Advertisement

Mangaluru ಮತದಾರರ ನೋಂದಣಿ: ವೀಕ್ಷಕರಿಂದ ಪರಿಶೀಲನೆ

11:17 PM Dec 08, 2023 | Team Udayavani |

ಮಂಗಳೂರು: ಮತದಾರರ ಪಟ್ಟಿ ಸೇರ್ಪಡೆ ಅಭಿಯಾನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಚುನಾವಣಾ ಆಯೋಗದ ವೀಕ್ಷಕರಾಗಿರುವ ನೋಂದಣಿ ಇಲಾಖೆ ಮಹಾನಿರೀಕ್ಷಕಿ ಡಾ| ಬಿ.ಆರ್‌. ಮಮತಾ ಅವರು ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿ ಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಮತದಾರರ ಪಟ್ಟಿಗೆ ಸೇರ್ಪಡೆ, ಯುವಮತದಾರರ ನೋಂದಣಿ, ಮೃತಪಟ್ಟ ವರ ಹೆಸರು ತೆಗೆದುಹಾಕಲು ಕೈಗೊಂಡ ಕ್ರಮಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು.

ಬಳಿಕ ವೀಕ್ಷಕರು 9 ಮತಗಟ್ಟೆಗಳನ್ನು ಹೊಂದಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕೋಡಿಕಲ್‌ ಸರಕಾರಿ ಶಾಲೆ ಹಾಗೂ 11 ಮತಗಟ್ಟೆಗಳು ಇರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಿತಾನಿಯೋ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಬಿಎಲ್‌ಒಗಳೊಂದಿಗೆ ಸಮಾಲೋಚನೆ ನಡೆಸಿ ಮತದಾರರ ಪಟ್ಟಿಗೆ ಸೇರ್ಪಡೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದರು.

ದ.ಕ. ಜಿಲ್ಲೆಯಲ್ಲಿ ಮತದಾರರ ನೋಂದಣಿ ಪ್ರಕ್ರಿಯೆಗಳ ಪ್ರಗತಿಗೆ ಸಂತಸ ವ್ಯಕ್ತಪಡಿಸಿದ ವೀಕ್ಷಕಿ ಮಮತಾ, ಯುವ ಮತದಾರರ ನೋಂದಣಿಗೆ ಕಾಲೇಜುಗಳ ಮೂಲಕ ಇನ್ನಷ್ಟು ಅಭಿಯಾನ ನಡೆಸುವಂತೆ ತಿಳಿಸಿದರು. ಇದೇ ವೇಳೆ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮತದಾರರ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು.

ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್‌, ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌, ಮಹಾನಗರ ಪಾಲಿಕೆ ಉಪ ಆಯುಕ್ತೆ ರೇಖಾ ಶೆಟ್ಟಿ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next