Advertisement

2014ಕ್ಕಿಂತ ಶೇ.2ರಷ್ಟು ಮತದಾನ ಏರಿಕೆ

09:38 PM Apr 19, 2019 | Team Udayavani |

ಮೈಸೂರು: ಹದಿನೇಳನೆ ಲೋಕಸಭೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಎರಡೂ ಜಿಲ್ಲೆಗಳ 9,44,577 (ಪುರುಷ), 9,49,702 ಮಹಿಳೆಯರು ಸೇರಿ ಒಟ್ಟು 18,94,372 ಮತದಾರರ ಪೈಕಿ, 6,64,712 (ಪುರುಷ), 6,47,203 ಮಹಿಳೆಯರು ಸೇರಿ 13,11,930 ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೇ.69.25ರಷ್ಟು ಮತದಾನವಾಗಿದೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಶೇ.67.30 ಮತದಾನವಾಗಿತ್ತು. ಈ ಬಾರಿ ಚುನಾವಣಾ ಆಯೋಗ, ಚುನಾವಣೆ ಘೋಷಣೆಯಾದ ದಿನದಿಂದ ನಿರಂತರವಾಗಿ ಕಡ್ಡಾಯ ಮತದಾನಕ್ಕೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ.2 ರಷ್ಟು ಮತದಾನ ಹೆಚ್ಚಳವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಹಿಂದಿನ 16 ಸಾರ್ವತ್ರಿಕ ಲೋಕಸಭಾ ಚುನಾವಣೆಗಳ ಪೈಕಿ 1989ರ ಚುನಾವಣೆಯಲ್ಲಿ ಶೇ.69.74 ಮತದಾನವಾಗಿರುವುದೇ ಇದುವರೆಗಿನ ದಾಖಲೆಯಾಗಿದೆ.

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ- 1,09,294 (ಪುರುಷ), 1,11,853 (ಮಹಿಳೆ), 10 (ಇತರೆ) ಸೇರಿದಂತೆ ಒಟ್ಟು 2,21,157 ಮತದಾರರ ಪೈಕಿ, 83,781 (ಪುರುಷ), 85,513 (ಮಹಿಳೆ) ಮತದಾನ ಮಾಡಿದ್ದು, ಒಟ್ಟಾರೆ 1,69,296 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.76.55 ಮತದಾನವಾಗಿದೆ.

ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,09,573 (ಪುರುಷ), 1,09,985 (ಮಹಿಳೆ), 15 ಇತರೆ ಸೇರಿದಂತೆ 2,19,573 ಮಂದಿ ಮತದಾನದ ಹಕ್ಕು ಹೊಂದಿದ್ದರು. ಈ ಪೈಕಿ 79,753 (ಪುರುಷ), 79,474 ಮಹಿಳೆಯರು ಹಕ್ಕು ಚಲಾಯಿಸಿದ್ದು, ಒಟ್ಟಾರೆ 1,59,227 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು ಶೇ.72.52 ಮತದಾನವಾಗಿದೆ.

Advertisement

ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 92,746 (ಪುರುಷ), 90 ,895 ಮಹಿಳಾ ಮತದಾರರು ಸೇರಿದಂತೆ 1,83,641 ಮಂದಿ ಮತದಾನದ ಹಕ್ಕು ಹೊಂದಿದ್ದರು. ಇವರಲ್ಲಿ 74,926 (ಪುರುಷ), 69,886 ಮಹಿಳೆಯರು ಸೇರಿದಂತೆ 1,44,812 ಮಂದಿ ಮತಚಲಾಯಿಸಿದ್ದು, ಶೇ.78.86 ಮತದಾನವಾಗಿದೆ.

ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 1,14,146 (ಪರುಷ), 1,12,770 ಮಹಿಳೆಯರು ಸೇರಿದಂತೆ 2,26,920 ಮಂದಿ ಮತದಾನದ ಹಕ್ಕು ಹೊಂದಿದ್ದರು. ಇವರಲ್ಲಿ 90,103 (ಪುರುಷ), 85,181 ಮಹಿಳೆಯರು ಸೇರಿ 1,75,284 ಮಂದಿ ಮತ ಚಲಾಯಿಸಿದ್ದು, ಶೇ.77.24ರಷ್ಟು ಮತದಾನವಾಗಿದೆ.

ಚಾಮುಂಡೇಶ್ವರಿ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 1,52,727 (ಪುರುಷ), 1,50,055 ಮಹಿಳೆಯರು ಸೇರಿ 3,02,782 ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ 1,11,178 (ಪುರುಷ), 1,05,848 ಮಹಿಳೆಯರು ಸೇರಿ 2,17,026 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.71.68 ಮತದಾನವಾಗಿದೆ.

ಚಾಮರಾಜ: ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ 1,16,370 (ಪುರುಷ), 1,16,929 ಮಹಿಳೆಯರು ಸೇರಿ 2,33,300 ಮತದಾರರಿದ್ದು, ಈ ಪೈಕಿ 71,320 (ಪುರುಷ), 68,488 ಮಹಿಳೆಯರು ಸೇರಿ 1,39,809 ಮಂದಿ ಮತದಾನ ಮಾಡಿದ್ದು, ಶೇ.59.93 ಮತದಾನವಾಗಿದೆ.

ಕೃಷ್ಣರಾಜ: ಕೃಷ್ಣರಾಜ ಕ್ಷೇತ್ರದಲ್ಲಿ 1,20,125 (ಪುರುಷ), 1,23,532 ಮಹಿಳೆಯರು ಸೇರಿ ಒಟ್ಟು 2,43,678 ಮತದಾರರ ಪೈಕಿ 73,788 (ಪುರುಷ), 73,119 ಮಹಿಳೆಯರು ಸೇರಿ 1,46,907 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.60.29ರಷ್ಟು ಮತದಾನವಾಗಿದೆ.

ನರಸಿಂಹರಾಜ: ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ 1,29,596 (ಪುರುಷ), 1,33,683 ಮಹಿಳೆಯರು ಸೇರಿ 2,63,321 ಮಂದಿ ಮತದಾನದ ಹಕ್ಕು ಹೊಂದಿದ್ದು, ಇವರಲ್ಲಿ 79,863 (ಪುರುಷ), 79,694 ಮಹಿಳೆಯರು ಸೇರಿ 1,59,569 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.60.60ರಷ್ಟು ಮತದಾನವಾಗಿದೆ.

ಮತಗಟ್ಟೆಗೆ ಬಾರದ ಇತರರು!: ಮಂಗಳಮುಖೀಯರು ಸೇರಿದಂತೆ ವಿಶೇಷ ವರ್ಗದವರಿಗೆ ಇತರೆ ಕಾಲಂನಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ಇತರೆ ವರ್ಗದವರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಉತ್ಸಾಹ ತೋರಿಲ್ಲ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 10 ಮಂದಿ, ವಿರಾಜಪೇಟೆ-15,ಹುಣಸೂರು-4,

ಚಾಮುಂಡೇಶ್ವರಿ-34, ಕೃಷ್ಣರಾಜ-21, ಚಾಮರಾಜ-1, ನರಸಿಂಹ ರಾಜ-42 ಮಂದಿ ಸೇರಿದಂತೆ ಎರಡೂ ಜಿಲ್ಲೆಗಳಲ್ಲಿ 127 ಮಂದಿ ಮತದಾನದ ಹಕ್ಕು ಹೊಂದಿದ್ದರು. ಈ ಪೈಕಿ ಚಾಮುಂಡೇಶ್ವರಿ, ಚಾಮರಾಜ ಕ್ಷೇತ್ರಗಳಲ್ಲಿ ತಲಾ ಒಬ್ಬರು, ನರಸಿಂಹರಾಜ ಕ್ಷೇತ್ರದಲ್ಲಿ 12 ಮಂದಿ ಸೇರಿದಂತೆ ಒಟ್ಟಾರೆ 14 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.

ಇದುವರೆಗೂ 70 ಗಡಿ ದಾಟದ ಮತದಾನ: ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಹಿಂದಿನ 16 ಸಾರ್ವತ್ರಿಕ ಲೋಕಸಭಾ ಚುನಾವಣೆಗಳ ಪೈಕಿ 1989ರ ಚುನಾವಣೆಯಲ್ಲಿ ಶೇ.69.74 ಮತದಾನವಾಗಿರುವುದೇ ಇದುವರೆಗಿನ ದಾಖಲೆಯಾಗಿದೆ. ಇದನ್ನು ಚುನಾವಣಾ ಆಯೋಗ ಅಂಕಿಅಂಶಗಳು ದೃಢಪಡಿಸುತ್ತವೆ.

1989ರ ಚುನಾವಣೆಯಲ್ಲಿ ಏಳು ಆಭ್ಯರ್ಥಿಗಳು ಕಣದಲ್ಲಿದ್ದರು. 10.52 ಲಕ್ಷ ಮತದಾರರಲ್ಲಿ 7.33 ಲಕ್ಷ ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದರು. ಆಗ ಜನರು ತಂಡೋಪತಂಡವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. ಆ ಚುನಾವಣೆ ಹೊರತುಪಡಿಸಿ ಉಳಿದೆಲ್ಲಾ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ.

ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯನ್ನು ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಅಷ್ಟಕಷ್ಟೆ ಎಂದು ಅಂಕಿ ಅಂಶಗಳು ಹೇಳುತ್ತವೆ. 1952 ರಲ್ಲಿ ನಡೆದ ದೇಶದ ಮೊದಲ ಚುನಾವಣೆಯಲ್ಲಿ ಅತೀ ಕಡಿಮೆ ಪ್ರಮಾಣ ಶೇ.48.91 ಮತದಾನವಾಗಿತ್ತು.

ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ 2009 ರಲ್ಲಿ ನಡೆದ ಚುನಾವಣೆಯಲ್ಲಿ ಶೇ.58.88 ಮತದಾನ ನಡೆದಿತ್ತು. ಆಗ ಎಚ್‌.ಡಿ.ಕೋಟೆ, ಕೆ.ಆರ್‌. ನಗರ ಬದಲು ಕೊಡಗು ಜಿಲ್ಲೆಯ ವಿರಾಜಪೇಟೆ, ಮಡಿಕೇರಿ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದವು.

Advertisement

Udayavani is now on Telegram. Click here to join our channel and stay updated with the latest news.

Next