Advertisement
2019ರ ಫೆಬ್ರುವರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜಾವಲಿನ ಸ್ಪರ್ಧೆ ದುಬೈನಲ್ಲಿ ನಡೆಯಲಿದ್ದು, ಇದಕ್ಕಾಗಿ ಈ ಕ್ರೀಡಾಪಟು ಪಾಲ್ಗೊಳ್ಳಬೇಕಿದೆ. ಕ್ರೀಡಾ ಸಾಧನೆಗೆ ರಾಜ್ಯ ಸರಕಾರದಿಂದ ಬರಬೇಕಿದ್ದ 3 ಲಕ್ಷ ರೂ. ನೆರವು ಬಂದಲ್ಲಿ ಭಾಗವಹಿಸಲು ಅನುಕೂಲ ಆಗಲಿದೆ. ಆದರೆ, ಸರಕಾರದ ನಿರ್ಲಕ್ಷ್ಯ ಕ್ರೀಡಾಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
Related Articles
Advertisement
ಇದೊಂದೇ ಅಲ್ಲ: ಮಲೆನಾಡಿನ ಊರಿನಲ್ಲಿದ್ದೂ ನಾಡು ಹೆಮ್ಮೆಪಡುವ ಸಾಧನೆ ಮಾಡುತ್ತಿರುವ ಪ್ರತಾಪ್, ಕೇವಲ ಜಾವಲಿನ್‌ನಲ್ಲಿ ಮಾತ್ರವಲ್ಲ, ವಾಲಿಬಾಲ್‌ನಲ್ಲೂ ಗಮನ ಸೆಳೆದಿದ್ದಾನೆ. ಜತೆಯಲ್ಲಿ ಕಳೆದ ವರ್ಷ ರಾಷ್ಟ್ರಮಟ್ಟದ ಪಿವಿಎಫ್‌ಐ ಫೆಡರೇಶನ್ ಕಪ್ ಸಿಟ್ಟಿಂಗ್ ಪ್ಯಾರಾ ವಾಲಿಬಾಲ್ ನಲ್ಲಿ ಎರಡನೇ ಬಹುಮಾನ ಗಳಿಸಿದ್ದರು. ಕೆಲ ತಿಂಗಳ ಹಿಂದೆ ಉಡುಪಿಯ ಮಲ್ಪೆ ಕಡಲತಡಿಯಲ್ಲಿ ನಡೆದ ದೇಶದ ಮೊದಲ ಸ್ಟ್ಯಾಂಡಿಂಗ್ ವಾಲಿಬಾಲ್ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು. ಇದಕ್ಕೆ ಸಂಬಂಧಿಸಿದ ಬಹುಮಾನದ ಮೊತ್ತವೂ ಬರಬೇಕಿದೆ.
ವೈಕಲ್ಯ ತೊಡಕಾಗಲಿಲ್ಲ: ಹುಟ್ಟಿನಿಂದಲೇ ಎಡಗೈ ವೈಕಲ್ಯ ಹೊಂದಿರುವ ಪ್ರತಾಪ ಹೆಗಡೆ ಸಾಧನೆಗೆ ಮಾತ್ರ ವಾಲಿಬಾಲ್ ಅಥವಾ ಜಾವಲಿನ್ ಸಮಸ್ಯೆ ಆಗಲಿಲ್ಲ. ಸಣ್ಣವನಿದ್ದಾಗಲೇ ಓಟ, ಆಟದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ ಪ್ರತಾಪ್ ಉನ್ನತ ಶಿಕ್ಷಣ ಪಡೆದ ನಂತರ ರಾಷ್ಟ್ರಮಟ್ಟದಲ್ಲೂ ಸಾಧನೆ ತೋರಿದ್ದು ವಿಶೇಷ. ಎಸ್ಸೆಸ್ಸೆಲ್ಸಿ ಓದುವಾಗಲೇ ಗಂಭೀರ ಖಾಯಿಲೆಗೂ ಒಳಗಾಗಿದ್ದ ಪ್ರತಾಪನನ್ನು ಬದುಕಿಸಿದ್ದೇ ಕ್ರೀಡೆ ಎನ್ನುತ್ತಾರೆ ತಂದೆ ಪರಮಾನಂದ ಹೆಗಡೆ.
ಕ್ರೀಡೆಗೆ ಸರಕಾರ ನೀಡಬೇಕಿದ್ದ ನೆರವು ಬಂದಿಲ್ಲ ಎಂದು ಮುಖ್ಯಮಂತ್ರಿಗೂ ಪತ್ರ ಬರೆದಿದ್ದೆವು. ಅದಕ್ಕೆ ಈಗ ಸಿಎಂ ಕಚೇರಿ ಸ್ಪಂದಿಸಿದೆ. ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು ನಮಗೆ ಆಶಾದಾಯಕವಾಗಿದೆ.ಪರಮಾನಂದ ಹೆಗಡೆ, ಪಾಲಕ 2014ರಿಂದಲೇ ಸರಕಾರ ಕ್ರೀಡಾ ಪ್ರೋತ್ಸಾಹ ಮೊತ್ತ ಕೊಟ್ಟಿಲ್ಲ. ಇದು ಕ್ರೀಡಾಪಟುಗಳಿಗೆ ಮಾಡುವ ಅನ್ಯಾಯ. ತಕ್ಷಣ ಸರಿಮಾಡಬೇಕು.
ನರೇಂದ್ರ ಎಸ್.ಬಿ. ಕ್ರೀಡಾಭಿಮಾನಿ ರಾಘವೇಂದ್ರ ಬೆಟ್ಟಕೊಪ್ಪ