Advertisement

ಎರಡು ರಾಜ್ಯಗಳಲ್ಲಿ ಇಂದು ಮತ ಹಬ್ಬ- ಛತ್ತೀಸ್‌ಗಢದಲ್ಲಿ 20, ಮಿಜೋರಾಂನಲ್ಲಿ ಎಲ್ಲ 40 ಕ್ಷೇತ್ರ

11:03 PM Nov 06, 2023 | Team Udayavani |

ಹೊಸದಿಲ್ಲಿ: ಭ್ರಷ್ಟಾಚಾರ, ಬೆಲೆಯೇರಿಕೆ, ಹಗರಣಗಳು, ರಾಜಕೀಯ ನಾಯಕರ ರ್ಯಾಲಿಗಳು, ವಾಗ್ಯುದ್ಧಗಳಿಗೆ ಸಾಕ್ಷಿ ಯಾಗಿದ್ದ ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನ ಮಂಗಳವಾರ ನಡೆಯಲಿದೆ. ನಕ್ಸಲ್‌ಪೀಡಿತ ಬಸ್ತಾರ್‌ ವಲಯ ಸೇರಿ ಒಟ್ಟು 20 ಕ್ಷೇತ್ರಗಳ 223 ಅಭ್ಯ ರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಇದೇ ವೇಳೆ, ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮಂಗಳವಾರ ಮತದಾನ ನಡೆಯಲಿದೆ.

Advertisement

ಛತ್ತೀಸ್‌ಗಢದಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ 40 ಸಾವಿರ ಸಿಬಂದಿ ಸೇರಿ ಒಟ್ಟು 60 ಸಾವಿರ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ದೀಪಕ್‌ ಬೈಜ್‌, ಸಚಿವರಾದ ಅಕ್ಬರ್‌, ಛವೀಂದ್ರ, ಬಿಜೆಪಿ ಯಿಂದ ಮಾಜಿ ಸಿಎಂ ರಮಣ್‌ ಸಿಂಗ್‌ ಸೇರಿ ಹಲವರ ಹಣೆಬರಹವನ್ನು ಮೊದಲ ಹಂತದಲ್ಲಿ ಮತದಾರರು ಬರೆಯಲಿದ್ದಾರೆ. ಬಿಜೆಪಿಯು “ಮೋದಿ ಗ್ಯಾರಂಟಿ” ಹೆಸರಲ್ಲಿ ಪ್ರಚಾರ ನಡೆಸಿದರೆ, ಕಾಂಗ್ರೆಸ್‌ ಬಘೇಲ್‌ ಸರಕಾರ‌ ಕೈಗೊಂಡ ಯೋಜ ನೆಗಳ ಹೆಸರಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಿದೆ. ಕೊನೇ ಕ್ಷಣದಲ್ಲಿ ಸಿಎಂ ಬಘೇಲ್‌ ವಿರುದ್ಧ ಕೇಳಿ ಬಂದ “ಮಹದೇವ ಆ್ಯಪ್‌ ಹಗರಣ’ದ ಕಳಂಕವು ಕಾಂಗ್ರೆಸ್‌ಗೆ ಬಾಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇನ್ನು, ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಶನಲ್‌ ಫ್ರಂಟ್‌, ವಿಪಕ್ಷ ಜೊರಾಂ ಪೀಪಲ್ಸ್‌ ಫ್ರಂಟ್‌ ಮತ್ತು ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 18 ಮಹಿಳೆಯರು ಸೇರಿ 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸ್ಫೋಟ: ಛತ್ತೀಸ್‌ಗಢದ ಕಾಂಕೇರ್‌ನಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ಇಬ್ಬರು ಮತಗಟ್ಟೆ ಸಿಬಂದಿ ಮತ್ತು ಬಿಎಸ್‌ಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next