Advertisement
ಕ್ಲಾಸು ಮುಗಿಸಿ ಊಟಮಾಡಿ ಹಾಸ್ಟೆಲ್ ರೂಮಿಗೆ ಬಂದು ಬಿದ್ದುಕೊಂಡವಳಿಗೆ ಮತ್ತೆ ಬೆಳಗಿನದೆಲ್ಲ ನೆನಪಾಯಿತು. ತಾನು ಅಪ್ಪನೊಡನೆ ತುಸು ಹೆಚ್ಚೇ ಒರಟಾಗಿ ನಡೆದುಕೊಂಡೆನೇ ಅನ್ನಿಸಿ ಬೇಸರವೂ ಆಯಿತು. ಅಮ್ಮ ತೀರಿಕೊಂಡು ಹತ್ತು ತಿಂಗಳಾಗುತ್ತ ಬಂತಲ್ಲವೇ? ಕೆಲದಿನಗಳ ಕಾಲ ವ್ಯಥೆಯಲ್ಲಿದ್ದ ಅಪ್ಪಆಮೇಲೆ ತುಸು ಸುಧಾರಿಸಿಕೊಂಡಂತೆ ಕಾಣುತ್ತಿದ್ದ. ಮನೆಗೆಲಸಕ್ಕೆ ಬರುತ್ತಿದ್ದ ಶಾರದಮ್ಮ ಈಗ ಅಡುಗೆಯನ್ನೂ ಮಾಡಿಟ್ಟು ಹೋಗುತ್ತಿದ್ದರು. ಹಳ್ಳಿಯಲ್ಲಿ ಜಮೀನು ಇದ್ದರೂ ಬಹಳ ವರ್ಷಗಳಿಂದ ಐಟಿಕ್ಷೇತ್ರದಲ್ಲಿ ಕೆಲಸಮಾಡಿಕೊಂಡಿದ್ದ ಅಪ್ಪ, ಅಪ್ಪಟ ನಗರವಾಸಿಯಾಗಿಬಿಟ್ಟಿದ್ದ. “ಎಲ್ಲ ಬಿಟ್ಟು ಊರಿಗೆ ಹೋಗಿಬಿಡೋಣ, ಕೃಷಿ ಮಾಡೋಣ, ಗಿಡಮರಗಳ ಸಾನ್ನಿಧ್ಯದಲ್ಲಿ ನೆಮ್ಮದಿಯಾಗಿ ಇದ್ದುಬಿಡೋಣ’ ಎಂದು ಅಮ್ಮ ಹೇಳಿದಾಗಲೆಲ್ಲ, “ಭೂಮಿಯ ಸಂಪರ್ಕವನ್ನೇ ಕಳೆದುಕೊಂಡಿದ್ದೇವಲ್ಲ’ ಎಂದು ಮಾತು ಮುಗಿಸಿಬಿಡುತ್ತಿದ್ದ. ಓರೆನೋಟದಲ್ಲಿ ಅಪ್ಪನನ್ನು ತಿವಿಯುತ್ತಲೇ, “ಸಂಪರ್ಕ ಇದ್ದಿದ್ದು ಯಾವಾಗ? ಕಳೆದುಕೊಳ್ಳಲು…’ ಎಂದು ಅಮ್ಮ ಸಿಡುಕಿದ್ದು ಅದೆಷ್ಟು ಬಾರಿಯೋ. ಅಪ್ಪನಿಗೆ ಭೂಮಿಯ ಸಂಪರ್ಕ ಉಂಟಾಗುತ್ತಿತ್ತೋ ಇಲ್ಲವೋ. ಅಮ್ಮನಂತೂ ಅಂತಹ ಸಂಪರ್ಕ ಸಾಧಿಸಲಾಗದೇ, ಸಾಧಿಸುವ ಸಾಧ್ಯತೆಯನ್ನೂ ಕಾಣದೇ ಜೀವಬಿಟ್ಟಿದ್ದಳು.
Related Articles
Advertisement
ಎಂದಿನಂತೆ ಅಂದೂ ರಾತ್ರಿ ಹತ್ತೂವರೆಗೆ ಅಮ್ಮನೊಡನೆ ಮಾತನಾಡಿದಾಗ ಅಷ್ಟೇನೂ ಅಸ್ವಸ್ಥಳಾದಂತೆ ಕಾಣುತ್ತಿರಲಿಲ್ಲ. ಯಾಕೆ, ಸ್ವಲ್ಪ ಸುಸ್ತಾದ ಹಾಗೆ ಮಾತನಾಡುತ್ತಿದ್ದೀಯಾ? ಅಂತ ಕೇಳಿದರೆ, “ಈ ತಿಂಗಳು ತುಂಬಾ ದಿನ ಬ್ಲೀಡಿಂಗ್ ಇತ್ತಲ್ಲ, ಸೋ ಫೀಲ… ಅಬಿಟ…ಅನೀಮಿಕ್’ ಅಂದಿದ್ದಳು. ಮೆನೋಪಾಸ್ ಹಂತದಲ್ಲಿ ಅವಳು ಅನುಭವಿಸುತ್ತಿರುವ ತೊಂದರೆ ತನಗೆ ತಿಳಿದಿದ್ದೇ, ಹೊಸದೇನಲ್ಲ. ಆದರೂ ಅಚಾನಕ್ ಹೀಗೆ. ತಾನು ಬರುವಷ್ಟರಲ್ಲಿ ಅಮ್ಮನ ಶರೀರವನ್ನು ಹಾಸ್ಪಿಟಲ್‌ನಿಂದ ಮನೆಗೆ ತಂದಾಗಿತ್ತು. ಹಾರ್ಟ್ ಅಟ್ಯಾಕ್‌ನಿಂದ ಸಾವು ಸಂಭವಿಸಿದೆ ಎಂದು ಡಾಕ್ಟರ್ ಹೇಳಿದ್ದರು. ಹಾಗಾದರೆ ಅವಳಿಗೆ ಈ ಮೊದಲು ತೊಂದರೆಯನ್ನು ಸೂಚಿಸುವ ಯಾವ ಲಕ್ಷಣವೂ ಕಾಣಿಸಿಕೊಳ್ಳಲೇ ಇಲ್ಲವೇ? ಕಂಡರೂ ಅಮ್ಮ ಅಲಕ್ಷ್ಯ ಮಾಡಿದಳೇ? ಸಾಯುವ ಮೊದಲು ಅಮ ¾ಒಂದಿಷ್ಟಾದರೂ ಒ¨ªಾಡಿರಲೇಬೇಕಲ್ಲ. ಅವಳು ಮಲಗಿದ್ದ ಹಾಸಿಗೆ, ತಾನು ರೂಮಿನ ಒಳಹೊಕ್ಕಾಗಲೂ ಹಾಗೇ ಕೆದರಿಬಿದ್ದಿತ್ತಲ್ಲವೇ? ಕರೆದೋ ಕೂಗಿಯೋ ಅಪ್ಪನ ಗಮನಸೆಳೆದಿದ್ದರೆ ಹತ್ತಿರದಲ್ಲಿಯೇ ಇದ್ದ ಆಸ್ಪತ್ರೆಗೆ ಸೇರಿಸಲು ಎಷ್ಟು ಸಮಯವೂ ತಗಲುತ್ತಿರಲಿಲ್ಲ. ಅಮ್ಮ ಉಳಿಯಬಹುದಿತ್ತೇನೋ. ತುಹಿನಾಳ ಮನದಲ್ಲಿ ಕೊನೆಮೊದಲಿಲ್ಲದ ಆಲೋಚನೆ.
ಅನ್ಯಮನಸ್ಕಳಾಗಿ ಕುಳಿತಿದ್ದವಳು ಬೆರಳಿಗೆ ತಾಕಿದ ಅಪ್ಪನ ಮೊಬೈಲ್ ಬಟನ್‌ಗಳನ್ನು ಅಷ್ಟೇ ಯಾಂತ್ರಿಕವಾಗಿ ಒತ್ತುತ್ತ ಹೋದಳು. ಇನ್ನೊಬ್ಬರ ಖಾಸಗೀತನವನ್ನು ಎಂದೂ ಯಾವ ಕಾರಣಕ್ಕೂ ಅತಿಕ್ರಮಿಸದಂತೆ ಅಮ್ಮ ಮಾಡಿದ್ದ ಪಾಠ, ತುಂಬಿದ್ದ ಮೌಲ್ಯ ಇಂದು ಮೂಲೆಗೆ ಸರಿದಿತ್ತು. ವಾಟ್ಸಾಪ್ ಮೆಸೇಜುಗಳನ್ನು ಒಂದೊಂದಾಗಿ ಸೊðàಲ್‌ಡೌನ್ ಮಾಡತೊಡಗಿದಳು. ಶಾಲಿನಿ-2 ಎಂಬ ಹೆಸರು ಕಣ್ಣಿಗೆ ಬಿದ್ದಿದ್ದೇ ಜೀವದಲ್ಲಿ ಒಮ್ಮೆಗೇ ಅದೇನೋ ವಿಚಿತ್ರ ಅನುಭವ. ಇದೀಗ ಅಮ್ಮನದೇ ಮೇಸೇಜ… ಬಂತೇನೋ ಎಂಬ ಹಾಗೆ ಒಂದೊಂದನ್ನೇ ಓದತೊಡಗಿದಳು ತುಹಿನ.
“”ಪ್ಲೀಸ್, ಎದ್ದುಬರ್ತೀರಾ? ನನಗೆ ವಿಪರೀತ ತ್ರಾಸಾಗುತ್ತಿದೆ”- 11.34“”ಕರೀತಿರೋದು, ಕೂಗ್ತಿರೋದು ನಿಮಗೆ ಕೇಳ್ತಿಲ್ಲ. ಇಯರ್ ಫೋನ್ ತೆಗೆದಿಡಿ. ಪ್ಲೀಸ್ ಕೂಗೋಕೂ ಆಗ್ತಿಲ್ಲ’- 12.48.
Want water& 1.27
wamt wztrr-&1.39
ಓಗಾಡ್! ತಾನು ಪ್ರಸೆಂಟೇಶನ್ ರೆಡಿಮಾಡಿ ಮಲಗುವಾಗ ರಾತ್ರಿ ಎರಡೂ ಮುಕ್ಕಾಲಾಗಿತ್ತು. ಬೆಳಿಗ್ಗೆ ಏಳುವುದು ಗಂಟೆ ಎಂಟಾಗಿತ್ತು ಎಂದಿದ್ದನಲ್ಲವೇ ಅಪ್ಪ. ಯಾವತ್ತೂ ಆರಕ್ಕೇ ಎದ್ದು ವಾಕಿಂಗ್-ಪ್ರಾಣಾಯಾಮ-ಧ್ಯಾನ ಅಂತೆಲ್ಲ ಚಟುವಟಿಕೆಯಿಂದಿರುವ ಅಮ್ಮ ಇನ್ನೂ ಏಕೆ ಎದ್ದಿಲ್ಲ ಅಂತ ನೋಡಿದಾಗ ಅವಳ ದೇಹದಲ್ಲಿ ಯಾವ ಚಲನೆಯೂ ಇರಲಿಲ್ಲವಂತೆ, ಅಕ್ಕಪಕ್ಕದವರ ಸಹಾಯದಿಂದ ಅಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ ಎಲ್ಲವೂ ಮುಗಿದುಹೋಗಿದೆ ಎಂದು ಡಾಕ್ಟರ್ ಕೈಚೆಲ್ಲಿದ್ದರಂತೆ. ರಾತ್ರಿ ಎರಡು ಗಂಟೆಯ ಆಸುಪಾಸಿಗೆ ಅವಳ ಪ್ರಾಣಹೋಗಿದೆ ಅಂದಿದ್ದ ನೆನಪು ಅಂದರೆ, ಬರೋಬ್ಬರಿ ನಾಲ್ಕು ತಾಸಿಗೂ ಮೇಲ್ಪಟ್ಟು ಅಮ್ಮನ ದೇಹದ ಪಕ್ಕದಲ್ಲಿಯೇ ಮಲಗಿದ್ದರೂ ಅವಳು ಉಸಿರಾಡುತ್ತಿಲ್ಲ ಅಂತ ಅಪ್ಪನಿಗೆ ಗೊತ್ತಾಗದೇ ಹೋಯಿತೇ? ಎರಡೂ ಕೈಯಿಂದ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಳು ತುಹಿನಾ. ನಿಮ್ಮಪ್ಪನಿಗೆ ಒಂದಲ್ಲ ಒಂದು ದಿನ ಕೌನ್ಸೆಲಿಂಗ್‌ನ ಅಗತ್ಯ ಬೀಳುತ್ತೆ ನೋಡು… ಆದರೆ ಆ ದಿನ ಬಾರದಿರಲಿ ಎನ್ನುವುದು ನನ್ನ ಪ್ರಾರ್ಥನೆ ಅಂದಿದ್ದೆಯಲ್ಲವೇ ಅಮ್ಮಾ… ಇದು ಹೀಗೆ ಬರುತ್ತೆ ಅಂದುಕೊಂಡಿರಲಿಲ್ಲ.
ಬೆಳಿಗ್ಗೆ ಎದ್ದು, ಹಿಂದಿನ ದಿನ ಒಣಹಾಕಿದ್ದ ಬಟ್ಟೆಗಳನ್ನೆಲ್ಲ ಮಡಚುತ್ತ “”ಪಪ್ಪಾ ಇವತ್ತು ರಾತ್ರಿ ಮಣಿಪಾಲಿಗೆ ಇನ್ನೊಂದು ಟಿಕೆಟ್ ಮಾಡಿಸು.. ನಾಳೆ ಬೆಳಿಗ್ಗೆ ಡಾ. ಪ್ರಶಾಂತ್ ಹತ್ತಿರ ನಿನಗೆ ಅಪಾಯಿಂಟ್‌ಮೆಂಟ… ತೆಗೆದುಕೊಂಡಾಗಿದೆ” ಎನ್ನುವಾಗ, ಇದಕ್ಕಾಗಿ ನಿನ್ನನ್ನು ಕೇಳುವ ಅಗತ್ಯವೂ ನನಗಿಲ್ಲ ಎನ್ನುವ ಸ್ಪಷ್ಟತೆ ಅವಳ ಮಾತಿನಲ್ಲಿತ್ತು. ಸಹನಾ ಹೆಗಡೆ