Advertisement

ವೀರಗಾಸೆ ಕುಣಿತದೊಂದಿಗೆ ಮತದಾನ ಜಾಗೃತಿ

05:24 PM Apr 27, 2018 | |

ಸಿರುಗುಪ್ಪ: ಸಿರುಗುಪ್ಪ ಕ್ಷೇತ್ರದಲ್ಲಿ ಮತದಾನ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ತಾಲೂಕು ಆಡಳಿತದ ವತಿಯಿಂದ ವೀರಗಾಸೆ ಕುಣಿತದ ಮೂಲಕ ಗಮನ ಸೆಳೆಯಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಹಶೀಲ್ದಾರ್‌ ಎಸ್‌.ಪದ್ಮಕುಮಾರಿ ತಿಳಿಸಿದರು.

Advertisement

ನಗರದ ತಾಲೂಕು ಕ್ರೀಡಾಂಗಣದಲ್ಲಿ ಮತದಾನ ಜಾಗೃತಿಗಾಗಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆವರು, ಈಗಾಗಲೇ ಮತದಾನದ ಜಾಗೃತಿಗಾಗಿ ರಂಗೋಲಿ ಸ್ಪರ್ಧೆ, ಪಂಜಿನ ಮೆರವಣಿಗೆ, ಜಾಗೃತಿ ಜಾಥಾ ಮೂಲಕ ಮತದಾನದ ಜಾಗೃತಿ ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ ವಿವಿಧ ಮತಗಟ್ಟೆಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿರುವ ಪ್ರದೇಶಗಳಿಗೆ ತೆರಳಿ ಮತದಾನ ಜಾಗೃತಿ ಕಾರ್ಯ ಪ್ರತಿನಿತ್ಯ ನಿರಂತರವಾಗಿ ದಿನಕ್ಕೊಂದು ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗಳಿಗೆ ಇರುವ ಅಮೂಲ್ಯವಾದ ಮತದಾನದ ಹಕ್ಕಿನಿಂದ ವಂಚಿತರಾದರೆ ಅಭಿವೃದ್ಧಿಯ ದೃಷ್ಟಿಯಿಂದ ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.

ಸಂಡೂರು ತಾಲೂಕಿನ ತಾರಾನಗರ ಚಂದ್ರಶೇಖರಶಾಸ್ತ್ರಿ ತಂಡದಿಂದ ವೀರಾಗಸೆ ಕುಣಿತದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ತಾಲೂಕು ಸ್ವೀಪ್‌ ತಂಡದ ಅಧಿಕಾರಿ ಶಿವಪ್ಪ ಸುಬೇದಾರ್‌, ಸಿಡಿಪಿಒ ಉಷಾ, ಪೌರಾಯುಕ್ತ ಮರಿಲಿಂಗಪ್ಪ, ಶಿಕ್ಷಕ ವಿಜಯರಂಗಾರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next