Advertisement

ದುಪ್ಪಟ್ಟು ಕಾಂಚಾಣ ; ಹಳ್ಳಿ ಜನ ಹೈರಾಣ

04:02 PM Apr 08, 2021 | Team Udayavani |

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ಬಸ್‌ಗಳು ಇಲ್ಲದ ಪರಿಣಾಮ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಸಂಸ್ಥೆ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ ಮನವಿ ಮಾಡಿದ್ದಾರೆ.

Advertisement

ಇಲ್ಲಿನ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿದ ಅವರು, ನೌಕರರ ಬೇಡಿಕೆಗೆ ನನ್ನ ವಿರೋಧವಿಲ್ಲ. ಆದರೆ ಇದೀಗ ಕೋವಿಡ್‌-19, ಲಾಕ್‌ಡೌನ್‌ನಿಂದ ಸಾರಿಗೆ ಸಂಸ್ಥೆಗಳು ಸಾಕಷ್ಟು ಸಂಕಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ 6 ನೇ ವೇತನಕ್ಕೆ ಪಟ್ಟು ಹಿಡಿದಿರುವುದು ಸರಿಯಲ್ಲ. ಸರಕಾರ ನಿಮ್ಮ ಬೇಡಿಕೆ ಈಡೇರಿಸಲಿದೆ. ಸಾಮಾನ್ಯ ಜನರಿಗೆ ತೊಂದರೆ ನೀಡುವ ಬದಲು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದರು.

ವಿವಿಧ ಸಂಘಟನೆಗಳ ಪ್ರಮುಖರು ತಮ್ಮ ಸದಸ್ಯರನ್ನು ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಬೇಕು. ಬಸ್‌ಗಳು ಓಡದ ಸಂದರ್ಭದಲ್ಲಿ ಸರಕಾರ ವಿಶೇಷ ಅನುದಾನ ನೀಡಿ ಕೈ ಹಿಡಿಯುವ ಕೆಲಸ ಆಗಿದೆ. ಇದನ್ನು ಕಾರ್ಮಿಕರು ಮರೆಯಬಾರದು ಎಂದರು.

ಸರಕಾರ ಶೇ.8 ವೇತನ ಹೆಚ್ಚಳ ಮಾಡುತ್ತೇವೆ ಎನ್ನುವ ಮೂಲಕ ಸಾರಿಗೆ ನೌಕರರನ್ನು ಅವಮಾನ ಮಾಡುವ ಕೆಲಸ ಆಗಿದೆ. ಹಿಂದೆ ಶೇ.12.5 ಹೆಚ್ಚಿಸಿದ್ದಾರೆ. ಇದೀಗ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ಶೇ.8 ವೇತನ ಹೆಚ್ಚಳ ಮಾಡಿರುವುದು ನಾವು ಕೇಳುತ್ತಿರುವುದು ಭಿಕ್ಷೆಯಲ್ಲ ಎನ್ನುವ ಅಭಿಪ್ರಾಯ ವಿವಿಧ ಸಂಘಟನೆಗಳ ಪ್ರಮುಖ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಮುಖ್ಯ ಕಾರ್ಮಿಕ ಕಲ್ಯಾಣಾ ಧಿಕಾರಿ ಪಿ.ವೈ.ನಾಯಕ, ಡಿಸಿ ಎಚ್‌.ರಾಮನಗೌಡ್ರ, ಮುಖಂಡರಾದ ಆರ್‌. ಎಫ್‌.ಕವಳಿಕಾಯಿ, ಕಲಬಾವಿ, ಕಮಲದಿನ್ನಿ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next