Advertisement

ಅಸ್ಪೃಶ್ಯತೆ ನಿವಾರಣೆಗೆ ಪಣತೊಡಿ

03:17 PM Jan 29, 2022 | Team Udayavani |

ಯಾದಗಿರಿ: ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಿರುವ ಕುರಿತು ಹಲವು ಸುದ್ದಿಗಳನ್ನು ನಾವು ಕೇಳುತ್ತಿದ್ದೇವೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ದೇಶಕ್ಕೆ ಕಳಂಕ ತರುವ ಈ ಅಸ್ಪೃಶ್ಯತೆ ನಿವಾರಣೆಗೆ ಎಲ್ಲರೂ ಪಣತೊಡಬೇಕು ಎಂದು ವಡ್ನಳ್ಳಿ ಗ್ರಾಮದ ಮುಖಂಡ ಪಾಂಡು ರಾಠೊಡ ಹೇಳಿದರು.

Advertisement

ವಡ್ನಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಬಸವಣ್ಣ ವಚನ ಸಂಗೀತ ಕಲಾ ಸಂಸ್ಥೆ ಇವರ ಸಹಯೋಗದಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ಪ್ರತಿಬಂಧ ಕಾಯ್ದೆ ವಿಚಾರಗೋಷ್ಠಿ ಬೀದಿನಾಟಕ ಜನಪದ ಮೂಲಕ ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಿಮ್ಮಯ್ಯ ಟೋಕಾಪುರ ವಡ್ನಳ್ಳಿ, ಮಲ್ಲಮ್ಮ ಹಣಮಂತ ವಡ್ನಳ್ಳಿ, ಪ್ರಿಯಾಂಕ ರಾಗುಗೌಡ ಪೊಲೀಸ್‌ ಪಾಟೀಲ್‌ ವಡ್ನಳ್ಳಿ, ಮಾಳಪ್ಪ ಬಾಲಪ್ಪ ವಡ್ನಳ್ಳಿ, ಗ್ರಾಪಂ ಸದಸ್ಯ ಹೊನ್ನಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next