Advertisement
ತಮ್ಮ ಜೀವನಗಾಥೆ ಕುರಿತ 800 ಸಿನೆಮಾದ ಕುರಿತು ಕಲಾ ಅಕಾಡೆಮಿಯಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡ ಅವರು, “ಭಾರತ ಎಂದರೆ ತಮಿಳುನಾಡಿನ ತಮಿಳರು ಎಂಬ ಅರ್ಥದಲ್ಲಿ ಹೇಳುತ್ತಿ ದ್ದೇನೆ. ಶ್ರೀಲಂಕಾ ತಮಿಳರ ಸಮಸ್ಯೆಯೇ ಬೇರೆ. ಸಿಂಹಳೀ ಯ ತಮಿಳರು ಮತ್ತು ಭಾರತದ ತಮಿಳರ ನಡುವೆ ಬಹಳ ವ್ಯತ್ಯಾಸಗಳಿವೆ’ ಎಂದು ವಿವರಿಸಿದರು.
Related Articles
Advertisement
ತಮ್ಮ ಸಿನೆಮಾದ ಕುರಿತೂ ಮಾತನಾಡಿ, ನನ್ನ ಜೀವನ ಗಾಥೆ ಕುರಿತು ಸಿನೆಮಾ ಮಾಡುತ್ತಾರೆಂದಾಗ ಮೊದ ಲು ಒಪ್ಪಿರಲಿಲ್ಲ. ಹಿಂಜರಿಕೆ ಯಿತ್ತು. ಕಾರಣವಿಷ್ಟೇ. ಜೀವನಗಾಥೆ ಎಂದ ಮೇಲೆ ಕಹಿ ಹಾಗೂ ಸಿಹಿ ಎಲ್ಲ ಅನುಭವಗಳನ್ನು ದಾಖಲಿಸ ಬೇಕಾಗುತ್ತದೆ. ಇದು ಕೆಲವ ರಿಗೆ ಬೇಸರ ತರಬಹುದು, ಕೆಲ ವರು ನನ್ನನ್ನು ದ್ವೇಷಿಸಬಹು ದು. ಹಾಗೆಂದು ಸುಳ್ಳನ್ನಾ ಗಲೀ, ಬರೀ ಮಧುರವೆನಿಸುವುದನ್ನಾ ಗಲೀ ಹೇಳಲಾಗದು. ಆಗ ಅದು ಜೀವನ ಗಾಥೆ ಎನಿಸದು. ಈ ಹಿನ್ನೆಲೆಯಲ್ಲೇ ಬೇಡ ಎಂಬ ಮನಸ್ಸಿನಲ್ಲಿದ್ದೆ. ಬಳಿಕ ಹಲವರ ಮನವೊಲಿಕೆಯಿಂದ ಒಪ್ಪಿದೆ ಎಂದರು.
ಚಿತ್ರದ ನಿರ್ದೇಶಕ ಎಂ.ಎಸ್. ಶ್ರೀಪತಿ ಮಾತನಾಡಿ, “ಸಾಮಾ ನ್ಯವಾಗಿ ನಮಗೆ ಸಿನೆಮಾಗಳಲ್ಲಿ ಕೊಂಚ ನಾಟಕೀಯತೆ ಬೇಕು. ಆದರೆ ಈ ಸಿನೆಮಾದಲ್ಲಿ ಅವು ಗಳ ಅಗತ್ಯವೇ ಬರಲಿಲ್ಲ. ಯಾಕೆಂದರೆ ಮುರಳೀಧರನ್ ಅವರ ಜೀವನಗಾಥೆಯೇ ನೂರಾರು ಘಟನೆಗಳ ಗುತ್ಛ. ಅವುಗಳಲ್ಲಿ ಕೆಲವನ್ನು ಆಯ್ದು ಕೊಂಡು ಸಂಪೂರ್ಣತೆಯನ್ನು ನೀಡಲು ಪ್ರಯತ್ನಿಸಿದ್ದೇನೆ’ ಎಂದರು.