Advertisement

ವಿಧಾನಪರಿಷತ್‌ ಚುನಾವಣೆ: ಇಂದು ಮತ ಎಣಿಕೆ

03:02 PM Jun 12, 2018 | Team Udayavani |

ಮಂಗಳೂರು: ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕರ ಹಾಗೂ ನೈಋತ್ಯ ಪದವೀಧರ ಕ್ಷೇತ್ರಗಳಿಗೆ ಜೂ. 8ರಂದು ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ಮೈಸೂರಿನ ಮಹಾರಾಣಿ ವಿಮೆನ್ಸ್‌ ಆ್ಯಂಡ್‌ ಬಿಸಿನೆಸ್‌ ಮೆನೇಜ್‌ಮೆಂಟ್‌ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆಗೆ ಸರ್ವ ಸಿದ್ಧತೆಗಳನ್ನು ಮಾಡಲಾಗಿದೆ.

Advertisement

ಎಲ್ಲ ಕ್ಷೇತ್ರಗಳ ಮತಗಟ್ಟೆಗಳಿಂದ ಮತಪೆಟ್ಟಿಗೆಗಳನ್ನು ಸೂಕ್ತ ಪೊಲೀಸ್‌ ಭದ್ರತೆಯೊಂದಿಗೆ ಮೈಸೂರಿನ ಮಹಾರಾಣಿ ವಿಮೆನ್ಸ್‌ ಆ್ಯಂಡ್‌ ಬಿಸಿನೆಸ್‌ ಮೆನೇಜ್‌ಮೆಂಟ್‌ ಕಾಲೇಜಿನಲ್ಲಿ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗಿದ್ದು, ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ, ಅಭ್ಯರ್ಥಿಗಳ ಹಾಗೂ ಕೌಂಟಿಂಗ್‌ ಏಜೆಂಟರ ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ. ಪದವೀಧರರ ಕ್ಷೇತ್ರದಲ್ಲಿ ಒಟ್ಟು 8 ಮಂದಿ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 12 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತ ಎಣಿಕೆ: ಒಟ್ಟು ಚಲಾವಣೆಯಾದ ಸಿಂಧು ಮತಗಳ ಪೈಕಿ ಅರ್ಧದಷ್ಟು ಮತಗಳು + ಒಂದು ಮತ (ಉದಾಹರಣೆಗೆ, ಒಟ್ಟು 6,000 ಸಿಂಧು ಮತಗಳು ಚಲಾವಣೆಯಾಗಿದ್ದರೆ ಆಗ 3,000 +1 ಒಂದು ಮತ) ಪ್ರಥಮ ಪ್ರಾಶಸ್ತÂದ ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಒಂದುವೇಳೆ ಪ್ರಥಮ ಹಂತದಲ್ಲಿ ಯಾರೂ ಈ ಕೋಟಾವನ್ನು ತಲುಪದಿದ್ದರೆ ಆಗ ಕಣದಲ್ಲಿರುವ ಕೊನೆಯ ಅಭ್ಯರ್ಥಿ ಪಡೆದಿರುವ ಸಿಂಧು ಮತಗಳಲ್ಲಿ ದ್ವಿತೀಯ ಪ್ರಾಶಸ್ತÂದ ಮತಗಳನ್ನು ಪರಿಗಣಿಸಲಾಗುವುದು. ಕೋಟಾ ತಲುಪುವ ವರೆಗೆ ಈ ರೀತಿಯ ಪ್ರಕ್ರಿಯೆ ನಡೆಯತ್ತಾ ಹೋಗುತ್ತದೆ. ಅಂತಿಮವಾಗಿ ಕೋಟಾವನ್ನು ಯಾರು ತಲುಪುತ್ತಾರೆಯೋ ಅವರನ್ನು ವಿಜಯಿ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ. ಪ್ರಥಮ ಪ್ರಾಶಸ್ತ್ಯದಲ್ಲೇ ಅಭ್ಯರ್ಥಿ ನಿಗದಿತ ಕೋಟಾದಷ್ಟು ಮತ ಪಡೆದರೆ ಮಧ್ಯಾಹ್ನದ ವೇಳೆಗೆ ಫಲಿತಾಂಶ ಘೋಷಣೆ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next