ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಈ ಮೂಲಕ 15ನೇ ಆವೃತ್ತಿಯ ಐಪಿಎಲ್ ಕೂಟದಲ್ಲಿ ಫಾಫ್ ಪಡೆ ಮೊದಲ ಬಾರಿಗೆ ಗೆಲುವಿನ ನಗೆ ಚೆಲ್ಲಿದೆ.
ಆರ್ ಸಿಬಿ ಗೆಲುವಿನಲ್ಲಿ ಆಲ್ ರೌಂಡರ್ ವಾನಿಂದು ಹಸರಂಗ ಪ್ರಮುಖ ಪಾತ್ರ ವಹಿಸಿದರು. ನಾಲ್ಕು ವಿಕೆಟ್ ಕಿತ್ತು ಕೆಕೆಆರ್ ಬ್ಯಾಟರ್ ಗಳನ್ನು ಕಟ್ಟಿಹಾಕಿದ ಹಸರಂಗ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಪ್ರತಿ ಸಲ ವಿಕೆಟ್ ಪಡೆದಾಗಲೂ ವಾನಿಂದು ಹಸರಂಗ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಹಸರಂಗ, “ನನ್ನ ಅಚ್ಚುಮೆಚ್ಚಿನ ಫುಟ್ಬಾಲ್ ಆಟಗಾರ ನೇಮರ್. ಹೀಗಾಗಿ ನಾನು ಅವರ ಸಂಭ್ರಮಾಚರಣೆಯ ಶೈಲಿಯನ್ನು ಅನುಕರಿಸುತ್ತಿದ್ದೇನೆ. ಆಟವಾಡುವ ಸಂದರ್ಭದಲ್ಲಿ ನಾನು ಯಾವುದೇ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕಾಗಿಯೇ ನಾನು ಯಶಸ್ವಿಯಾಗಿದ್ದೇನೆ ಎಂದು ಭಾವಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ:ಹೀನಾಯವಾಗಿ ಸೋತ ದ.ಆಫ್ರಿಕಾ: ಮತ್ತೊಮ್ಮೆ ವಿಶ್ವಕಪ್ ಫೈನಲ್ ತಲುಪಿದ ಇಂಗ್ಲೆಂಡ್
ನಾಲ್ಕು ಓವರ್ ಬೌಲಿಂಗ್ ಮಾಡಿದ್ದ ವಾನಿಂದು ಹಸರಂಗ ಕೇವಲ 20 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದರು. ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್, ಸುನೀಲ್ ನರೈನ್, ಟಿಮ್ ಸೌಥಿ ಮತ್ತು ವಿಕೆಟ್ ಕೀಪರ್ ಶೆಲ್ಡನ್ ಜ್ಯಾಕ್ಸನ್ ವಿಕೆಟ್ ಗಳನ್ನು ಹಸರಂಗ ಕಿತ್ತಿದ್ದರು.