Advertisement

War; ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ?:ವಿದೇಶಿ ಜನರಿಗೆ ಮರಳಲು ಕರೆ

12:19 AM Jul 30, 2024 | Team Udayavani |

ಟೆಲ್‌ ಅವಿವ್‌: 12 ಮಕ್ಕಳ ಸಾವಿಗೆ ಕಾರಣವಾದ ಗೋಲನ್‌ ಹೈಟ್ಸ್‌ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಅಮೆರಿಕ ಸೇರಿ ಯುರೋಪ್‌ನ ಅನೇಕ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡಿವೆ. ಅಲ್ಲದೆ, ಲೆಬನಾನ್‌ ತೊರೆಯುವಂತೆ ಸೂಚಿಸಿವೆ.

Advertisement

ಲೆಬನಾನ್‌ ಹೆಜ್ಬುಲ್ಲಾ ಉಗ್ರರು ಇಸ್ರೇಲ್‌ ನಿಯಂತ್ರಿತ ಗೋಲನ್‌ ಹೈಟ್ಸ್‌ ಮೇಲೆ ರಾಕೆಟ್‌ ದಾಳಿ ನಡೆಸಿದ್ದರಿಂದ 12 ಮಕ್ಕಳು ಮೃತಪಟ್ಟಿದ್ದರು. ಆದರೆ, ಈ ದಾಳಿಯನ್ನು ಹೆಜ್ಬುಲ್ಲಾ ನಿರಾಕರಿಸಿತ್ತು. ಹೀಗಿದ್ದೂ, ಇಸ್ರೇಲ್‌ ಪ್ರತೀಕಾರಕ್ಕೆ ಮುಂದಾಗಿರುವಂತೆ ಕಾಣುತ್ತಿದೆ ಎನ್ನಲಾಗಿದೆ. ಅಲ್ಲದೇ, ಸೂಕ್ತ ಉತ್ತರ ನೀಡುವಂತೆ ಇಸ್ರೇಲ್‌ನಲ್ಲೂ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ವಾಪಸ್‌ ಮರಳುವಂತೆ ಸೂಚಿವೆ.

Advertisement

Udayavani is now on Telegram. Click here to join our channel and stay updated with the latest news.

Next