Advertisement

ಮನೆಯಿಂದಲೇ ಮತದಾನಕ್ಕೆ ಇಚ್ಛಿಸಿದ 329 ಮಂದಿ: ಡೀಸಿ

03:17 PM Apr 27, 2023 | Team Udayavani |

ಚಾಮರಾಜನಗರ: ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ ಜಿಲ್ಲೆಯ 80 ವರ್ಷ ಮೇಲ್ಪಟ್ಟ ವಯೋಮಾ ನದ 329 ಮಂದಿ ಹಿರಿಯ ನಾಗರಿಕರು, ದಿವ್ಯಾಂಗ ಮತದಾರರಿಗೆ ಏ.29, 30 ರಂದು ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ. ಎಸ್‌.ರಮೇಶ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಚೆ ಮತದಾನದ ಮೂಲಕ ಮತ ಚಲಾಯಿಸಲು ಜಿಲ್ಲೆಯಲ್ಲಿ ಹಿರಿಯ ನಾಗರಿಕರು, ದಿವ್ಯಾಂಗರು ಸೇರಿ ಒಟ್ಟು 329 ಮಂದಿಯಿಂದ ಕೋರಿಕೆ ಬಂದಿತ್ತು. ಇವರಲ್ಲಿ 107 ದಿವ್ಯಾಂಗರು, 222 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದಾರೆ. ಏಕ ಮಾದರಿಯಲ್ಲಿ 2 ದಿನ ಮತದಾನ ಪ್ರಕ್ರಿಯೆ ನಿಗದಿಪಡಿಸಲಾಗಿದೆ ಎಂದರು.

ಮತದಾನ ಪ್ರಕ್ರಿಯೆ: ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಗೆ ಒಬ್ಬರು ಮೈಕ್ರೋ ಅಬ್ಸರ್‌ ವರ್‌, ಒಬ್ಬರು ವೀಡಿಯೋಗ್ರಾಫ‌ರ್‌ ಹಾಗೂ ಇಬ್ಬರು ಪೋಲಿಂಗ್‌ ಅಧಿಕಾರಿಗಳನ್ನು ಒಳಗೊಂಡಂತೆ ತಂಡ ರಚಿಸಲಾಗಿದೆ. ಈ ತಂಡ ರೂಟ್‌ಮ್ಯಾಪ್‌ ಅನ್ನು ಮುಂಚಿತವಾಗಿ ಸಿದ್ಧಪಡಿಸಿ ಕೊಂಡಿದ್ದು, ಸೆಕ್ಟರ್‌ ಅಧಿಕಾರಿಗಳ ವಾಹನದಲ್ಲಿ ರೂಟ್‌ ಮ್ಯಾಪ್‌ನಂತೆ ಚುನಾವಣಾ ಆಯೋಗದ ಸೂಚನೆಗಳ ಅನ್ವಯ ಮತದಾನ ಪ್ರಕ್ರಿಯೆ ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇಚ್ಚಿಸಿದ್ದಾರೆ: ಜಿಲ್ಲೆಯ ಮತಪಟ್ಟಿಯಲ್ಲಿ 80 ಮತ್ತು ಮೇಲ್ಪಟ್ಟ ವಯೋಮಾನದ 23,301 ಜನ ಮತದಾರರು ಹಾಗೂ 11,977 ದಿವ್ಯಾಂಗ ಮತದಾರರಿದ್ದಾರೆ. ಎಲ್ಲಾ ಮತದಾರರಿಗೆ ಬಿಎಲ್‌ಒಗಳ ಮೂಲಕ ಶೇ.100ರಷ್ಟು 12ಡಿ (ನಿಗದಿತ ಪ್ರಪತ್ರ) ಅನುಬಂಧ ತಲುಪಿಸಲಾಗಿದೆ. ಇವರಲ್ಲಿ ಕ್ರಮವಾಗಿ 222 ಮಂದಿ 80 ವರ್ಷ ಮೇಲ್ಪಟ್ಟವರು, 107 ದಿವ್ಯಾಂಗ ಮತದಾರರು ಮನೆಯಿಂದಲೇ ಮತ ಚಲಾಯಿಸಲು ಇಚ್ಛಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಮತದಾರರು: ಏ.20ಕ್ಕೆ ಅನ್ವಯವಾಗು ವಂತೆ ಜಿಲ್ಲೆಯಲ್ಲಿ 8,61,489 ಮತದಾರರಿದ್ದಾರೆ. ಇದರಲ್ಲಿ 4,26,547 ಪುರುಷರು, 4,34,873 ಮಹಿಳಾ ಮತದಾರರಿದ್ದಾರೆ. ಹನೂರು ಕ್ಷೇತ್ರ 2,21,557, ಕೊಳ್ಳೇಗಾಲ ಕ್ಷೇತ್ರ 2,16,602, ಚಾಮರಾಜನಗರ ಕ್ಷೇತ್ರ 2,09,494, ಗುಂಡ್ಲುಪೇಟೆ ಕ್ಷೇತ್ರದಲ್ಲಿ 2,13,836 ಮತದಾರರಿದ್ದಾರೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ತಹಶೀ ಲ್ದಾರ್‌ ಬಸವರಾಜು, ಚುನಾವಣಾ ತಹಶೀಲ್ದಾರ್‌ ರವಿಕುಮಾರ್‌ ವಸ್ತ್ರದ್‌ ಇತರರು ಉಪಸ್ಥಿತರಿದ್ದರು.

Advertisement

ಪೋಸ್ಟಲ್‌ ವೋಟಿಂಗ್‌ ಸೆಂಟರ್‌ನಲ್ಲಿ ವ್ಯವಸ್ಥೆ: ಚುನಾವಣೆ ಹಾಗೂ ಇತರೆ ಅಗತ್ಯ ಸೇವೆಗಳಡಿ ಕರ್ತವ್ಯ ನಿರ್ವಹಿಸುತ್ತಿರುವ ಮತದಾನದ ಹಕ್ಕು ಹೊಂದಿರುವ ನೌಕರರು ಜಿಲ್ಲಾದ್ಯಂತ ಏಕ ಮಾದರಿಯಲ್ಲಿ ಮೇ 2, 3, 4 ರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಪೋಸ್ಟಲ್‌ ವೋಟಿಂಗ್‌ ಸೆಂಟರ್‌ನಲ್ಲಿ ಮತದಾನವನ್ನು ಚುನಾವಣಾ ಆಯೋಗ ನಿಗದಿಪಡಿಸಿದ ಮಾರ್ಗಸೂಚಿಗಳ ಅನ್ವಯ ಕ್ರಮವಹಿಸಲಾಗುತ್ತಿದೆ. ವಿವಿಧ ಅಗತ್ಯ ಸೇವಾ ವರ್ಗದಡಿ 262 ಮಂದಿ ಪಟ್ಟಿ ಪಡೆದಿದ್ದು ಮತ ಚಲಾಯಿಸಲು ಪೋಸ್ಟಲ್‌ ವೋಟಿಂಗ್‌ ಸೆಂಟರ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next