Advertisement

ಭೌಗೊಳಿಕ ಮಾಹಿತಿ ವಿಜ್ಞಾನ ಕೋರ್ಸ್‌ ಆರಂಭಿಸಿದ ವಿವಿ

11:51 AM Sep 01, 2017 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಭೂಗೊಳಶಾಸ್ತ್ರ ವಿಭಾಗದಲ್ಲಿ ಆರಂಭಿಸಲಾಗಿರುವ ಭೌಗೊಳಿಕ ಮಾಹಿತಿ ವಿಜ್ಞಾನ ಪದವಿ ಕೋರ್ಸ್‌ ಅನ್ನು ಹಂಗಾಮಿ ಕುಲಪತಿ ಪ್ರೊ. ಎಚ್‌.ಎನ್‌.ರಮೇಶ್‌ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಅವರು, ಈ ಹೊಸ ಪದವಿ ಕಾರ್ಯಕ್ರಮ ಕಲಾ ವಿಭಾಗದಿಂದ ವಿಜ್ಞಾನ ವಿಭಾಗಕ್ಕೆ ಬಂದಿರುವ ಭೂಗೋಳಶಾಸ್ತ್ರ ವಿಷಯಕ್ಕೆ ಹೆಚ್ಚಿನ ತಾಂತ್ರಿಕ ಪ್ರಗತಿ ಒದಗಿಸಿರುವುದಾಗಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಅವಕಾಶ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕೆಂದು  ಸೂಚಿಸಿದರು.

ಕಲಸಚಿವ ಡಾ.ಬಿ.ಕೆ.ರವಿ ಮಾತನಾಡಿ, ಭೌಗೋಳಿಕ ಮಾಹಿತಿ ವಿಜ್ಞಾನದಲ್ಲಿ ಎಂಎಸ್ಸಿ ನಮ್ಮ ವಿಶ್ವವಿದ್ಯಾಲಯದಲ್ಲಿ  ಮಾತ್ರವಿದ್ದು, ಇದು ಸ್ವಯಂ-ಹಣಕಾಸು ಮೂಲಕ ಪರಿಚಯಿಸಲ್ಪಟ್ಟ ಏಕೈಕ ಸ್ನಾತಕೊತ್ತರ ಕಾರ್ಯಕ್ರಮವಾಗಿದೆ ಎಂದರು.

ಭೌಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅಶೋಕ್‌ ಡಿ. ಹಂಜಗಿ ಕೋರ್ಸ್‌ ಬಗ್ಗೆ ಮಾಹಿತಿ ನೀಡಿ, ಸರ್ಕಾರಿ ಏಜೆನ್ಸಿಗಳು, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಈ ಕೋರ್ಸ್‌ ನೆರವಾಗಲಿದೆ. ಈ ಪದವಿ ಕಾರ್ಯಕ್ರಮದಲ್ಲಿ 6 ತಿಂಗಳ ಇಂಟರ್ನಶಿಪ್‌ ತರಬೇತಿ ಇರುತ್ತದೆ ಎಂದು ಹೇಳಿದರು. ಹಿರಿಯ ಪ್ರಾಧ್ಯಾಪಕ ಪ್ರೊ.ಎ.ಎಸ್‌.ರಾಯಮನೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next