Advertisement

ವಿ.ಎಸ್‌. ಕೊಕ್ಜೆ ವಿಎಚ್‌ಪಿ ಅಧ್ಯಕ್ಷ 

07:00 AM Apr 15, 2018 | Team Udayavani |

ಹೊಸದಿಲ್ಲಿ: ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆಂದು 52 ವರ್ಷಗಳಲ್ಲೇ ಮೊದಲ ಬಾರಿಗೆ ನಡೆದ ರಹಸ್ಯ ಮತದಾನದ ಫ‌ಲಿತಾಂಶ ಶನಿವಾರ ಹೊರಬಿದ್ದಿದ್ದು, ನ್ಯಾ.ವಿ.ಎಸ್‌.ಕೊಕ್ಜೆ ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ಇದಾದ ಒಂದೇ ಗಂಟೆಯಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲರಾದ ಕೊಕ್ಜೆ ಅವರು ತಮ್ಮ ಹೊಸ ತಂಡವನ್ನು ಘೋಷಿ ಸಿದ್ದು, ನಿರ್ಗಮಿತ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ ರನ್ನು ಈ ತಂಡದಿಂದ ಹೊರ ಗಿಟ್ಟಿದ್ದಾರೆ.  ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ತೊಗಾಡಿಯಾ, ವಿಎಚ್‌ಪಿಗೆ  ರಾಜೀನಾಮೆ ಕೊಟ್ಟಿದ್ದು, 16ರಿಂದ ಅನಿರ್ದಿಷ್ಟಾ ವಧಿ ಉಪವಾಸ ನಡೆಸುವುದಾಗಿ ಘೋಷಿಸಿದ್ದಾರೆ.

ಇದೇ ವೇಳೆ, ಕಾರ್ಯಾಧ್ಯಕ್ಷರಾಗಿ ಅಲೋಕ್‌ ಕುಮಾರ್‌, ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಅಶೋಕ್‌ ಚೌಗುಲೆ, ಪ್ರಧಾನ ಕಾರ್ಯದರ್ಶಿಯಾಗಿ ಮಿಲಿಂದ್‌ ಪರಾಂದೆ, ಜಂಟಿ ಪ್ರಧಾನ ಕಾರ್ಯದರ್ಶಿ ಯಾಗಿ ವಿನಾಯಕ ರಾವ್‌ ದೇಶಪಾಂಡೆ ನೇಮಕ ಗೊಂಡಿದ್ದಾರೆ. 192 ಮತಗಳ ಪೈಕಿ ಕೊಕ್ಜೆ ಅವರಿಗೆ 131 ಮತಗಳು ಸಿಕ್ಕಿದ್ದವು. ಇಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌, “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದೇ ನಮ್ಮ ಗುರಿ. ಮಂದಿರ ನಿರ್ಮಿಸಿಯೇ ತೀರುತ್ತೇವೆ. ಅಯೋಧ್ಯೆಯಲ್ಲಿ ಬಾಬರಿ ಎಂಬ ಹೆಸರಿನ ಮಸೀದಿಯೇ ಇರುವುದಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next