಎಲ್ಲರೂ ಸಂಘಟಿತ ಪ್ರಯತ್ನ ಮಾಡಿ, ಪಾಲಿಕೆಯಲ್ಲಿ ಅಧಿಕಾರಕ್ಕೆ ತರಲು ಪಣತೊಟ್ಟು ಪಕ್ಷದ ಸಂಘಟನೆ ಮಾಡಬೇಕು. ಬೇರು ಮಟ್ಟದಿಂದಲೇ ಕೆಲಸ ಈಗಿನಿಂದಲೇ ಆರಂಭಿಸಬೇಕು ಎಂದರು. 

ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಶಕ್ತಿ ಪೀಠದ ಪೂಜ್ಯರಾದ ಅಪ್ಪಾರಾವದೇವಿ ಮುತ್ಯಾ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಶಾಸಕರಾದ ಬಸವರಾಜ ಮತ್ತಿಮೂಡ, ಬಿಜೆಪಿ ರಾಜ್ಯ ಸಹ ವಕ್ತಾರ ಶಶೀಲ ನಮೋಶಿ, ಯುವ ಮುಖಂಡ ಚಂದು ಪಾಟೀಲ ಮಾತನಾಡಿ, ಪ್ರತಿಪಕ್ಷದ ಸ್ಥಾನವನ್ನು ಆರ್‌.ಎಸ್‌. ಪಾಟೀಲ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. 

Advertisement

ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಆಡಳಿತ ನಡೆಸುವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಕೆಲಸ ಇನ್ನಷ್ಟು
ಚುರುಕುಗೊಳಿಸಿ ಎಂದರು. ಪ್ರತಿಪಕ್ಷದ ನಾಯಕ ಆರ್‌.ಎಸ್‌.ಪಾಟೀಲ ಶ್ರೀನಿವಾಸ ಸರಡಗಿ ಮಾತನಾಡಿ, ಪಾಲಿಕೆ ಸದಸ್ಯರು ಹಾಗೂ ನಗರದ ಜನರು ಮಹತ್ವದ ಹೊಣೆ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಂಡು ಸಾಧ್ಯವಾದಷ್ಟು
ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ಶಿವಾನಂದ ಪಾಟೀಲ ಅಷ್ಟಗಿ, ಪ್ರಭುಲಿಂಗ ಹಾದಿಮನಿ, ವಿಶಾಲ್‌ ದರ್ಗಿ, ರಮಾನಂದ
ಉಪಾದ್ಯಾಯ, ರಾಜು ವಾಡೇಕರ್‌, ಮದನ ಬಂಡೆ, ಶಿವು ಸ್ವಾಮಿ, ಪರಶುರಾಮ ನಸಲವಾಯಿ, ಈರಣ್ಣ ಹೊನ್ನಳ್ಳಿ,
ಜಗದೇವಿ, ವಿಜಯಲಕ್ಷ್ಮೀ ಗೊಬ್ಬೂರಕರ್‌ ರವಿ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ಓಕಳಿ, ಮಂಜು ರೆಡ್ಡಿ ಮತ್ತಿತರರು ಇದ್ದರು. ಹಿರಿಯ ಪತ್ರಕರ್ತ ಗಣೇಶಕುಮಾರ, ಹೋರಾಟಗಾರರಾದ ಸಚಿನ್‌ ಫ‌ರಹತಾಬಾದ, ಮಂಜುನಾಥ
ನಾಲವಾರಕರ್‌ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next