Advertisement

ಶಿರೂರಲ್ಲಿ ನೀರಿಗಾಗಿ ಜಾನುವಾರುಗಳ ಅಲೆದಾಟ

01:07 PM May 05, 2022 | Team Udayavani |

ಶಿರೂರ: ಈಗಾಗಲೇ ಬೇಸಿಗೆಯ ರಣಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇನ್ನೂ ಎರಡು ತಿಂಗಳು ಕಳೆಯುವುದು ಹೇಗೆ ಎಂಬ ಚಿಂತೆ ಜನರಲ್ಲಿ ಕಾಡುತ್ತಿದೆ. ಬಿಸಿಲಿನ ತಾಪಮಾನಕ್ಕೆ ಜನರು ಬಸವಳಿದಿದ್ದಾರೆ. ಇದರಿಂದ ಪಟ್ಟಣದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲವಾದರೂ ಜಾನುವಾರು ಹಾಗೂ ಕುರಿಗಳು, ಆಡುಗಳಿಗೆ ಸಮಸ್ಯೆ ಆಗುತ್ತಿದೆ.

Advertisement

ಪಟ್ಟಣದ ಐತಿಹಾಸಿಕ ಎರಡು ಕೆರೆಗಳಲ್ಲಿ ಶೇ. 60ರಷ್ಟು ನೀರು ಇದ್ದರೆ, ಸಣ್ಣ ಕೆರೆ (ಪಡಗೇರಿಯಲ್ಲಿ) ಶೇ. 30ರಷ್ಟು ನೀರು ಇಲ್ಲದಂತಾಗಿದೆ. ಇದರಿಂದ ಜಾನುವಾರು, ಕುರಿ, ಆಡುಗಳನ್ನು ಸಾಕಿ ಬದುಕು ಸಾಗಿಸುವ ಕುರಿಗಾಹಿಗಳು ಬೇಸಿಗೆಯಲ್ಲಿ ನೀರು ಸಿಗದೆ ಅಲೆದಾಡುವಂತಾಗಿದೆ.

ಶಿರೂರ ಪಟ್ಟಣದಲ್ಲಿ ಹೆಚ್ಚಾಗಿ ರೈತರು ಜಾನುವಾರುಗಳನ್ನು ಸಾಕಿದ್ದು, ಅಲ್ಲದೇ ಶಿರೂರ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕುರಿ ಹಿಂಡುಗಳಿದ್ದು, ಗುಡ್ಡಗಾಡು ಪ್ರದೇಶದ ಪ್ರಮುಖ ಉದ್ಯಮವಾಗಿದೆ. ಪಟ್ಟಣದ ಕೆರೆಗಳಲ್ಲಿ ಸದ್ಯದ ಮಟ್ಟಿಗೆ ನೀರಿನ ಕೊರತೆ ಇಲ್ಲ ಆದರೆ, ಕೃಷಿ ಭೂಮಿಯಲ್ಲಿನ ಭೋಸರೆಡ್ಡಿಕೆರೆ, ಶಿವನಕೆರೆ, ಕಕ್ಕಿಹಳ್ಳ, ಗುಡಮೆಂಚಿ ಕೆರೆಗಳಲ್ಲಿ ಸ್ವಲ್ಪ ಪ್ರಮಾಣದ ನೀರಿದ್ದು, ಇದರಿಂದ ಕುರಿಗಳಿಗೆ ನೀರಿನ ದಾಹ ತೀರದಂತಾಗಿದೆ. ಇದರಿಂದ ಆಹಾರ, ನೀರಿಗಾಗಿ ಸುಡು ಬಿಸಿಲಿನಲ್ಲಿ ಅಲೆದಾಡಬೇಕಾಗಿದೆ, ಪಡಗೇರಿಗೆ ಬಂದಿದ್ದೆ ಹಿನ್ನಿರು ಸಹ ಈಗ ಇಲ್ಲದಂತಾಗಿದೆ, ಜನರ ಕುಡಿಯುವ ನೀರಿಗಾಗಿ ಮಿಣಚಮಡ್ಡಿ, ಬೊಸಭಾವಿ, ಅಂಬೇಡ್ಕರ್‌ ನಗರ, ಗಾಳಿದುರ್ಗಮ್ಮ ಗುಡಿ ಹತ್ತಿರ, ಸೇರಿದಂತೆ 8 ಬೋರವೆಲ್‌ಗ‌ಳು ಕಾರ್ಯ ಮಾಡಿದರೆ, ಬಹು ಗ್ರಾಮ ಕುಡಿವ ನೀರು ಯೋಜನೆಯ ನೀರನ್ನು ಸಹ ಪಟ್ಟಣದ ಎರಡು ಓವರ್‌ ಟ್ಯಾಂಕಿಗೆ ಸೇರಿಸಿ ಜನರಿಗೆ ಒದಗಿಸಲಾಗುವುದು. ಇದರಿಂದ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದು. ಅಲ್ಲದೇ ಬೇಸಿಗೆಯಲ್ಲಿ ವಿದ್ಯುತ್‌ ಕಡಿತ ಇತರೆ ಸಮಸ್ಯೆಗಳಿಂದ ಸಮಸ್ಯೆಗಳು ಸಹಜ. ಜನರು ಸಹ ತಮ್ಮ ನಲ್ಲಿಗಳ ನೀರು ಪೋಲಾಗದಂತೆ ನೋಡಿ ಮಿತವಾಗಿ ಬಳಿಸಿ ನಮ್ಮೊಂದಿಗೆ ಸಹಕರಿಸಬೇಕೆಂದು ಪಪಂ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಜನರಷ್ಟೆ ಜಾನುವಾರುಗಳ ಕುರಿ, ಆಡುಗಳಿಗೂ ಸಹ ಕುಡಿವ ನೀರಿನ ವ್ಯವಸ್ಥೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲ. ಕೆಲ ಬೋರವೆಲ್‌ಗ‌ಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, 15ನೇ ಹಣಕಾಸು ಯೋಜನೆಯಲ್ಲಿ ನಿಗದಿ ಪಡಿಸಿದ ಎರಡು ಕಡೆ ಬೋರ್‌ವೆಲ್‌ ಕೊರೆಸಲಾಗುವುದು. ಇದಕ್ಕೆ ಜಿಲ್ಲಾ ಧಿಕಾರಿಗಳು ಮಂಜೂರು ನೀಡಿದ್ದು, ಇದು ತ್ವರಿತವಾಗಿ ನಡೆಯುವುದರೊಂದಿಗೆ ಕುರಿ ಜಾನುವಾರುಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. -ಐ.ಜಿ. ಕೊಣ್ಣೂರ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಶಿರೂರ

Advertisement

Udayavani is now on Telegram. Click here to join our channel and stay updated with the latest news.

Next