Advertisement

ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗಬೇಕೆಂದು ಬಯಸುತ್ತೇನೆ: ಒವೈಸಿ

02:58 PM Oct 26, 2022 | Team Udayavani |

ವಿಜಯಪುರ: ಹಿಜಾಬ್ ಧರಿಸಿದ ಮಹಿಳೆಯೊಬ್ಬಳು ಭಾರತದ ಪ್ರಧಾನಿಯಾಗುವುದನ್ನು ನೋಡಲು ಬಯಸುವುದಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮುಂಬರುವ ನಗರಪಾಲಿಕೆ ಚುನಾವಣೆಯ ಪ್ರಚಾರ ಕಾರ್ಯದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಒವೈಸಿ ಮಾತನಾಡಿದ್ದರು.

Advertisement

ಇದನ್ನೂ ಓದಿ:ಸೈಬರ್‌ ವಂಚಕರಿಂದ ವಾಟ್ಸ್‌ ಆ್ಯಪ್‌ ದಂಡ ಪಾವತಿ ಸಂದೇಶ: ಪೊಲೀಸರಿಂದ ಎಚ್ಚರಿಕೆ

ಅಕ್ಟೋಬರ್ 28ರಂದು ನಡೆಯಲಿರುವ ವಿಜಯಪುರದ ನಗರಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ನಾಲ್ಕು ವಾರ್ಡ್ ಗಳಲ್ಲಿ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಒವೈಸಿ ಮಂಗಳವಾರ ಮನೆ, ಮನೆ ಪ್ರಚಾರ ನಡೆಸಿ ನಂತರ ರೋಡ್ ಶೋ ನಡೆಸಿರುವುದಾಗಿ ವರದಿ ತಿಳಿಸಿದೆ.

ಭಾರತೀಯ ಜನತಾ ಪಕ್ಷದ ವಕ್ತಾರ ಶೆಹನಾಝ್ ಪೂನಾವಾಲ್ಲಾ ಅಸಾದುದ್ದೀನ್ ಒವೈಸಿಗೆ ತಿರುಗೇಟು ನೀಡಿದ್ದು, ಎಐಎಂಐಎಂ ಪಕ್ಷಕ್ಕೆ ಹಿಜಾಬ್ ಧರಿಸಿದ ಮಹಿಳೆಯನ್ನು ಯಾವಾಗ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next