Advertisement
ತಾಲೂಕಿನ ಗೌಡಗಾಂವನಲ್ಲಿ ಮತಯಾಚಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಮೊದಲಿಂತೆ ನೀರಿಗಾಗಿ ಪರದಾಡುವಕಾಲ ಈಗಿಲ್ಲ. ಎಲ್ಲ ಕಡೆ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ನಾನು ಮಾಡಿದ ನೀರಾವರಿ ಕ್ರಾಂತಿಯಿಂದ ಜನ ಜಾನುವಾರುಗಳಿಗೆ ಅನುಕೂಲವಾಗಿದೆ. ಈ ಭಾಗದಲ್ಲಿ ಹರಿಯುವ ಅಮರ್ಜಾ ನದಿ ಬೇಸಿಗೆಯಲ್ಲಿ ತುಂಬಿ ಭೀಮಾ ನದಿಗೆ ಸೇರುತ್ತಿತ್ತು. ಬೇಸಿಗೆಯಲ್ಲಿ ಒಣಗಿ ಅಂತರ್ಜಲ ಮಟ್ಟ ಕುಸಿಯುತ್ತಿತ್ತು. ನದಿಯಲ್ಲಿ ನೀರು ನಿಲ್ಲಿಸುವ ಕೆಲಸ ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಯೋಚಿಸಿ ನದಿಗೆ ಅಲ್ಲಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಿಸಿದ್ದರ ಫಲವಾಗಿ ಈಗ ನೀರು ನಿಂತಿದೆ. ಅಂತರ್ಜಲ ಮಟ್ಟ ಹೆಚ್ಚಳವಾಗಿದೆ ಎಂದು ಹೇಳಿದರು.
Related Articles
Advertisement