ಮೂಡಲಗಿ: ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಹೊಸ ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ. ರೈತರ ಬಗ್ಗೆ ಮೊದಲಿನಿಂದಲೂ ಅಪಾರ ಕಾಳಜಿ ಹೊಂದಿರುವ ರೈತನಾಯಕ ಬಿ.ಎಸ್ .ಯಡಿಯೂರಪ್ಪನವರು ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಅರಭಾಂವಿಮಠ, ಬಡಿಗವಾಡ, ಖಾನಟ್ಟಿ, ಮುನ್ಯಾಳ, ರಂಗಾಪುರ, ಕಮಲದಿನ್ನಿ, ಪಟಗುಂದಿ, ವಡೇರಹಟ್ಟಿ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ರೈತರು ಪಡೆದ 1 ಲಕ್ಷ ರೂ. ವರೆಗಿನ ಸಾಲಮನ್ನಾ ಮಾಡುವುದಾಗಿ ಹೇಳಿರುವುದರಿಂದ ರೈತ ಸಮೂಹಕ್ಕೆ ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುವುದು ಇಡಿ ರಾಜ್ಯದ ಜನತೆಯ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ನಮ್ಮ ಸರ್ಕಾರ ಇರುವುದರಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ. ಕೇಂದ್ರದಲ್ಲಿಯೂ ಪ್ರಧಾನಿ ಮೋದಿ ಅವರು ರೈತರ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಸರ್ವತೋಮುಖ ಏಳ್ಗೆಗಾಗಿ ಸೇವೆಯನ್ನು ನೋಡಿ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಮತದಾರರು ಅಂತಹ ವದಂತಿಗಳತ್ತ ಕಿವಿಗೊಡದಿರಿ ಎಂದರು. ಇಲ್ಲಿ ಬೆಳೆದ ಕಬ್ಬಿಗೆ ಅತಿ ಹೆಚ್ಚು ದರವನ್ನು ರೈತರಿಗೆ ನೀಡಲಾಗಿದೆ. ಸಕ್ಕರೆ ಬೆಲೆ ಕುಸಿತದ ಮಧ್ಯೆಯೂ ರೈತರ ಒಳಿತಿಗಾಗಿ ಪ್ರಭಾ ಶುಗರದಿಂದ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ. ದರ ನೀಡುವ ಮೂಲಕ ರಾಜ್ಯದಲ್ಲಿಯೇ ಆಗ್ರ ಸ್ಥಾನ ಪಡೆದಿದ್ದೇವೆ. ಆದರೆ ಕಾರ್ಖಾನೆ ಬಗ್ಗೆ ಕೆಲವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ರೈತರ ಹಿತದೃಷ್ಟಿಯೇ ನಮಗೆ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಮುಖಂಡರಾದ ಸಂತೋಷ ಸೋನವಾಲ್ಕರ, ವೀರಣ್ಣ ಹೊಸುರ, ಲಕ್ಷ್ಮಣ ಹುಚ್ಚರೆಡ್ಡಿ, ಬಸಪ್ಪ ಸಂಕನ್ನವರ, ಪ್ರಭಾ ಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಹಣಮಂತ ತೇರದಾಳ, ಹಣಮಂತ ಡೊಂಬರ, ಬಸು
ಬಡಗನ್ನವರ, ರಮೇಶ ಪಾಟೀಲ, ಬಾಬುರಾವ ನಾಯಿಕ, ಸಂಗಪ್ಪ ಸೂರನ್ನವರ, ಆನಂದರಾವ ನಾಯಿಕ, ಗೋವಿಂದ ವಂಟಗೂಡಿ, ರಾಮಣ್ಣ ಕಸ್ತೂರಿ, ಎಚ್.ವಿ. ನಾಯಿಕ, ತಮಣ್ಣ ಕೆಂಚರಡ್ಡಿ, ಚನಗೌಡ ಪಾಟೀಲ ಇತರರು ಇದ್ದರು.