Advertisement

ನ್ಯಾಯದ ಪಡಿತರಕ್ಕೆ ಅನ್ಯಾಯದ ಶುಲ್ಕ !

01:27 PM Apr 17, 2020 | Naveen |

ವಾಡಿ: ಹೆಮ್ಮಾರಿ ಕೊರೊನಾ ಸಂಕಟಕ್ಕೆ ಸಿಲುಕಿ ಗೃಹ ಬಂಧನಕ್ಕೆ ಒಳಗಾಗಿರುವ ಕೂಲಿ ಕಾರ್ಮಿಕರು, ಸರ್ಕಾರದ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ವೇಳೆ ವಸೂಲಿ ಮಾಡುತ್ತಿರುವ ಶುಲ್ಕದಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Advertisement

ನಗರದಲ್ಲಿ ಸುಮಾರು 12 ನ್ಯಾಯಬೆಲೆ ಅಂಗಡಿಗಳಿವೆ. ಒಂದು ಅಂಗಡಿಯಲ್ಲಿ 500ಕ್ಕೂ ಹೆಚ್ಚು ಬಿಪಿಎಲ್‌-ಎಪಿಎಲ್‌ ಪಡಿತರ ಚೀಟಿದಾರರಿದ್ದಾರೆ. ಏ.16 ಕಳೆದರೂ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆಗಿಲ್ಲ. ಈ ಮಧ್ಯೆ ಪ್ರತಿಯೊಬ್ಬ ಫಲಾನುಭವಿಯಿಂದ ಬೆರಳಿನ ಗುರುತು ದಾಖಲಿಸಿಕೊಳ್ಳಲು 20 ರೂ. ಹಾಗೂ ಪಡಿತರ ವಿತರಿಸುವಾಗ ಕಡ್ಡಾಯವಾಗಿ 20 ರೂ. ವಸೂಲಿ (ಕೆಲ ಅಂಗಡಿಗಳಲ್ಲಿ ರೂ.20 ಮಾತ್ರ) ಮಾಡಲಾಗುತ್ತಿದೆ. ಈ ಕುರಿತು ಪ್ರಶ್ನಿಸಿದವರಿಗೆ ಶುಲ್ಕ ಪಡೆಯದೇ ಪಡಿತರ ನೀಡಲಾಗುತ್ತಿದೆ ಎಂದು ಫಲಾನುಭವಿಗಳು ದೂರಿದ್ದಾರೆ.

ಕೂಲಿನಾಲಿ ಮಾಡಿ ಬದುಕುತ್ತಿದ್ದೆವು. ಶ್ರೀಮಂತರ ಮನೆಗಳಲ್ಲಿ, ಹೋಟೆಲ್‌, ಖಾನಾವಳಿಗಳಲ್ಲಿ ಕಸ-ಮುಸುರೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಈಗ ಕೆಲಸವೂ ಇಲ್ಲ, ಇತ್ತ ರೇಷನ್‌ ಅಂಗಡಿಯವರು ಪಡಿತರ ನೀಡಲು ವಿಳಂಬ ಮಾಡುತ್ತಿದ್ದಾರೆ. ಜತೆಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಬಿಪಿಎಲ್‌ ಫಲಾನುಭವಿ ವೃದ್ಧೆ ಕಮಲಾಬಾಯಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next