Advertisement
ವ್ಯಾನ ಮುದ್ರೆವ್ಯಾನ ಮುದ್ರೆಯಿಂದ ಚಿಂತೆ, ನಿದ್ರಾಹೀನತೆ, ತಲೆಭಾರ, ಇತ್ಯಾದಿಗಳ ನಿಯಂತ್ರಣ ಮಾಡಬಹುದು. ಈ ಮುದ್ರೆಯಲ್ಲಿ ವಾಯು ಮತ್ತು ಆಕಾಶ ತಣ್ತೀಗಳು ಅಗ್ನಿ ತತ್ತÌದೊಂದಿಗೆ ಜತೆಯಾಗಿ ಮನಸ್ಸು ಸ್ತಿಮಿತಕ್ಕೆ ಬರುತ್ತದೆ. ವಾಯುನಾಳಗಳ ಕಾರ್ಯ ಬಲಗೊಳ್ಳುತ್ತದೆ. ಶಿರಸ್ಸಿನಲ್ಲಿ ಉಂಟಾಗುವ ಜಡತ್ವ ನಿವಾರಣೆಯಾಗುತ್ತದೆ.
ತೋರು ಬೆರಳು ಮತ್ತು ಮಧ್ಯ ಬೆರಳುಗಳ ಅಗ್ರ ಭಾಗವನ್ನು ಹೆಬ್ಬೆರಳಿನ ತುದಿಗೆ ತಾಗಿಸಿ, ಉಂಗುರ ಬೆರಳನ್ನು ಹೆಬ್ಬೆರಳಿನ ಬುಡದಲ್ಲಿ ಮೃದುವಾಗಿ ಒತ್ತಿ ಹಿಡಿಯಿರಿ. ಕಿರುಬೆರಳು ನೇರವಾಗಿರಲಿ. ದಿನಕ್ಕೆ ಮೂರು ಬಾರಿ ಸುಮಾರು ಆರು ನಿಮಿಷಗಳ ಕಾಲ ಅಭ್ಯಾಸ ಮಾಡಿ.
Related Articles
ಮೈಗ್ರೇನ್ ತಲೆನೋವು, ಸೈನಸ್ ಇತ್ಯಾದಿ ಶ್ವಾಸಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಹಳ ಬೇಗ ನಿಯಂತ್ರಣಕ್ಕೆ ಬರುತ್ತವೆ. ಕಫ, ಶೀತದಿಂದ ಉಂಟಾಗುವ ತಲೆನೋವಿಗೂ ಸಹಕಾರಿ. ಇದರೊಂದಿಗೆ ಒಳ್ಳೆಯ ಆಹಾರ ಸೇವನೆ ಮಾಡಿ, ಜೀವನದಲ್ಲಿ ಪ್ರೀತಿ, ತಾಳ್ಮೆ, ಕ್ಷಮೆ ಕರ್ತವ್ಯಪರತೆ ಇರಲಿ. ನಿತ್ಯ ಪ್ರಾಣಾಯಾಮ ಮಾಡಿ.
Advertisement