Advertisement
ವಕ್ಫ್ ಆಸ್ತಿ ವಿಚಾರದಲ್ಲಿ ಪ್ರತಿ ಬಾರಿ ರಾಜ್ಯ ಸರಕಾರ ಓಲೈಕೆ ಮಾಡುತ್ತದೆ. ಆ ನೆಪದಲ್ಲಿ ಲೂಟಿ ಮಾಡುವವರಿಗೆ ಬೆಂಬಲ ನೀಡುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಲಾಭ ಪಡೆಯಲು ಅವರು (ಕುಮಾರಸ್ವಾಮಿ) ಓಲೈಕೆ ರಾಜಕಾರಣ ಮಾಡುತ್ತ ಬಂದಿದ್ದಾರೆ. ಈಗ ಓಲೈಕೆ ರಾಜಕಾರಣ ಅನ್ನುತ್ತಿರುವ ಕುಮಾರಸ್ವಾಮಿ ಅವರಿಗೆ ಹಿಂದಿನದೆಲ್ಲ ಮರೆತಂತಿದೆ. ಈ ಹಿಂದೆ ಮಾಡಿರುವುದೆಲ್ಲ ಓಲೈಕೆ ರಾಜಕಾರಣ ಅಲ್ಲವೇ? ಎಂದು ಪ್ರಶ್ನಿಸಿದರು.
ನೀವೂ ಅವರೊಂದಿಗೆ ಕೈಜೋಡಿಸಿದಾಗ ಕುಮಾರಸ್ವಾಮಿ ಅವರನ್ನು ಹೊಗಳಿರಲಿಲ್ಲವೇ ಎಂದು ಕೇಳಿದಾಗ, ರಾಜಕಾರಣದಲ್ಲಿ ಸಹಜ ಒಪ್ಪಿಕೊಳ್ಳೋಣ. ಆದರೆ ನಮ್ಮ ತತ್ವ ಸಾಮಾನ್ಯವಾಗಿಯೇ ಇರುತ್ತದೆ. ಅದರಲ್ಲಿ ಏನಾದರೂ ಬದಲಾವಣೆ ಆಗಿದೆಯೇ? ಅಂದೂ ನಾನು ಆರೆಸ್ಸೆಸ್ ವಿರೋಧಿ ಇಂದೂ ವಿರೋಧಿಸುತ್ತೇನೆ. ಕುರ್ಚಿ ಕೊಟ್ಟ ತತ್‌ಕ್ಷಣ ಜಾತ್ಯತೀತ ಹಾಗೂ ಕುರ್ಚಿ ಕಸಿದುಕೊಂಡ ತತ್‌ಕ್ಷಣ ಕೋಮುವಾದಿ ಆಗುವುದು ಎಷ್ಟು ಸರಿ? ಇದು ನನಗೆ ಅರ್ಥವಾಗುತ್ತಿಲ್ಲ’ ಎಂದು ವಾಗ್ಧಾಳಿ ನಡೆಸಿದರು.