Advertisement
ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಇ. ಕಲ್ಲೇರಿ ಹಾಗೂ ಕಾರ್ಯದರ್ಶಿ ಕೆ. ಸೇಸಪ್ಪ ರೈ ಅವರ ಮಾರ್ಗದರ್ಶನದಲ್ಲಿ ಮನಸೆಳೆಯುವ ಗೋಡೆ ಚಿತ್ರಗಳನ್ನು ಚಿಕ್ಕಮಗಳೂರು ಮೂಲದ ಕಲಾವಿದರು ಕೆಲವು ದಿನಗಳಿಂದ ಬಿಡಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಹುಟ್ಟೂರು ರಾಮಕುಂಜದಲ್ಲಿರುವ ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಪುಟಾಣಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಮಕ್ಕಳಿಗೂ ಚಿತ್ರಗಳೆಂದರೆ ಪ್ರೀತಿ. ಗೋಡೆ ಚಿತ್ರಗಳು ಮಕ್ಕಳು ಮತ್ತು ಪುಸ್ತಕದ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ. ಇಲ್ಲಿ ವಿಷಯಾಧಾರಿತ ಚಿತ್ರಗಳಿದ್ದು, ಪ್ರತಿಯೊಂದು ಚಿತ್ರವೂ ಮಕ್ಕಳಿಗೆ ಸ್ಫೂರ್ತಿ ತುಂಬುವ, ಅವರ ಮನಸ್ಸನ್ನು ಉಲ್ಲಾಸಗೊಳಿಸುವ ನಿಟ್ಟಿನಲ್ಲಿ ರಚನೆಯಾಗಿವೆ. ಮಾನವೀಯ ಮೌಲ್ಯವನ್ನು ವೃದ್ಧಿಸುವ ಮತ್ತು ಮನುಷ್ಯ ಸಂಬಂಧವನ್ನು ಪರಿಚಯಿಸುವ ಚಿತ್ರಗಳನ್ನು ರಚಿಸಲಾಗಿದೆ. ಪ್ರಾಣಿ ಪಕ್ಷಿಗಳು, ಪರಿಸರ ಪ್ರಜ್ಞೆ ಮೂಡಿಸುವ ಚಿತ್ರಗಳು, ಭಾರತಾಂಬೆಯ ಚಿತ್ರ, ರಾಜ್ಯ ಮತ್ತು ರಾಷ್ಟವನ್ನು ಪ್ರತಿಬಿಂಬಿಸುವ ಮಕ್ಕಳ ಚಿತ್ರವು ಪಠ್ಯಕ್ರಮಕ್ಕೆ ಪೂರಕವಾಗಿದೆ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈ ಅವರು. ಕಲಿಕೆಯಲ್ಲಿ ಖುಷಿ
ಮಕ್ಕಳ ಅಲೋಚನೆಯ ಅನುಗುಣವಾಗಿ ಅಂದರೆ ಜೋಕಾಲಿ, ನವಿಲು, ಮೊಲ, ಪ್ರಕೃತಿ ಹಾಗೂ ಛೋಟಾ ಭೀಮ್‌ಗಳಂತಹ ಚಿತ್ರಗಳನ್ನು ಬಿಡಿಸಲಾಗುತ್ತದೆ. ಚಿಕ್ಕ ಮಕ್ಕಳಿಗೆ ಚಿತ್ರಗಳೇ ಕಲಿಕಾ ಮಾಧ್ಯಮವಾಗಿರುವುದರಿಂದ ಅವರ ಕಲಿಕೆ ಖುಷಿಯಿಂದ ಕೂಡಿರುತ್ತದೆ.
– ನಾರಾಯಣಚಿಕ್ಕಮಗಳೂರು,
ಚಿತ್ರ ಕಲಾವಿದ
Related Articles
ಕಿಂಟರ್ ಗಾರ್ಟನ್ ಮಕ್ಕಳಿಗೆ ಇಂತಹ ಗೋಡೆ ಚಿತ್ರಗಳಿಂದ ಕಲಿಕಾ ವಿಷಯಗಳಿಗೆ ಸಹಾಯವಾಗುತ್ತದೆ. ಅಲ್ಲದೆ ಈ ಚಿತ್ರಗಳು ಗೋಡೆಗಳಿಗೆ ಜೀವಂತಿಕೆಯನ್ನು ತಂದುಕೊಡುತ್ತವೆ.
– ಲೋಹಿತಾ ಎ.
ಮುಖ್ಯ ಶಿಕ್ಷಕಿ
Advertisement