Advertisement
ವಯನಾಡು ಜಿಲ್ಲೆ ಅನಾಥಾಶ್ರಮವೊಂದರಲ್ಲಿ ಕಲಿಯುತ್ತಿದ್ದ 7 ಬಾಲಕಿಯರು ಲೈಂಗಿಕ ಶೋಷಣೆಗೆ ಗುರಿಯಾಗಿರುವ ಘಟನೆ ರಾಜ್ಯಾದ್ಯಂತ ಆಘಾತದ ಅಲೆಯೆಬ್ಬಿಸಿದೆ. ಇದೇ ವೇಳೆ ಪಾಲಕ್ಕಾಡ್ ಜಿಲ್ಲೆಯಲ್ಲಿ ಇಬ್ಬರು ಹದಿಹರೆಯದ ಸಹೋದರಿಯರು ಲೈಂಗಿಕ ಕಿರುಕುಳದಿಂದ ಬೇಸತ್ತು ಎರಡು ತಿಂಗಳ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರು ಮಂದಿ ಯನ್ನು ಬಂಧಿಸಿದ್ದಾರೆ. ಶಾಲೆಯಿಂದ ಹಾಸ್ಟೆಲ್‌ಗೆ ಹೋಗುವ ದಾರಿ ಮಧ್ಯೆ ಬಾಲಕಿಯರನ್ನು ಪುಸಲಾಯಿಸಿ ಮತ್ತು
ಬೆದರಿಕೆಯೊಡ್ಡಿ ಅತ್ಯಾಚಾರ ಎಸಗಲಾಗಿದೆ. ಅಂಗಡಿಯೇ ಕೇಂದ್ರ: ಈ ಪ್ರಕರಣದ ಕೇಂದ್ರ ಒಂದು ಅಂಗಡಿ. ಆರೋಪಿಗಳು ಬಾಲಕಿಯರಿಗೆ ಆಮಿಷಗಳನ್ನೊಡ್ಡಿ ಅಂಗಡಿಗೆ ಕರೆದುಕೊಂಡು ಹೋಗಿ ಅತ್ಯಾ ಚಾರ ಎಸಗುತ್ತಿದ್ದರು. ಅವರಿಗೆ ಮೊಬೈಲ್‌ನಲ್ಲಿ ಬ್ಲೂμಲ್ಮ್ ಗಳನ್ನು ತೋರಿಸುತ್ತಿದ್ದರು.
ಬಾಲಕಿಯರೆಲ್ಲ 14ರಿಂದ 15 ವರ್ಷದೊಳಗಿನವರು. ಓರ್ವ ಬಾಲಕಿ ಅಂಗಡಿಯೊಳಗಿಂದ ಅಳುಕುತ್ತಾ ಹೊರ ಬರುತ್ತಿರುವುದನ್ನು ಹಾಸ್ಟೆಲ್‌ನ ಸೆಕ್ಯುರಿಟಿ ಗಾರ್ಡ್ ನೋಡಿದಾಗ ಈ ಪ್ರಕರಣ ಬೆಳಕಗೆ ಬಂದಿದೆ. ಸೆಕ್ಯೂರಿಟಿ ಗಾರ್ಡ್ ಅಂಗಡಿಯಲ್ಲೇನಾಯಿತು ಎಂದು ಕೇಳಿದಾಗ ಆಕೆ ಎರಡು ತಿಂಗಳಿಂದ ನಡೆಯುತ್ತಿದ್ದ ಕರ್ಮಕಾಂಡವನ್ನು ತಿಳಿಸಿದ್ದಾಳೆ. ಕೂಡಲೇ ಅವರು ಹಾಸ್ಟೆಲ್ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಅಧಿಕಾರಿಗಳು ನೀಡಿದ ದೂರಿನ ಪ್ರಕಾರ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ ಸುಮಾರು 3 ತಿಂಗಳಿಂದ ಬಾಲಕಿಯರು ಇಲ್ಲಿ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ಪತ್ತೆಯಾಗಿದೆ.
Related Articles
Advertisement
ಒಂದು ವರ್ಷದ ಹಿಂದೆ ಮಗಳಿಗೆ ಸಂಬಂಧಿಕರೊಬ್ಬರು ಕಿರುಕುಳ ನೀಡಿದ್ದಾರೆ. ಅನಂತರ ನಾನು ಅವರಿಗೆ ಎಚ್ಚರಿಕೆ ನೀಡಿದ್ದೆ. ಆದರೆ ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ ಎಂದು ತಾಯಿ ಹೇಳಿದ್ದಾರೆ.