Advertisement

ಮಾತಿನ ಮತ, ಸಂದರ್ಶನ:  ಕೆ. ಪದ್ಮನಾಭ ಕೊಟ್ಟಾರಿ ಮಾಜಿ ಶಾಸಕರು, ವಿಟ್ಲ

01:03 PM Feb 26, 2018 | Team Udayavani |

ಜಿಲ್ಲೆಯ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಗೆಲುವು ಸಾಧ್ಯತೆ ಹೇಗೆ?
ಜನರು ಕಾಂಗ್ರೆಸ್‌ ಆಡಳಿತದಿಂದ ಬೇಸತ್ತಿದ್ದಾರೆ. ಜಿಲ್ಲೆಯಲ್ಲಿ ನಡೆದ ಎಲ್ಲ ಕೋಮು ಗಲಭೆ ಕಾಂಗ್ರೆಸ್‌ ಪ್ರೇರಿತ ಎಂದು ಜನರಿಗೆ ತಿಳಿದಿದೆ. ಬಿಜೆಪಿ ಆಡಳಿತ ಇದ್ದಾಗ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಇತ್ತು. ಜನರು ಶಾಂತಿಪ್ರಿಯರಾಗಿದ್ದು, ಬಿಜೆಪಿಯನ್ನು ಆಯ್ಕೆ ಮಾಡುವರು. ಕಾಂಗ್ರೆಸ್‌ ಹಿಂದೂಗಳನ್ನು ತುಳಿಯುತ್ತಿದೆ. ಒಂದು ವರ್ಗವನ್ನು ಓಲೈಸುತ್ತಿದೆ. ಇಂತಹ ಸಮಸ್ಯೆಗಳಿಂದ ಜನರು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಕಡೆಗೆ ನೋಡುತ್ತಿದ್ದಾರೆ.

Advertisement

ಬಂಟ್ವಾಳ ಕ್ಷೇತ್ರದಲ್ಲಿ ಬಹಳ ಅಭಿವೃದ್ಧಿ ಆಗಿದೆಯಲ್ಲ?
ಅಭಿವೃದ್ಧಿ ಮಾತ್ರ ಗೆಲುವಿಗೆ ಪೂರಕ ಎನ್ನುವಂತಿಲ್ಲ. ಕೇಂದ್ರ ಸರಕಾರ ತಂದಿರುವ ಜನಧನ್‌ ಯೋಜನೆ, ಬಡವರಿಗೆ ವಿಮೆ, ಬೇಟಿ ಬಚಾವೊ ಬೇಟಿ ಪಡಾವೊ, ಸುಕನ್ಯಾ ಸಮೃದ್ಧಿ ಯೋಜನೆಗಳು ಬಿಜೆಪಿ ಪರವಾಗಿ ಕೆಲಸ ಮಾಡಿವೆ. ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಸೃಷ್ಟಿಯಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ನಿರೀಕ್ಷೆ…?
ಯಾರು ಅಭ್ಯರ್ಥಿ ಆಗುತ್ತಾರೆ ಎಂಬುದನ್ನು ಹೈ ಕಮಾಂಡ್‌ ನಿರ್ಧರಿಸುತ್ತದೆ. ಬಂಟ್ವಾಳದಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿ ಯಾರೆಂದು ನಿರ್ಧರಿಸಿದ್ದಾರೆ. ಅವರ ಗೆಲುವಿಗೆ ಪ್ರಯತ್ನ, ಪ್ರಚಾರ, ಕೆಲಸ ಆರಂಭವಾಗಿವೆ.

ರಾಜ್ಯ ಸರಕಾರ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿರುವಾಗ ಚುನಾವಣೆಯಲ್ಲಿ ಪರಿಣಾಮ ಪ್ರತಿಕೂಲ ಆಗದೆ?
ಸರಕಾರದ ಬಹುತೇಕ ಸಚಿವರು ಗೂಂಡಾ ರಾಜಕೀಯದಲ್ಲಿ ನಿರತರು. ಅವರ ಮಕ್ಕಳ ಹಗರಣಗಳು ದಿನನಿತ್ಯ ಕೇಳಿ ಬರುತ್ತಿವೆ. ಮುಖ್ಯಮಂತ್ರಿಗಳೇ ಗೂಂಡಾ ರಾಜಕೀಯವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಜನರು ಬೇಸತ್ತಿದ್ದಾರೆ, ಬಿಜೆಪಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಇಂದಿನ ಸನ್ನಿವೇಶ ಬಿಜೆಪಿಗೆ ಅನುಕೂಲವಾಗಿ ಕೂಡಿಬಂದಿದೆ.

ರಾಜ್ಯದಲ್ಲಿ ಬಿಜೆಪಿ ಕೊಡುಗೆ ಏನಿದೆ?
ದೇಶದಲ್ಲಿ ಮೋದಿ ಚಿಂತನೆಗಳನ್ನು ಜನರು ಒಪ್ಪಿದ್ದಾರೆ. ಯುವ ಜನತೆಗೆ ಕೌಶಲ ಅಭಿವೃದ್ಧಿ ಯೋಜನೆಯ ಮೂಲಕ ಉದ್ಯೋಗ ಅವಕಾಶ ಸೃಷ್ಟಿಯಾಗಿದೆ. ಕನಿಷ್ಠ ಐವತ್ತು ಸಹಸ್ರದಿಂದ ಐದು ಲಕ್ಷ ತನಕ ಸಾಲದ ಯೋಜನೆ ಈ ಕೌಶಲ ಅಭಿವೃದ್ಧಿಯಲ್ಲಿದೆ. ಅನ್ನ ಭಾಗ್ಯದಲ್ಲಿ 29 ರೂ. ಕೇಂದ್ರ ಸರಕಾರ ನೀಡುವ ಅನುದಾನ. ಇದಲ್ಲದೆ ಇತರ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಬೇಕಾಗಿದೆ.

Advertisement

„ರಾಜಾ ಬಂಟ್ವಾಳ 

Advertisement

Udayavani is now on Telegram. Click here to join our channel and stay updated with the latest news.

Next