Advertisement

ಮತದಾನ ಖಾತ್ರಿಗೆ ವಿವಿ ಪ್ಯಾಟ್‌ ಬಳಕ

05:49 PM Apr 06, 2018 | Team Udayavani |

ಸುರಪುರ: ರಾಜ್ಯದಲ್ಲಿ ಈ ಬಾರಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದೊಂದಿಗೆ ಪ್ರಥಮ ಬಾರಿಗೆ ವಿವಿ ಪ್ಯಾಟ್‌ ಬಳಕೆ ಜಾರಿಗೆ ತರಲಾಗಿದ್ದು, ಮತದಾರರು ತಾವು ಚಲಾಯಿಸಿದ ಮತ ಖಾತ್ರಿ ಪಡಿಸಿಕೊಳ್ಳಬಹುದು. ಈ ಬಗ್ಗೆ ಸೆಕ್ಟರ್‌ ಆಫಿಸರ್‌ ಮತ್ತು ಚುನಾವಣಾ ಸ್ವೀಪ್‌ ಸಮಿತಿ ಎಲ್ಲಾ ಅಧಿಕಾರಿಗಳು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಎನ್‌. ಡೇವಿಡ್‌ ಹೇಳಿದರು.

Advertisement

2018ರ ವಿಧಾನಸಭಾ ಚುನಾವಣೆ ಅಂಗವಾಗಿ ತಹಶೀಲ್ದಾರ್‌ ಕಚೇರಿಯಲ್ಲಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸೆಕ್ಟರ್‌ ಆಫಿಸರ್‌ ಮತ್ತು ಸ್ವೀಪ್‌ ಸಮಿತಿಯ ಎಲ್ಲಾ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ
ಸಭೆಯಲ್ಲಿ ಅವರು ಮಾತನಾಡಿದರು. ಪ್ರಾತ್ಯಕ್ಷಿಕೆಯಲ್ಲಿ ತಾವು ಡಮ್ಮಿ ಮತದಾನ ಮಾಡಿ ಮತ ಚಲಾಯಿಸಿದ ಬಗ್ಗೆ ತಾವು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ನಂತರ ಈ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.

ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರು ವಾಸಿಯಾಗಿರುವ ಈ ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣೆ ಇಲಾಖೆ ತಮಗೆ ಬೇಕಾದ ಸಕಲ ನೆರವು ನೀಡುತ್ತದೆ. ಇದನ್ನು ಬಳಸಿಕೊಂಡು ಯಾರಿಗೂ ಹೆದರದೆ. ಒತ್ತಡಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು. 

ಬಿಇಎಲ್‌ ಸಂಸ್ಥೆಯ ಎಂಜಿನಿಯರ್‌ ನರೇಂದ್ರ ಕೌಶಿಕ ಮಾತನಾಡಿ, ಮತಯಂತ್ರದಲ್ಲಿ ಒಟ್ಟು 64 ಅಭ್ಯರ್ಥಿಗಳ ಹೆಸರು ಅಳವಡಿಸಬಹುದು. ವಿವಿ ಪ್ಯಾಟ್‌ನ್ನು ಮುಂಚಿತವಾಗಿ ಪರಿಶೀಸಿಲಿಸಿ ಬ್ಯಾಂಡ್‌ನಿಂದ ಶೀಲ್‌ ಮಾಡಲಾಗಿರುತ್ತದೆ.
ಮತ ಚಲಾಯಿಸಿದ 7 ಸೆಂಕಡ್‌ಗಳ ನಂತರ ಚಲಾವಣೆಯಾದ ಮತದ ಬಗ್ಗೆ ಖಾತರಿ ಪಡಿಸುತ್ತದೆ. ಜೊತೆಗೆ ಖಾತ್ರಿ ಬಗ್ಗೆ ಯಂತ್ರದಿಂದ ಚೀಟಿ ಹೊರ ಬರುತ್ತದೆ. ಆದರೆ ಇದು ಮತದಾರನಿಗೆ ನೀಡಲಾಗುವುದಿಲ್ಲ ಎಂದು
ಮಾಹಿತಿ ನೀಡಿದರು.

ಎಂಜಿನಿಯರ್‌ ಶಿವುಕುಮಾರ, ಮತಯಂತ್ರಗಳಾದ ಸಿಯು, ಬಿಯು, ವಿಎಸ್‌ಡಿಯು ಮತ್ತು ವಿವಿ ಪ್ಯಾಟ್‌ ಬಳಸುವ
ವಿಧಾನ ಮತ್ತು ತಾಂತ್ರಿಕ ತೊಂದರೆ ಕಂಡು ಬಂದಲ್ಲಿ ಅನುಸರಿಸುವ ಮಾರ್ಗೋಪಾಯ, ಪರಿಹಾರಗಳ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೆಲ ಅಧಿಕಾರಿಗಳ ಡಮ್ಮಿ ಮತ ಚಲಾಯಿಸಿ
ವಿವಿ ಪ್ಯಾಟ್‌ ಬಗ್ಗೆ ಖಾತ್ರಿ ಪಡಿಸಿಕೊಂಡರು. ಅಧಿಕಾರಿ ನಿಂಗಣ್ಣ ಬಿರೇದಾರ್‌, ರಾಜ್ಯ ಹಂತದ ತರಬೇತಿದಾರ ಹಣಮಂತ ಪೂಜಾರಿ ಇತರರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next