Advertisement

ಮುಂಬರುವ ವರ್ಷದಿಂದ ವಿಟಿಯು ನೂತನ ಪಠ್ಯಕ್ರಮ

05:31 PM May 18, 2018 | Team Udayavani |

ಬೆಳಗಾವಿ: ಶೈಕ್ಷಣಿಕ ಕ್ಷೇತ್ರದಲ್ಲಿರುವ ತಂತ್ರಜ್ಞರು ಕೈಗಾರಿಕೋದ್ಯಮಿಗಳೊಂದಿಗೆ ಕೈಜೋಡಿಸುವ ಮೂಲಕ ಕೈಗಾರಿಕಾ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಬೆಳಗಾವಿಯ ಗೆಲಾಕ್ಸಿ ಮಷಿನರಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌. ಎಲ್ಯಾಂಗೊ ಹೇಳಿದರು.

Advertisement

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಕಲಬುರಗಿ ವಲಯಗಳ ಸಂಯೋಜಿತ ತಾಂತ್ರಿಕ ಮಹಾವಿದ್ಯಾಲಯಗಳ ಪ್ರಾಧ್ಯಾಪಕರಿಗೆ ಆಯೋಜಿಸಿದ್ದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನಿಗದಿಪಡಿಸಿದ ಮಾದರಿ ಪಠ್ಯಕ್ರಮದ ತರಬೇತಿ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯಮಿಗಳಿಗೆ ಅವಶ್ಯವಿರುವ ತಂತ್ರಜ್ಞಾನವನ್ನು ತಮ್ಮ ಪ್ರೊಜೆಕ್ಟ್ ಮೂಲಕ ವಿನ್ಯಾಸಗೊಳಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ಮಾತನಾಡಿ, ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾದರಿ ಪಠ್ಯಕ್ರಮ ನಿಗದಿಗೊಳಿಸಿದ್ದು, ಈ ಪಠ್ಯಕ್ರಮವನ್ನು 2018-19ರ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯ ಅಳವಡಿಸಲಿದೆ ಎಂದು ಹೇಳಿದರು. ವಿಟಿಯು ಕುಲಸಚಿವ ಡಾ. ಎಚ್‌. ಎನ್‌. ಜಗನ್ನಾಥ ರೆಡ್ಡಿ ಎಐಸಿಟಿಇ ಮಾದರಿ‌ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಹಣಕಾಸು ಅಧಿಕಾರಿ ಎಂ. ಎ. ಸಪ್ನಾ, ಬೆಳಗಾವಿ ವಿಟಿಯು ಪ್ರಾದೇಶಿಕ ಕಚೇರಿ ಪ್ರಭಾರಿ ನಿರ್ದೇಶಕ ಡಾ. ಎ.ವಿ. ಶಿವಾಪುರ, ಕಲಬುರಗಿ ವಿಟಿಯು ಪ್ರಾದೇಶಿಕ ಕಚೇರಿ ಪ್ರಭಾರಿ ನಿರ್ದೇಶಕ ಡಾ. ಬಸವರಾಜ ಗಾದಗೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next