Advertisement
2020 ಜ.1ಕ್ಕೆ 18 ವರ್ಷ ತುಂಬುವ ಯುವಕ, ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಜತೆಗೆ 18 ವರ್ಷ ತುಂಬಿದ್ದರೂ, ಇನ್ನೂ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳದವರು ಕೂಡ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
Related Articles
Advertisement
ಯುವ ಮತದಾರರ ಸಂಖ್ಯೆ: ರಾಜ್ಯದಲ್ಲಿ 10,19,550 ಯುವ ಮತದಾರರಿದ್ದು, ಈ ಅಭಿಯಾನದಲ್ಲಿ ಇನ್ನಷ್ಟು ಯುವ ಮತ ದಾರರು ಸೇರಿಕೊಳ್ಳುವ ಸಾಧ್ಯತೆ ಇದೆ. ಬೆಳಗಾವಿಯಲ್ಲಿ 82, 230, ಮೈಸೂರಿನಲ್ಲಿ 45,857, ರಾಯ ಚೂರಿನಲ್ಲಿ 36,185, ಬೆಂಗಳೂರು ನಗರದಲ್ಲಿ 42,584, ಉಡುಪಿಯಲ್ಲಿ 22,320, ದಕ್ಷಿಣ ಕನ್ನಡದಲ್ಲಿ 37,375 ಸೇರಿ ರಾಜ್ಯದಲ್ಲಿ ಒಟ್ಟು 10,19, 550 ಯುವ ಮತದಾರಿದ್ದಾರೆ. ಯುವ ಮತದಾರರು ಸೇರಿ ಒಟ್ಟಾರೆ ಯಾಗಿ ರಾಜ್ಯದಲ್ಲಿ 5,10,60,498 ಮತದಾರ ರಿದ್ದು, ಇದರಲ್ಲಿ 2,58,01,694 ಪುರುಷರು, 2,52,54,153 ಮಹಿಳೆ ಯರು, 465 ಇತರ ಮತದಾರರಿದ್ದಾರೆ ಎಂದು ವಿವರ ನೀಡಿದರು.
ಕೈಜೋಡಿಸಬೇಕು: ಮತದಾರರ ಪಟ್ಟಿ ನೋಂದಣಿ ಹಾಗೂ ಪರಿಷ್ಕರಣೆ ಕಾರ್ಯ ಈಗ ಆರಂಭವಾಗಿರುವುದರಿಂದ ರಾಜಕೀಯ ಪಕ್ಷದ ಏಜೆಂಟರು ನಮ್ಮ ಜತೆ ಸೇರಿಕೊಂಡರೆ, ಡಿಲೀಟ್ ಆಗಿರುವ ಅಥವಾ ಹೊಸದಾಗಿ ಸೇರಿಸಬೇಕಿರುವ ಮತದಾರರ ಮಾಹಿತಿ ಸುಲಭವಾಗಿ ಸಿಗಲಿದೆ ಎಂದರು.
ಡಿಲೀಟ್ ಮಾಡೋದು ಸುಲಭವಲ್ಲ: ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ಸ್ವಲ್ಪ ಕಠಿಣಗೊಳಿಸಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೊದಲು ನೋಟಿಫಿಕೇಷನ್ ಹೊರಡಿಸಲಾಗುತ್ತದೆ. ಇದಾದ ನಂತರ ಅವರ ಮನೆ ಬಾಗಿಲಿಗೆ ನೋಟಿಸ್ ಕೂಡ ಅಂಟಿಸಲಾಗುತ್ತದೆ. ನೋಟಿಸ್ ಅಂಟಿಸಿದ್ದನ್ನು ಅವರು ಗಮನಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕೇ ಅಥವಾ ಡಿಲೀಟ್ ಮಾಡುವ ಕ್ರಮ ಸರಿ ಇದೆಯೇ ಎಂಬುದನ್ನು ಖಚಿತಪಡಿಸಿದ ನಂತರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲಿದ್ದೇವೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.
ಉಪಚುನಾವಣೆ ಯಾವಾಗ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ನಾವು ಉಪಚುನಾವಣೆ ನಡೆಸಲು ಸಿದ್ಧರಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಅಲ್ಲಿನ ತೀರ್ಪು ನೋಡಿಕೊಂಡು ಕೇಂದ್ರ ಚುನಾವಣಾ ಆಯೋಗ ಮುನ್ನಡೆಯಬಹುದು.-ಸಂಜೀವ್ ಕುಮಾರ್, ಮುಖ್ಯಚುನಾವಣಾ ಆಯುಕ್ತ