Advertisement

ಮತದಾರರ ಪಟ್ಟಿ ಅವಧಿ ವಿಸ್ತರಣೆ

10:55 PM Nov 24, 2019 | Lakshmi GovindaRaj |

ಬೆಂಗಳೂರು: ರಾಜ್ಯದ ವಿಧಾನಪರಿಷತ್ತಿನ ಆಗ್ನೇಯ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಈಶಾನ್ಯ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ತಯಾರಿಕೆ ಅವಧಿಯನ್ನು ವಿಸ್ತರಿಸಲಾಗಿದೆ. ಅದರಂತೆ ಡಿ.6ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿ ಸಲು ಅವಕಾಶವಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಮತದಾರರ ಕರಡು ಪಟ್ಟಿಯನ್ನು ಡಿ.7ಕ್ಕೆ ಪ್ರಕಟಿಸಲಾಗುತ್ತದೆ.

Advertisement

ಆಕ್ಷೇಪಣೆ ಹಾಗೂ ಮನವಿ ಸಲ್ಲಿಸಲು ಡಿ.7ರಿಂದ 23ರವರೆಗೆ ಅವಕಾಶ ಇರಲಿದೆ. ಆಕ್ಷೇಪಣೆಗಳ ಪರಿಶೀಲನೆ, ವಿಲೇವಾರಿ ಹಾಗೂ ಮತದಾರರ ಪಟ್ಟಿಯ ತಯಾರಿಗೆ ಮತ್ತು ಮುದ್ರಣ ಕಾರ್ಯ 2020ರ 10ರಂದು ನಡೆಯಲಿದ್ದು. ಜ.16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next