Advertisement

ಎಚ್ಚರಿಕೆ ನಡುವೆಯೂ ಮುಂದುವರಿದ ವಾಗ್ಧಾಳಿ

01:56 AM Mar 23, 2019 | |

ಶ್ರೀರಂಗಪಟ್ಟಣ: “ಚಿತ್ರರಂಗಕ್ಕೆ ಬರುವ ಮುನ್ನ ದರ್ಶನ್‌ ಎಲ್ಲೆಲ್ಲಿ ಏನೇನು ಮಾಡ್ತಿದ್ದ, ಯಾರ್ಯಾರಿಗೆ ಟೀ ತಂದು ಕೊಡ್ತಿದ್ದ, ಅವನ ಜೇಬಲ್ಲಿ ದುಡ್ಡಿಲ್ಲದೆ ದನದ ಚಾಕಣ ತಿನ್ನಲು ಬರ್ತಿದ್ದ ‘ ಎಂಬ ಜೆಡಿಎಸ್‌ ಮುಖಂಡರ ವಾಗ್ಧಾಳಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. 

Advertisement

ಲೋಕಸಭಾಚುನಾವಣಾ ಹಿನ್ನೆ ಲೆಯಲ್ಲಿ ಪಟ್ಟಣ ದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್‌, “ದರ್ಶನ್‌ ಮತ್ತು ಯಶ್‌ ಮಂಡ್ಯದಲ್ಲಿ ರಾಜಕಾರಣ ಮಾಡಲು ಬಂದಿದ್ದಾರೆ. ಅವರು ಇಲ್ಲೇ ನಿಂತು ನಾವು ತಪ್ಪು ಮಾಡ್ತೀವಿ ಅಂತ ಧಮಕಿ ಹಾಕ್ತಾರಲ್ಲ. ಇದು ಸರೀನಾ’ ಎಂದು ಪ್ರಶ್ನಿಸಿದರು.

ಮುಂದುವರಿದ ಟೀಕೆ: ಶಾಸಕ ಕೆ.ಸಿ.ನಾರಾಯಣಗೌಡ, ರವೀಂದ್ರ ಶ್ರೀಕಂಠಯ್ಯ ಬಳಿಕ ಇದೀಗ ಎಂ.ಸಂತೋಷ್‌ ಚಿತ್ರನಟರ ವಿರುದ್ಧ  ವಾಗ್ಧಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾರ ವಿರುದ್ಧವೂ ವೈಯಕ್ತಿಕ ಟೀಕೆಗಳನ್ನು ಮಾಡದಂತೆ ಕಟ್ಟಾಜ್ಞೆ ವಿಧಿಸಿದ್ದರ ನಡುವೆಯೂ ಜೆಡಿಎಸ್‌ ನಾಯಕರು ಸುಮಲತಾ ಬೆಂಬಲಕ್ಕೆ ನಿಂತಿರುವ ನಟರನ್ನುಗುರಿಯಾಗಿಸಿಕೊಂಡು ಟೀಕಾಪ್ರಹಾರ ಮುಂದುವರಿಸಿದ್ದಾರೆ.

ಅಭಿಮಾನಿಗಳ ಆಕ್ರೋಶ: ಎಂ.ಸಂತೋಷ್‌ ನೀಡಿರುವ ಹೇಳಿಕೆಗೆ ದರ್ಶನ್‌ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್‌ ಟೀ ಸಪ್ಲೆ„ ಮಾಡಿದ್ದು ಅಪರಾಧವಲ್ಲ. ಅವರಜೀವನೋಪಾಯಕ್ಕಾಗಿ ಆ ವೃತ್ತಿ ಮಾಡಿದ್ದಾರೆ. ಈ ಹೇಳಿಕೆ ಬಡತನವನ್ನು ಅವಮಾನಿಸಿದಂತೆ ಎಂದು ಆರೋಪಿಸಿದ್ದಾರೆ

ಶಾಸಕ ನಾರಾಯಣಗೌಡ ವಿರುದ್ಧ  ಪ್ರಕರಣ ದಾಖಲು

Advertisement

ಕೆ.ಆರ್‌.ಪೇಟೆ: “ಚಿತ್ರನಟರು ಸುಮಲತಾ ಪರ ಚುನಾವಣಾ ಪ್ರಚಾರ ಮಾಡಬಾರದು’ ಎಂದು ಬೆದರಿಕೆ ಹಾಕಿದ್ದ ಶಾಸಕ ನಾರಾಯಣಗೌಡರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯಡಿ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ನಾರಾಯಣಗೌಡ, “ಸ್ಟಾರ್‌ ನಟರು ಸುಮಲತಾ ಪರ ಪ್ರಚಾರ ಮಾಡಿದರೆ ಸರ್ಕಾರ ನಟರ ಅಕ್ರಮ ಆಸ್ತಿ, ಇತರೆ ಚಟುವಟಿಕೆಗಳ ವಿರುದ್ಧ  ತನಿಖೆ ನಡೆಸುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯಾದ್ಯಂತ ಟೀಕೆಗಳು ಕೇಳಿ ಬಂದಿತ್ತು. ಇದಕ್ಕೆ ಶಾಸಕರು ಕ್ಷಮಾಪಣೆ ಕೋರಿದ್ದರು. ಆದರೆ, ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಚುನಾವಣಾ
ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next