Advertisement

ಅಲೆಮಾರಿ ದನಗಳ ವಿಶ್ರಾಂತಿ ತಾಣ

05:20 PM Sep 19, 2017 | |

ಕುಂಬಳೆ: ಸದಾ ಜನಜಂಗುಳಿಯ ಕಾಸರಗೋಡು ಹೊಸ ಬಸ್‌ ನಿಲ್ದಾಣದಲ್ಲಿ ಜನಗಳೊಂದಿಗೆ ದನಗಳನ್ನೂ ಕಾಣಬಹುದು. ಇಲ್ಲಿ ರಾತ್ರಿ ಹಗಲೆನ್ನದೆ ಅಲೆಮಾರಿ ದನಗಳು ಠಿಕಾಣಿ ಹೂಡಿರುತ್ತವೆ. ಸುಮಾರು ಒಂದು ಡಜನ್‌ನಷ್ಟು ದಷ್ಟಪುಷ್ಟ ಜಾನುವಾರುಗಳ ಹಿಂಡು ಲಂಗು ಲಗಾಮಿಲ್ಲದೆ ನಿಲ್ದಾಣದ ಒಳಗೆ ಮತ್ತು ಹೊರಗೆ ಸದಾ ಸ್ವೇಚ್ಛೆಯಿಂದ ವಿಶ್ರಾಂತಿ ಪಡೆಯುತ್ತಿರುವ ದೃಶ್ಯವನ್ನು ನಿತ್ಯಕಾಣಬಹುದಾಗಿದೆ.

Advertisement

ಇದರಿಂದಾಗಿ ಹಲವಾರು ಬಸ್ಸುಗಳಿಗೆ ಸೂಚಿಸಿದ ನಿರ್ದಿಷ್ಟ ಸ್ಥಳದಲ್ಲಿ ತಂಗಲು ಮತ್ತು ಪ್ರಯಾಣಿಕರಿಗೆ ಇಲ್ಲಿಂದ ಬಸ್‌ ಏರಲು ತೊಂದರೆಯಾಗುವುದು. ಇದು ಇಂದು ನಿನ್ನೆಯ ಕಥೆಯಲ್ಲ. ಹಲವಾರು ತಿಂಗಳುಗಳಿಂದಲೂ ಜಾನುವಾರುಗಳು ಇಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿವೆ. ನಿಲ್ದಾಣದ ಹೊರಗಿನ ಇಂಟರ್‌ಲಾಕ್‌ ಅಳವಡಿಸಿದ ವಿಶಾಲವಾಗಿರುವ ರಸ್ತೆಯಲ್ಲಿ ಜಾನುವಾರುಗಳು ಮಲಗಿರುವುದರಿಂದ ಬಸ್‌ಗಳ ಸುಗಮ ಸಂಚಾರಕ್ಕೆ ತೊಡಕ್ಕಾಗುತ್ತಿದೆ. ಆದರೆ ಜಾನುವಾರುಗಳ ಮಾಲಿಕರಾಗಲಿ ಕಾಲೂನು ಪಾಲಕರಾಗಲಿ ಇದನ್ನು ಈ ತನಕ ಗಂಭೀರವಾಗಿ ಪರಿಗಣಿಸಲಿಲ್ಲ.

ಜಾನುವಾರುಗಳನ್ನು ಸಾರ್ವಜನಿಕವಾಗಿ ಬೇಕಾಬಿಟ್ಟಿ ಬಿಡಬಾರದು. ಸಾರ್ವ ಜನಿಕರಿಗೆ ಜಾನುವಾರುಗಳಿಂದ ತೊಂದರೆಯಾಗಬಾರದು. ಕಟ್ಟಿ ಹಾಕಿ ಸಾಕಬೇಕೆಂಬುದಾಗಿ  ಎಂದೋ ಕಾನೂನು ಜಾರಿಯಲ್ಲಿದ್ದರೂ ಇದು ತಮಗೆ ಬಾಧಕವಲ್ಲವೆಂಬುದಾಗಿ ಈ ಜಾನುವಾರು ಸಾಕಣೆದಾರರ ನಿಲುವೆಂಬ ಆರೋಪ ಸಾರ್ವಜನಿಕರದು. ಸಾರ್ವಜನಿಕರಿಗೆ ಕಿರುಕುಳವಾಗುವ ಇದರ ವಿರುದ್ಧ ಕಾನೂನು ಪಾಲಕರೂ ಮುಂದಾಗ ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ರಾತ್ರಿ ಪೊಲೀಸರ ಗಸ್ತು ತಿರುಗಾಟ ದಿಂದಾಗಿ ಈ ಜಾನುವಾರಗಳಿಗೆ ಕಳ್ಳರಿಂದ ರಕ್ಷಣೆ ದೊರೆಯುತ್ತಿದೆ.

ಈ ರೀತಿ ಜಾನುವಾರುಗಳನ್ನು ಲಂಗುಲಗಾಮಿಲ್ಲದೆ ಬಿಡುವು ದರಿಂದ ಇದರ ಲಾಭವನ್ನು ಗೋ ಸಾಗಾಟಗಾರರು ಪಡೆಯುತ್ತಿದ್ದಾರೆ. ದನ ಕರುಹಾಕಿದಾಗ ಮಾತ್ರ ತಮ್ಮ ಜಾನುವಾರುಗಳನ್ನು ಗುರುತಿಸಿ ಹಟ್ಟಿಗೊಯ್ಯುವ ಮಾಲಕರು ಉಳಿದ ದಿಗಳಲ್ಲಿ ತಮ್ಮ ಜಾನುವಾರುಗಳತ್ತ ಗಮನ ಹರಿಸದಿರುವುದು. ಗೋ ಕಳ್ಳರಿಗೆ ವರದಾನವಾಗುವುದು. 

ಗುಡ್ಡದಿಂದ ಹಗಲು ರಾತ್ರಿ ಎನ್ನದೆ ವಾಹನಗಳಲ್ಲಿ ದಿನದಿಂದ ದಿನಕ್ಕೆ ಜಾನುವಾರುಗಳನ್ನು ಕದ್ದೊಯ್ಯು ವುದರಿಂದ ದೇಶದ ಪ್ರಧಾನ ಸಂಪತ್ತುಗಳಲ್ಲಿ ಒಂದಾಗಿರುವ ಜಾನುವಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಪ್ರಕೃತಿಯ ಏರುಪೇರಿಗೆ ಕಾರಣವಾಗುತ್ತಿದೆ ಎಂಬುದು ವಿಷಾದನೀಯ ವಿಚಾರ.

Advertisement

ಅಚ್ಯುತ ಚೇವಾರ್‌

Advertisement

Udayavani is now on Telegram. Click here to join our channel and stay updated with the latest news.

Next