Advertisement

ಕಾದಿರುವೇ ನಿನಗಾಗಿ ಬರುವೆಯಾ ಜೊತೆಯಾಗಿ…

04:57 PM Jun 19, 2018 | Harsha Rao |

ನಲ್ಮೆಯ ಹುಡುಗಿಯೇ
ಗೆಳತಿ ಎನ್ನಲೇ? ಪ್ರೇಯಸಿ ಎನ್ನಲೇ? ಈಗಾಗಲೇ ಅನುಮತಿ ಸಿಕ್ಕಾಗಿದೆಯಲ್ಲ; ಹಾಗಾಗಿ ಶ್ರೀಮತಿ ಎಂದೇ ಕರೆದುಬಿಡಲೆ? ನಾಲ್ಕು ವರ್ಷದ ಹಿಂದೆ ಗೃಹ ಪ್ರವೇಶಕ್ಕೆ ಬಂದಾಗ ನಿನ್ನನ್ನು ಮೊದಲು ನೋಡಿದ್ದು. ಮೊದಲ ನೋಟದÇÉೇ ನನ್ನ ಮನದಲ್ಲಿ ಮನೆ ಮಾಡಿ¨ªೆ ನೀನು. ಆ ದಿನ ಮನೆ ಮುಂದೆ ತುಂಬಿ ಹರಿಯುವ ಆ ಕಾಲುವೆಯಿಂದ ಬಿಂದಿಗೆಯಲ್ಲಿ ನೀರನ್ನು ಹೊತ್ತು ತಂದ ನಿನ್ನನ್ನು ನೋಡಿ ಮನಸ್ಸು ಹೇಳಿತು- ನನ್ನ ಮನದ ಒಡತಿ ಇವಳಾದರೆ ಎಷ್ಟು ಚಂದ ಅಲ್ಲವಾ? ಅಂತ. ನಂತರ ಅದೆಷ್ಟೇ ಬಾರಿ ನಾನು ನಿಮ್ಮ ಮನೆಗೆ ಬಂದರೂ, ನಾನು ಕಣ್ಣಿಗೆ ಬೀಳುತ್ತಿದ್ದಂತೆ ನಾಚಿಕೆಯಿಂದ ತಲೆ ತಗ್ಗಿಸಿ ಗೋಡೆಯ ಹಿಂಭಾಗಕ್ಕೆ ಸರಿದು ನಿಂತು ಬಿಡುತ್ತಿ¨ªೆ ನೀನು. 

Advertisement

ನೀನೇ ನನ್ನ ಬಾಳ ಸಂಗಾತಿ ಎನ್ನುವುದಕ್ಕೆ ಹಿರಿಯರ ಆಶೀರ್ವಾದವೂ ಸಿಕ್ಕಿದೆ. ಇನ್ನೇಕೆ? ಈ ಕಿರು ನಾಚಿಕೆ, ಮತ್ತೇಕೆ ಈ ಮೌನ? ನನ್ನ ಮನದಂಗಳದಲ್ಲಿ ನಿನ್ನ ಕೋಮಲ ಕೈಗಳಿಂದ ಚಿತ್ತಾರವ ಬಿಡಿಸಿ, ಮನದ ಅಂದವನ್ನು ಹೆಚ್ಚಿಸು. ನನ್ನ ಮನದ ಂಗಳದ ಒಡತಿ ನೀನು. ನಿನ್ನನ್ನು ಜೋಪಾನವಾಗಿ ಕಾಯುವ ಹೊಣೆ ನನ್ನದು. ಅದೆಷ್ಟೋ ದಿನಗಳಿಂದ ಕೂಡಿಟ್ಟ ಕನಸಿಗೆ ಒಡತಿ ನೀನಾಗುವೆ, ಈ ಬಾಳ ಪಯಣದಲ್ಲಿ ಸುಖ ದುಃಖಗಳಿಗೆ ಹೆಗಲು ನೀಡಿ, ಬಾಳ ಬಂಡಿ ಸುಗಮವಾಗಿ ಸಾಗುವಂತೆ ಸಹಕರಿಸುವೆ.  

ಸಣ್ಣ-ಸಣ್ಣ ವಿಷಯಕ್ಕೂ ಮುನಿಸು ಬೇಡ. ಬಯಸಿದ್ದು ಸಿಗಲಿಲ್ಲವಲ್ಲ ಎಂಬ ಕೊರಗು ಬರುವುದೇ ಬೇಡ. ಈ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ಆಗಲಿ. ಭವಿಷ್ಯದ ಬಗ್ಗೆ ನನಗೆ ನೂರಾರು ಕನಸುಗಳಿದ್ದವು. ಈವರೆಗೂ ಕನಸುಗಳನ್ನು ಕೇಳುವವರು ಇರಲಿಲ್ಲ. ಮನಸ್ಸಿನ ಸಾವಿರ ಭಾವನೆಗಳನ್ನು ಹಂಚಿಕೊಳ್ಳುವ ಆಸೆಯಿತ್ತು. ಆದರೆ, ಕೇಳಿಸಿಕೊಳ್ಳುವ ಜನರೇ ಇರಲಿಲ್ಲ. ಈಗ ಅವೆಲ್ಲದರ ಒಡತಿಯಾಗಿ ನೀನು ಸಿಕ್ಕಿದ್ದೀಯ. ಈ ಮೊದಲು ಎಷ್ಟೋ ಹುಡುಗಿಯರನ್ನು ನೋಡಿ¨ªೆ. ಅವರಲ್ಲಿ ಯಾರೂ ನನ್ನನ್ನು ಸೆಳೆಯಲಿಲ್ಲ. ನಿನ್ನಲ್ಲಿ ಮಾತ್ರ ಹೊಸ ಸೆಳೆತವನ್ನು ಕಂಡೆ. ಈ ನಿನ್ನ ಸೆಳೆತ ಬದುಕಿನ ಕೊನೆಯ ಘಳಿಗೆವರೆಗೂ ಹೀಗೇ ಇರಲಿ.

ಒಲವಿನ ಹೂವನು ಕೈಯಲ್ಲಿ ಹಿಡಿದು ಕಾದಿರುವೆ ನಿನಗಾಗಿ, ಬರುವೆಯಾ ನೀ ಜೊತೆಯಾಗಿ? 

ಇಂತಿ ನಿನ್ನವ…
-ಸುನೀಲ್‌ ಪಾಟೀಲ್‌, ನಾಗೇಶನಹಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next