Advertisement

ಏರ್‌ ಇಂಡಿಯಾ ಬಂಡವಾಳ ಹಿಂತೆಗೆತಕ್ಕೆ ಗ್ರೀನ್‌ ಸಿಗ್ನಲ್‌

03:45 AM Jun 29, 2017 | Team Udayavani |

ಹೊಸದಿಲ್ಲಿ: ನಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಏರ್‌ ಇಂಡಿಯಾವನ್ನು ಪಾರು ಮಾಡಲು ಖಾಸಗೀ ಕರಣಗೊಳಿಸುವ ಸಲುವಾಗಿ ಕೇಂದ್ರ ಸರಕಾರ ಇದೀಗ ಮೊದಲ ಹೆಜ್ಜೆ ಇಟ್ಟಿದೆ. 

Advertisement

ಏರ್‌ ಇಂಡಿಯಾದಿಂದ ಬಂಡವಾಳ ಹಿಂತೆಗೆತಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಮಿತಿ ಬುಧವಾರದ ಸಭೆಯಲ್ಲಿ ಗ್ರೀನ್‌ ಸಿಗ್ನಲ್‌ ನೀಡಿದೆ. “ಬಂಡವಾಳ ಹಿಂತೆಗೆತಕ್ಕೆ ತಾತ್ವಿಕ ಅನು ಮೋದನೆ ನೀಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ  ಜೇಟ್ಲಿ ಹೇಳಿದ್ದಾರೆ. 

ಹಣಕಾಸು ಸಚಿವ ನೇತೃತ್ವದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾ ಲಯ ಸಮಿತಿಯೊಂದನ್ನು ಸ್ಥಾಪಿಸಲಿದ್ದು, ಈ ಬಗ್ಗೆ ಹೆಚ್ಚಿನ ನಿರ್ಧಾರ ತೆಗೆದು ಕೊಳ್ಳಲಿದೆ. ಈ ಸಮಿತಿ ಸ್ಥಾಪನೆ ಪ್ರಸ್ತಾಪವನ್ನೂ ಅಂಗೀಕರಿ ಸಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. 

ಆದರೆ ಈ ಬಂಡವಾಳ ಹಿಂತೆಗೆತದ ಅವಧಿ, ಬಂಡವಾಳ ಹಿಂತೆಗೆತದ ವಿಧಾನ, ಸಮಿತಿ ಅಂತಿಮ ವರದಿ ನೀಡುವ ಕುರಿತು ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ. ಸಮಿತಿ ಸದಸ್ಯರನ್ನು ಪ್ರಧಾನಿ ಮೋದಿ ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ. 

ದೇಶೀಯ ವಿಮಾನಯಾನದ ಶೇ.14 ರಷ್ಟು ಮಾರುಕಟ್ಟೆಯನ್ನು ಏರ್‌ ಇಂಡಿಯಾ ಹೊಂದಿದ್ದು, ಸಿಂಹಪಾಲನ್ನು ಇಂಡಿಗೋ ಮತ್ತು ಜೆಟ್‌ ಏರ್‌ವೆàಸ್‌ ಹೊಂದಿದೆ. 

Advertisement

ಹಿಂದಿನಿಂದಲೂ ಏರ್‌ ಇಂಡಿಯಾ ಬಂಡವಾಳ ಹಿಂತೆಗೆತದ, ಖಾಸಗೀಕರಣದ ಮಾತುಗಳು ಕೇಳಿಬರುತ್ತಿದ್ದವು. ಆದರೆ ಕಳೆದ 25 ವರ್ಷಗಳಿಂದ ಇದಕ್ಕೆ ಕಾರ್ಮಿಕ ಸಂಘ ಟನೆಗಳು, ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಬಂಡವಾಳ ಹಿಂತೆಗೆಯ ದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದವು. 

ಸದ್ಯ ಏರ್‌ ಇಂಡಿಯಾ 52 ಸಾವಿರ ಕೋಟಿ ರೂ. ನಷ್ಟದಲ್ಲಿದ್ದು, ಇದಕ್ಕಾಗಿ ಕೇಂದ್ರ ಕೂಡಲೇ ಬಂಡವಾಳ ಹಿಂತೆಗೆಯಬೇಕು. ಈ ಹಣವನ್ನು ಇತರ ವಲಯಗಳಿಗೆ ವಿನಿ ಯೋಗಿಸಲು ನೀತಿ ಆಯೋಗ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next