ಬೆಳಗಾವಿ: 2015ರ ಹೊಸ ಪಠ್ಯಕ್ರಮ ಸಿಬಿಸಿಎಸ್ (ಚಾಯ್ಸ ಬೇಸ್ಡ್ ಕ್ರೆಡಿಟ್ ಸಿಸ್ಟಂ) ಜಾರಿಯಾಗುವ ಮೊದಲು ಇದ್ದ ಸ್ಕೀಂನಲ್ಲಿ ಪ್ರವೇಶ ಪಡೆದಿರುವ, ಕೆಲವು ವಿಷಯ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್‌ಗೆ ಅವಕಾಶವಿಲ್ಲ.
ಆದರೆ, ಅಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಕ್ಸಿಟ್ ಸ್ಕೀಂ ಜಾರಿಗೊಳಿಸಲಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಕರಿಸಿದ್ದಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2010ರಲ್ಲಿಯ ನಾನ್ ಸಿಬಿಸಿಎಸ್ ಸ್ಕೀಂನ್ನು 2015ರಲ್ಲಿ ಸಿಬಿಸಿಎಸ್ ಎಂದು ಬದಲಾಯಿಸಲಾಗಿದೆ. ನಾನ್ ಸಿಬಿಸಿಎಸ್‌ನ ವಿದ್ಯಾರ್ಥಿಗಳು 2014ರಲ್ಲಿ ಪ್ರವೇಶ ಪಡೆದವರಿಗೆ ಪದವಿ ಪೂರ್ಣಗೊಳಿಸಲು 8 ವರ್ಷಗಳ ಕಾಲಾವಕಾಶ ನೀಡಲಾಗಿದೆ. 2022ರವರೆಗೂ ಅವರಿಗೆ ಅವಕಾಶವಿದೆ ಎಂದರು.
ಹೊಸ ಪಠ್ಯಕ್ರಮ ಸಿಬಿಸಿಎಸ್‌ನಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿಟಿಯು ಮಹತ್ವದ ನಿರ್ಣಯ ತೆಗೆದುಕೊಂಡಿದ್ದು, ಕ್ಯಾರಿ ಓವರ್‌ಗೆ ಅವಕಾಶ ನೀಡಬೇಕೆನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿತ್ತು. ಆದರೆ, ನಿಯಮಗಳ ಪ್ರಕಾರ ಅದಕ್ಕೆ ಅವಕಾಶವಿಲ್ಲ. ಯುಜಿಸಿ ನಿಯಮಗಳ ಪ್ರಕಾರವೇ ಎಕ್ಸಿಟ್ ಸ್ಕೀಂ ಮೂಲಕ ಅವರಿಗೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಏನಿದು ಎಕ್ಸಿಟ್ ಸ್ಕೀಂ: ಕಳೆದ ವರ್ಷದಲ್ಲಿ ನಾಲ್ಕಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾ ದವರಿಗೆ ಮುಂದಿನ ವರ್ಷಕ್ಕೆ ಹೋಗಲು ಅವಕಾಶವಿಲ್ಲ. ಮೊದಲ ವರ್ಷದ ಎಲ್ಲ ವಿಷಯಗಳಲ್ಲೂ ಉತ್ತೀರ್ಣರಾಗಿ 2ನೇ ವರ್ಷದಲ್ಲಿ ಮಾತ್ರ ನಾಲ್ಕು ವಿಷಯಗಳನ್ನು ಬಾಕಿ ಉಳಿಸಿಕೊಂಡವರು 5ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದು. ಆದರೆ, ಬಾಕಿ ಉಳಿಸಿಕೊಂಡಿರುವ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾದ ಬಳಿಕವೇ ಅವರಿಗೆ 5ನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶವಿದೆ.
ಮೊದಲ ಎರಡು ವರ್ಷದ ಎಲ್ಲ ವಿಷಯಗಳಲ್ಲೂ ಪಾಸಾಗಿ 3ನೇ ವರ್ಷದ್ದು ಬಾಕಿ ಉಳಿಸಿಕೊಂಡಿದ್ದರೆ 7ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದು. ಆದರೆ, ಬಾಕಿ ಉಳಿಸಿಕೊಂಡಿರುವ ಎಲ್ಲ ವಿಷಯಗಳಲ್ಲಿ ಉತ್ತೀರ್ಣ ಆಗುವವರೆಗೂ 7ನೇ ಸೆಮಿಸ್ಟರ್ ಪರೀಕ್ಷೆಗೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದರು.
ಬಿಇ ವಿದ್ಯಾರ್ಥಿಗಳಿಗೆ ಕನ್ನಡ ವಿಷಯ ವೊಂದನ್ನು ಕಡ್ಡಾಯಗೊಳಿಸಲಾಗಿದ್ದು, ಕನ್ನಡ ಕಲಿ ಎಂಬ ಪಠ್ಯ ವಿಷಯ ಇದಾಗಿದೆ. ಕನ್ನಡೇತರರಿಗೆ ಈ ವರ್ಷದಿಂದ 3 ಹಾಗೂ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪ್ರಾರಂಭವಾಗಲಿದೆ. ಪಠ್ಯ ಪುಸ್ತಕಗಳು ಬಹುತೇಕ ಪೂರ್ಣಗೊಂಡಿವೆ ಎಂದರು.
ಇನ್ನು ಫಲಿತಾಂಶ
ವಿಳಂಬ ಆಗಲ್ಲ
ವಿಟಿಯು ವಿದ್ಯಾರ್ಥಿಗಳ ಫಲಿತಾಂಶ ಈ ಮುಂಚೆ ವಿಳಂಬವಾಗಿದ್ದು ನಿಜ. ಇನ್ನು ಮುಂದೆ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸಾಫ್ಟವೇರ್ ಹಾಗೂ ಡೇಟಾ ಅಭಿವೃದಿಟಛಿ ಪಡಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಇನ್ನು ಮುಂದೆ ಫಲಿತಾಂಶ ವಿಳಂಬ ಆಗುವುದಿಲ್ಲ ಎಂದು ಕುಲಪತಿ ಸ್ಪಷ್ಟಪಡಿಸಿದರು.