Advertisement

ವಿರಳ ಲಿಪಿ ಓದಲು ಕಲಿಯಬೇಕೆ?

11:49 AM Sep 15, 2018 | |

ಆಗಿನ ರಾಜಮಹಾರಾಜರ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ರಾಜನು ವಿರಾಜಮಾನನಾಗಿ ಸಿಂಹಾಸನದ ಮೇಲೆ ಕುಳಿತಿರುತ್ತಾನೆ. ಅವನ ಮುಂದೆ ಯಾರೋ ಪಂಡಿತ ತಾಳೇಗರಿ ಹಿಡಿದು ಯಾವುದೋ ಸಂದೇಶ ಓದುತ್ತಿರುತ್ತಾನೆ. ಈಗಿನ ಕಂಪ್ಯೂಟರ್‌ ಯುಗದವರು ಆ ತಾಳೇಗರಿಯನ್ನು ಓದಲು ಸಾಧ್ಯವಾ? ಖಂಡಿತಾ ಅನುಮಾನ. ಹಸ್ತಪ್ರತಿಗಳಲ್ಲಿನ ಈ ಲಿಪಿಗಳನ್ನು ಓದಲು ವಿಶೇಷ ಪಾಂಡಿತ್ಯ ಬೇಕು. ಅದಕ್ಕೆ ತರಬೇತಿ ನೀಡಲೆಂದೇ ಒಂದು ಕಾರ್ಯಾಗಾರ ಆಯೋಜನೆಗೊಂಡಿದೆ. ಪ್ರಾಯೋಗಿಕವಾಗಿ “ಮೋಡಿ’ ಮತ್ತು “ತಿಗಳಾರಿ’ ಲಿಪಿಗಳ ಕಲಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೋಡಿ ಲಿಪಿ, ಶಿವಾಜಿ ಕಾಲದ್ದು. ತಿಗಳಾರಿ, ಮಲಯಾಳಂ ಮತ್ತು ತುಳು ಭಾಷೆಯ ವಿಸ್ತರಣಾ ರೂಪ. ಈ ಎರಡೂ ವಿರಳ ಲಿಪಿಗಳ ಹುಟ್ಟು, ಬೆಳವಣಿಗೆಗಳ ಕುರಿತು ಮಾಹಿತಿಯನ್ನೂ ತಿಳಿದುಕೊಳ್ಳಬಹುದು.

Advertisement

ಯಾವಾಗ?: ಸೆ.15, ಸಂ.5.30- ರಾ.8
ಎಲ್ಲಿ?: ಸೆಮಿನಾರ್‌ ಹಾಲ್‌, ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಮಲ್ಲತ್ತಹಳ್ಳಿ
ಸಂಪರ್ಕ: 080- 23212320
ಪ್ರವೇಶ: 500 ರೂ.
 

Advertisement

Udayavani is now on Telegram. Click here to join our channel and stay updated with the latest news.

Next