Advertisement
ಈ ವೇಳೆ ಮಾತನಾಡಿದ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಕೆಸಿ ನೌಷದ್, ನ್ಪೋರ್ಟ್ಸ್, ಲೈಫ್‌ಸ್ಟೈಲ್, ಫಾರ್ಮಲ್ಸ್, ಕ್ಯಾಶ್ಯುವಲ್ಸ್ ಮತ್ತು ಕಿಡ್ಸ್ ಸೇರಿ ವಿವಿಧ ಶ್ರೇಣಿಯ ಪಾದರಕ್ಷೆ ಮತ್ತು ಶೂಗಳನ್ನು “ವಾಕರೂ’ ಬ್ರ್ಯಾಂಡ್ ಹೆಸರಿನಲ್ಲಿ ತಯಾರಿಸಲಾಗಿದೆ. ಆಯಾ ವಿನ್ಯಾಸಕ್ಕೆ ತಕ್ಕಂತೆ ದರವನ್ನು ನಿಗದಿಪಡಿಸಲಾಗಿದೆ.
Related Articles
Advertisement
ದಕ್ಷಿಣ ಭಾರತದಲ್ಲಿಯೇ ವಿಕೆಸಿ ಕಂಪನಿಗೆ ಹೆಚ್ಚಿನ ಬೇಡಿಕೆ ಇದ್ದು, ಇದೀಗ ಉತ್ತರ ಭಾರತ, ವಿದೇಶಗಳಿಗೂ ವಹಿವಾಟು ವಿಸ್ತರಿಸುತ್ತಿದ್ದೇವೆ. ಕರ್ನಾಟಕದ ನಂಜನಗೂಡು, ಬೆಂಗಳೂರು ಸೇರಿದಂತೆ ನಲ್ಲೂರು, ಕೊಯಮತ್ತೂರು, ಕ್ಯಾಲಿಕಟ್, ದೆಹಲಿ, ಭೂಪಾಲ್ ಹಾಗೂ ಬಾಂಗ್ಲಾದೇಶದಲ್ಲಿ ಉತ್ಪಾದನಾ ಘಟಕಗಳಿವೆ.
ವಾರ್ಷಿಕ ಉತ್ಪಾದನೆಯ ಶೇ.5ರಷ್ಟು ಪಾದರಕ್ಷೆಗಳನ್ನು ದೇಶ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಂಪನಿ ನಿರ್ದೇಶಕ ಎನ್.ಪಿ.ಮುಸ್ತಫಾ ಯಾಸೀನ್ ಮಾತನಾಡಿ, ಯುವ ಜನತೆಯ ಆಸೆ, ಕನಸುಗಳು ಬಹು ಎತ್ತರಕ್ಕಿದ್ದು ಅಂತವರ ನಿರಂತರ ಓಟಕ್ಕಾಗಿಯೆ ಹೊಸ ವಿನ್ಯಾಸದ ಪಾದರಕ್ಷೆ ಸಿದ್ಧಪಡಿಸಲಾಗಿದೆ.
ಹೀಗಾಗಿಯೇ “ಬಿ ರೆಸ್ಟ್‌ಲೆಸ್’ ಎಂಬ ಅಡಿಬರಹ ನೀಡಲಾಗಿದೆ. ಈ ಹೊಸ ಶ್ರೇಣಿಯ ಪಾದರಕ್ಷೆಗಳು ನಡೆಗೆಯಲ್ಲಿ ಹಿಡಿತ ಹಾಗೂ ಹಿತ ಸಾಧಿಸಲು ಅನುಕೂಲವಾಗುವಂತಿವೆ. ನ್ಪೋರ್ಟ್ಸ್ ಶೂ 600 ರೂ.ನಿಂದ 1400 ರೂ., ಕ್ಯಾಸುಲ್ಸ್ 200 ರೂ.ನಿಂದ 400 ರೂ. ಹಾಗೂ ಫಾರ್ಮಲ್ಸ್ ಪಾದರಕ್ಷೆ 400 ರೂ.ನಿಂದ 890 ರೂ.ವರೆಗೆ ದರ ಇದೆ ಎಂದು ತಿಳಿಸಿದರು. ಗ್ರಾಹಕರಿಗೆ ಉತ್ತಮ ದರ್ಜೆಯ ಪಾದರಕ್ಷೆಗಳನ್ನು ನೀಡುವುದು ಸಂಸ್ಥೆಯ ಗುರಿಯಾಗಿದೆ.
ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಎಲ್ಲ ವಯೋಮಾನದ ಪಾದರಕ್ಷೆಗಳನ್ನು ತಯಾರಿಸಲಾಗುವುದು. 20 ಕೋಟಿ ರೂ. ನಿಂದ ಪ್ರಾರಂಭವಾದ ಕಂಪನಿಯು ಇದೀಗ 1400 ಕೋಟಿ ರೂ.ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ದೇಶ ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಿಸಲಾಗುವುದು ಎಂದರು.