Advertisement

ಟ್ವಿಟರ್‌ನಲ್ಲಿ  ಭಾರತ-ಪಾಕಿಸ್ಥಾನ ಶಾಂತಿ ಸಂದೇಶ ಸಾರಿದ ವಕಾರ್‌ 

09:03 AM Jun 04, 2018 | Team Udayavani |

ಕರಾಚಿ: ಒಂದು ಕಡೆ ಪಾಕಿಸ್ಥಾನ ಗಡಿಯಲ್ಲಿ ಅಪ್ರಚೋದಿತ ಗುಂಡಿದ ದಾಳಿ ಮುಂದುವರಿ ಸುತ್ತಿದ್ದರೆ ಇತ್ತ ಪಾಕಿಸ್ಥಾನದ ಮಾಜಿ ವೇಗಿ ವಕಾರ್‌ ಯೂನಿಸ್‌ ಟ್ವಿಟರ್‌ನಲ್ಲಿ ಭಾರತ-ಪಾಕಿಸ್ಥಾನ ಶಾಂತಿ ಸಂದೇಶವನ್ನು ರವಾನಿಸಿದ್ದಾರೆ. 

Advertisement

ಕಾರ್ಯಕ್ರಮ ಒಂದರಲ್ಲಿ ಭಾರತದ ಜೆರ್ಸಿ ತೊಟ್ಟ ಬಾಲಕನೊಂದಿಗೆ ಸಂಭಾಷಣೆ ನಡೆಸುತ್ತಿರುವ ಫೋಟೋವೊಂದನ್ನು ವಕಾರ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಜತೆಗೆ ಕ್ರಿಕೆಟ್‌ ವಿಶ್ವಕಪ್‌ಗೆ ಯಾವ ಗಡಿಯ ಮಿತಿಯೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನು ಅನೇಕ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ಹಾಗೂ ಟ್ವಿಟರ್‌ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. 

2019ರಲ್ಲಿ ವಿಶ್ವಕಪ್‌ ಕ್ರಿಕೆಟ್‌ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ನಡೆಯಲಿದೆ. ಪ್ರಸ್ತುತ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ, ಪಾಕ್‌ ಸೈನಿಕರ ನಿರಂತರ ಗುಂಡಿನ ದಾಳಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲೇ ವಕಾರ್‌ ಈ ಸಂದೇಶ ಬಿತ್ತರಿಸಿದ್ದಾರೆ. 2012ರ ಬಳಿಕ ಉಭಯ ರಾಷ್ಟ್ರಗಳ ನಡುವೆ ಯಾವುದೇ ಕ್ರಿಕೆಟ್‌ ಕೂಟ ನಡೆದಿಲ್ಲ. ಆದರೆ ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ಮುಖಾಮುಖಿ ಆಗುವುದನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next