Advertisement

Waqf Board ಜನರನ್ನು ಕ್ಯಾನ್ಸರ್‌ನಂತೆ ಕಾಡುತ್ತಿದೆ : ಆರ್‌. ಅಶೋಕ್‌

01:51 AM Dec 03, 2024 | Team Udayavani |

ಮೈಸೂರು: ಕಾಂಗ್ರೆಸ್‌ ಪಕ್ಷ ಈ ಹಿಂದೆ ಉಳುವವನೇ ಭೂಮಿಯ ಒಡೆಯ ಎಂದಿತ್ತು. ಆದರೀಗ ರೈತರ ಜಮೀನು ವಕ್ಫ್ ಬೋರ್ಡ್‌ ಆಸ್ತಿ ಎಂದು ಹೇಳುತ್ತಿದೆ ಎಂದು ಸರಕಾರದ ವಿರುದ್ಧ ವಿಪಕ್ಷ ನಾಯಕ ಆರ್‌. ಆಶೋಕ್‌ ವಾಗ್ಧಾಳಿ ನಡೆಸಿದರು.

Advertisement

ಮೈಸೂರು ನಗರದ ಮುನೇಶ್ವರ ಬಡಾವಣೆ ಮತ್ತು ಗುಂಡೂರಾವ್‌ ನಗರಕ್ಕೆ ಸೋಮವಾರ ತಮ್ಮ ನೇತೃತ್ವದ ನಿಯೋಗದೊಂದಿಗೆ ತೆರಳಿ ವಕ್ಫ್ ಬೋರ್ಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರ ಸಮಸ್ಯೆ ಆಲಿಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ರಾಜಕಾರಣ, ಮುಸ್ಲಿಮರ ತುಷ್ಟೀಕರಣದಿಂದ ವಕ್ಫ್ ಬೋರ್ಡ್‌ ರಾಜ್ಯದ ಜನರನ್ನು ಕ್ಯಾನ್ಸರ್‌ನಂತೆ ಕಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ತವರು ಜಿಲ್ಲೆ ಮೈಸೂರಿನಲ್ಲೂ 44 ಎಕರೆಗೂ ಹೆಚ್ಚು ಭೂಮಿ ವಕ್ಫ್ ಬೋರ್ಡ್‌ ಹೆಸರಿನಲ್ಲಿದೆ. ವಾಸವಿರುವ ಜನರಿಗೆ ನೋಟಿಸ್‌ ನೀಡಿ, ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ವಕ್ಫ್ ಬೋರ್ಡ್‌ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದ್ದು ಕಾಂಗ್ರೆಸ್‌ ಎಷ್ಟೇ ವಿರೋಧ ಮಾಡಿದರೂ ಸಂಸತ್‌ನಲ್ಲಿ ವಕ್ಫ್ ಬೋರ್ಡ್‌ ಬಿಲ್‌ ತಿದ್ದುಪಡಿ ಮಾಡೇ ಮಾಡುತ್ತೇವೆ ಎಂದರು.

ಸರಕಾರದ ಎದೆಮೇಲೆ ಹೊಡೆಯುತ್ತೇನೆ
ರೈತರಿಗೆ ವಕ್ಫ್ ಬೋರ್ಡ್‌ ನೀಡಿರುವ ನೋಟಿಸ್‌ಗಳನ್ನು ರಾಜ್ಯ ಸರಕಾರ ರದ್ದು ಮಾಡದಿದ್ದರೆ, ಅಧಿವೇಶನದಲ್ಲಿ ಸರಕಾರದ ಎದೆ ಮೇಲೆ ಹೊಡೆಯುತ್ತೇನೆ ಎಂದು ಅಶೋಕ್‌ ಕಿಡಿಕಾರಿದರು.

ವಕ್ಫ್ ಬೋರ್ಡ್‌ ವಿಚಾರದಲ್ಲಿ ಸರಕಾರ ತಪ್ಪು ಮಾಡಿದೆ ಎಂದು ಹೇಳುವವರೆಗೂ ಬಿಡುವುದಿಲ್ಲ. ಒಂದು ಇಡೀ ದಿನ ವಿಧಾನಸಭೆ ಅಧಿವೇಶನ ದಲ್ಲಿ ಹೋರಾಟ ಮಾಡುತ್ತೇವೆ. ತತ್‌ಕ್ಷಣವೇ ವಕ್ಫ್ ನೀಡಿರುವ ಎಲ್ಲ ನೋಟಿಸ್‌ ರದ್ದು ಮಾಡಬೇಕು. ರೈತರ ಆರ್‌ಟಿಸಿಯಲ್ಲಿ ವಕ#… ಹೆಸರು ಕೈಬಿಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರಕಾರ ವಕ್ಫ್ ಕಾನೂನನ್ನೇ ವಜಾ ಮಾಡಬೇಕಿದೆ ಎಂದರು.

Advertisement

ಮತಾಂಧರಿಗೆ ಶಕ್ತಿ ತುಂಬುವ ಕಾಂಗ್ರೆಸ್‌: ಸಿ.ಟಿ. ರವಿ ಆರೋಪ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಕಾಂಗ್ರೆಸ್‌ ಪಕ್ಷ ಮತಾಂಧರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ. ವ್ಯಾಕರಣ, ಸಂಧಿ, ವಚನ ಗಳ ಬಗ್ಗೆ ಗೊತ್ತಿದೆಯಾ ಎಂದು ಕೇಳುವ ಸಿಎಂ ಸಿದ್ದರಾಮಯ್ಯನವರು ವಕ್ಫ್ ಬೋರ್ಡ್‌ ಕಾಯ್ದೆ ಸಂವಿಧಾನ ಬದ್ಧವಾಗಿದೆಯಾ, ಕಾನೂನು ಪ್ರಕಾರವಾಗಿದೆಯಾ ಎಂಬ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next