Advertisement
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 31 ಸ್ಥಾನಗಳ ಪೈಕಿ ಕೇವಲ 14 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಪಕ್ಷ ಅರ್ಹರಾದ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು, 14 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Related Articles
Advertisement
ಅರ್ಹರಿಗೆ ಮತ ನೀಡಿ: ಕಳೆದ ಚುನಾವಣೆಯಲ್ಲಿ ಮತದಾರರು ಯಾವುದೇ ಪಕ್ಷಕ್ಕೂ ಸ್ಪಷ್ಟಬಹುಮತ ಕೊಟ್ಟಿಲ್ಲ. ಈ ಬಾರಿ ಮತದಾರರು ಜೆಡಿಎಸ್‌ಗೆ ಹೆಚ್ಚು ಸ್ಥಾನಗಳಲ್ಲಿ ಗೆಲುವು ತಂದುಕೊಡುವ ವಿಶ್ವಾಸ ಇದೆ. ಹಿಂದಿನ ಆಡಳಿತ ಮಂಡಳಿ ಬಗ್ಗೆ ಜನರಲ್ಲಿ ಬೇಸರ ಇದ್ದು, ಜಕ್ಕಲಮಡಗು ಜಲಾಶಯದ ಸಮಸ್ಯೆ ಎದುರಾದಾಗ ಈ ಹಿಂದೆ ಅಲಂಗೂರು ಶ್ರೀನಿವಾಸ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಸಮಸ್ಯೆ ಬಗೆಹರಿಸಿದರು. ಅದೇ ನಾನು ಶಾಸಕನಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು.
ವಾಣಿಜ್ಯ ಮಳಿಗೆಗಳ ಹಂಚಿಕೆ ಆಗಿದೆ. ನಗರದ ಜನತೆ ಯಾವುದೇ ಆಸೆ, ಅಮಿಷಗಳಿಗೆ ಬಲಿಯಾಗದೇ ತಮ್ಮ ಮತವನ್ನು ಅರ್ಹರಿಗೆ ನೀಡಬೇಕೆಂದು ಮನವಿ ಮಾಡಿದರು. ಜೆಡಿಎಸ್ ಕಾರ್ಯಾಧ್ಯಕ್ಷ ಅವುಲುಕೊಂಡರಾಯಪ್ಪ, ಜಿಪಂ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ಮಾಜಿ ನಗರಸಭಾ ಅಧ್ಯಕ್ಷರಾದ ಭಾಸ್ಕರ್, ಅಭ್ಯರ್ಥಿಗಳಾದ ಆರ್.ಮಟಮಪ್ಪ, ಕಿಸಾನ್ ಕೃಷ್ಣಪ್ಪ, ವೀಣಾ, ಹಿರಿಯ ಮುಖಂಡರಾದ ಸಾಧಿಕ್, ಅನ್ವರ್, ವೆಂಕಟೇಶ್ ಇತರರು ಇದ್ದರು.
ಒಳ ಒಪ್ಪಂದ ಇಲ್ಲ, ಬಹಿರಂಗವಾಗಿ ಸೀಟು ಹೊಂದಾಣಿಕೆ: ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ನಗರಸಭಾ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿರುವ ಕುರಿತು ಶಾಸಕ ಡಾ.ಕೆ.ಸುಧಾಕರ್ ಟೀಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಕೆ.ಪಿ.ಬಚ್ಚೇಗೌಡ, ಒಳ ಒಪ್ಪಂದವೇನು ಇಲ್ಲ. ಎಲ್ಲರಿಗೂ ಗೊತ್ತಿರುವ ವಿಚಾರ.
ನಮ್ಮ ಪಕ್ಷ ಜಾತ್ಯತೀತ ಪಕ್ಷ. ನಾವು 14 ಕಡೆ ಮಾತ್ರ ಸ್ಪರ್ಧಿಸಿದ್ದೇವೆ. ಉಳಿದ ಕಡೆ ಕಾಂಗ್ರೆಸ್ ಮತ ಕೊಡಿ ಎಂದು ನಾವೇ ಹೇಳುತ್ತಿದ್ದೇವೆ. ಬಹಳಷ್ಟು ವಾರ್ಡ್‌ಗಳಲ್ಲಿ ಅವರು ನಮಗೆ ಸಹಾಯ ಮಾಡುತ್ತಿದ್ದಾರೆ. ನಾವು ಅವರಿಗೆ ಕೆಲವು ವಾರ್ಡ್‌ಗಳನ್ನು ಬಿಟ್ಟುಕೊಂಡಿದ್ದೇವೆ. ಇದು ಒಳ್ಳ ಒಪ್ಪಂದ ಅಲ್ಲ. ಇದು ಬಹಿರಂಗ ವಿಚಾರ ಎಂದರು.