Advertisement

ಯುದ್ಧ ಸನ್ನದ್ಧರಾಗಿ: ನಾಗರಿಕರಿಗೆ ಸ್ವೀಡನ್‌, ಫಿನ್‌ ಲ್ಯಾಂಡ್‌ ಎಚ್ಚರಿಕೆ!

11:43 PM Nov 19, 2024 | Team Udayavani |

ಸ್ಟಾಕ್‌ಹೋಮ್‌: ರಷ್ಯಾ ಮತ್ತು ಉಕ್ರೇನ್‌ ನಡುವಿನ ಕಾಳಗ ತೀವ್ರಗೊಂಡಿರುವಂತೆಯೇ “ಯುದ್ಧಕ್ಕೆ ಸನ್ನದ್ಧರಾಗಿ’ ಎಂದು ಸ್ವೀಡನ್‌, ಫಿನ್‌ಲ್ಯಾಂಡ್‌ ತಮ್ಮ ದೇಶದ ನಾಗರಿಕರಿಗೆ ಮನವಿ ಮಾಡಿವೆ.

Advertisement

ಸ್ವೀಡನ್‌ನಲ್ಲಿ 50 ಲಕ್ಷ ಕೈಪಿಡಿಗಳನ್ನು ಸಿದ್ಧಗೊಳಿಸಿ ಹಂಚಲು ಶುರು ಮಾಡಿದ್ದರೆ, ಫಿನ್‌ ಲ್ಯಾಂಡ್‌ ಸರ್ಕಾರ ಈ ಉದ್ದೇಶಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್‌ ಅನ್ನು ಶುರು ಮಾಡಿದೆ.

2022ರಲ್ಲಿ ಉಕ್ರೇನ್‌ ವಿರುದ್ಧ ರಷ್ಯಾ ದಾಳಿ ನಡೆಸಿದ ಸಂದರ್ಭದಿಂದಲೇ ಸ್ವೀಡನ್‌ನಲ್ಲಿ “ತುರ್ತಾಗಿ ಯುದ್ಧದ ಸಂದರ್ಭ ಬಂದರೆ ಮಾಡಬೇಕಾಗಿ ರುವುದೇನು?’ ಎಂಬ ಶೀರ್ಷಿಕೆ ಇರುವ ಕರಪತ್ರ ಸಿದ್ಧಗೊಳಿಸಿತ್ತು. 2ನೇ ಪ್ರಪಂಚ ಮಹಾಯುದ್ಧ ವೇಳೆ ಮೊದಲ ಬಾರಿಗೆ ಅದನ್ನು ಸಿದ್ಧಪಡಿಸಲಾಗಿತ್ತು. ಮುಂದಿನ 2 ವಾರಗಳಲ್ಲಿ ಸ್ವೀಡನ್‌ ನಿವಾಸಿಗಳಿಗೆ 32 ಪುಟಗಳ ಪರಿಷ್ಕೃತ ಕೈಪಡಿ ಮನೆಗಳಿಗೆ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next