Advertisement

ನುಡಿದಂತೆ ನಡೆದ ಕಾಂಗ್ರೆಸ್‌ ಸರಕಾರ: ಶರಣಬಸಪ್ಪಗೌಡ

01:19 PM Mar 24, 2018 | Team Udayavani |

ಕೆಂಭಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ರೈತರ ಹಿತದೃಷ್ಟಿಯಿಂದ ಹಲವು ಕೃಷಿ ಹಾಗೂ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

Advertisement

ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಜಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರಿಗೆ ಶುಕ್ರವಾರ ಯಕ್ತಾಪೂರ ಗ್ರಾಮದ ಗುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 2018-19ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಜಾರಿಗೆ ತಂದಿರುವ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ 200 ಕೋಟಿ ರೂ. ಗಳಿಂದ 500 ಕೋಟಿ ರೂ. ಗಳ ವರೆಗೆ ಒಟ್ಟು ಆರು ಹಂತದ ಕಾಮಗಾರಿಗೆ ಸರ್ಕಾರ ಹಸಿರು ನಿಶಾನೆ ತೋರಿದ್ದು, ಅಂತಿಮವಾಗಿ ತಜ್ಞರ ಸಮಿತಿ ಒಂದನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ವರದಿ ನೀಡಲಿದೆ ಎಂದರು.

ಒಟ್ಟಾರೆ ಸುರಪುರ ತಾಲೂಕಿನ ಶಹಾಪುರ ಮತಕ್ಷೆತ್ರದ ಒಟ್ಟು 15 ಗ್ರಾಮಗಳು ಮುಂದಿನ ದಿನಗಳಲ್ಲಿ 6.5 ಲಕ್ಷ ಹೆಕ್ಟೇರ್‌ ಭೂಮಿ ನೀರಾವರಿಗೆ ಒಳಪಡಲು ಶತಸಿದ್ಧವಾಗಿದ್ದು, ಜನತೆಗೆ ಯಾವುದೇ ಗೆಲುವು ಹಾಗೂ ಸರ್ಕಾರದ ಸವಲತ್ತು ಪಡೆಯಲು ಹೋರಾಟ ಅತೀ ಮುಖ್ಯವಾಗಿದ್ದು, ಹೋರಾಟದ ಮುಂಚೂಣಿ ವಹಿಸಿ ಈ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಸಹಕರಿಸಿದ ಕರ್ನಾಟಕ ಪ್ರಾಂತ ರೈತ ಸಂಘದ ಯಲ್ಲಪ್ಪ ಚಿನ್ನಾಕಾರ ಸಹಿತ ಎಲ್ಲ ಪದಾ ಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಗೌಡ ಹುಲಕಲ್‌, ಸರ್ಕಾರದ ಸೌಲಭ್ಯಗಳನ್ನು ನಾನೇ ಮಾಡಿದ್ದೇನೆ ಎಂದು ಶಾಸಕ ಗುರು ಪಾಟೀಲ್‌ ಸುಳ್ಳು ಹೇಳಿ ದೇವರ ಮೇಲೆ ಪ್ರಮಾಣ ಮಾಡುತ್ತಿದ್ದಾರೆ ಹೇಳಿದರು.

ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ಜಿಪಂ ಸದಸ್ಯ ಬಸನಗೌಡ ಯಡಿಯಾಪೂರ, ತಾಪಂ ಉಪಾಧ್ಯಕ್ಷೆ ಮಂಜುಳಾ ನಂದರಗಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ ಪಾಟೀಲ, ಕೆಂಭಾವಿ ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ,  ಖಂಡರಾದ ಬಸನಗೌಡ ಹೊಸಮನಿ,

ಹಣಮಂತ್ರಾಯ ಮಾಣಸುಣಗಿ, ಅಮ್ಮಣ್ಣ ಧರಿ, ಫಯಾಜ ಸಾಸನೂರ, ಶಶಿಧರ ಮಾಲಿಪಾಟೀಲ, ಖಾಜಾಪಟೇಲ ಕಾಚೂರ ಸೇರಿದಂತೆ ಹಲವರು ಇದ್ದರು. ಬಸವರಾಜ ಚಿಂಚೋಳಿ ನಿರೂಪಿಸಿದರು. ಗೌಡಪ್ಪಗೌಡ ನಂದರಗಿ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next