Advertisement

ಭತ್ತದ ಬೆಳೆ ಹಾನಿ ಪರಿಶೀಲಿಸಿದ ಶಾಸಕ ಮುದ್ನಾಳ

04:38 PM Apr 23, 2020 | Naveen |

ವಡಗೇರಾ: ಕಳೆದೆರಡು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ಬೆಳೆ ಹಾನಿ ಅನುಭವಿಸಿದ ಎಲ್ಲ ರೈತರಿಗೂ ಸರಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಭರವಸೆ ನೀಡಿದರು.

Advertisement

ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುನಮುಟಗಿ, ಬಸವಂತಪುರ, ಮದರಕಲ್‌, ಗ್ರಾಮಗಳಿಗೆ ಕೃಷಿ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆಯಷ್ಟೇ ನೂರಾರು ಎಕರೆ ಪ್ರದೇಶ ಬೆಳೆ ಆಲೆಕಲ್ಲು ಮಳೆಗೆ ಹಾನಿಯಾಗಿದೆ. ಇದೀಗ ಮತ್ತೆ ರೈತರು ಪ್ರಕೃತಿ ಮುನಿಸಿನಿಂದ ಹಾನಿ ಅನುಭವಿಸುವಂತಾಗಿದೆ. ಅಂದಾಜು 65 ಎಕರೆ ಭತ್ತದ ಬೆಳೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಸಂಪೂರ್ಣ ವರದಿ ಪಡೆದು ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಶ್ರೀನಿವಾಸರೆಡ್ಡಿ ಚನ್ನೂರು, ಮಲ್ಲನಗೌಡ ಪಾಟೀಲ ಹತ್ತಿಕುಣಿ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ, ಶಹಾಪುರ ತಹಶೀಲ್ದಾರ್‌ ಜಗನ್ನಾಥರೆಡ್ಡಿ, ಶಹಾಪುರ ಕೃಷಿ ಅಧಿಕಾರಿ ಗೌತಮ, ಕಂದಾಯ ನಿರೀಕ್ಷಕ ಬಸಯ್ಯ ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next