Advertisement
“ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ- 2021’ರ ಅಂಗವಾಗಿ ಮತದಾರರ ಪಟ್ಟಿ ಯಲ್ಲಿ ಹೆಸರು ಸೇರ್ಪಡೆಗೆ ಚುನಾವಣ ಆಯೋಗ ವಿಶೇಷ ಅಭಿಯಾನ ಹಮ್ಮಿ ಕೊಂಡಿದೆ. ನ. 29, ಡಿ. 6 ಮತ್ತು ಡಿ. 13ರಂದು ರಾಜ್ಯವ್ಯಾಪಿ ಅಭಿಯಾನ ನಡೆಯಲಿದ್ದು, ಆಯಾ ದಿನ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಪ್ರತೀ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ಅಥವಾ ವಿಳಾಸ ಬದಲಾವಣೆ, ತಿದ್ದುಪಡಿಗಳಿಗೆ ಸಂಬಂಧಿಸಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನದ ಸಂಬಂಧ ಈಗಾಗಲೇ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತೀ ಮತಗಟ್ಟೆ ಅಧಿ ಕಾರಿಯ ವ್ಯಾಪ್ತಿಗೆ 300 ಮನೆಗಳು ಬರುತ್ತವೆ. ನಿಗದಿತ ದಿನಾಂಕಗಳ ವಿಶೇಷ ಅಭಿಯಾನದ ಹೊರತಾಗಿ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದ ಮನೆ ಮನೆ ಭೇಟಿ ಸಹ ನೀಡಲಿದ್ದಾರೆ. ಮತಗಟ್ಟೆ ಅಧಿಕಾರಿಗಳು ಮನೆಗೆ ಬರುತ್ತಾರೆ ಎಂದು ಕಾದು ಕುಳಿತುಕೊಳ್ಳದೆ ಮತಗಟ್ಟೆ ಕಚೇರಿಗೆ ತೆರಳಿ ಹೆಸರು ನೋಂದಣಿ ಮತ್ತು ಇನ್ನಿತರ ಬದಲಾವಣೆ ಮಾಡಿಕೊಳ್ಳುವಂತೆ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.
Related Articles
Advertisement
ಯುವ ಮತದಾರರು, ವಿಕಲಚೇತನ ಮತದಾರರನ್ನು ಗಮನ ದಲ್ಲಿಟ್ಟುಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ನಡೆಸ ಲಾಗುತ್ತಿದೆ. ಸಾಮಾನ್ಯ ಮತದಾರರು ಕೂಡ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮತದಾನ ಪ್ರತೀ ಪ್ರಜೆಯ ಸಾಂವಿಧಾನಿಕ ಹಕ್ಕು. ಆ ಹಕ್ಕಿಗೆ ಅರ್ಹರಾಗಲು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಆವಶ್ಯಕ.-ಡಾ| ಸಂಜೀವ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ